ಸೌರವ್ ಗಂಗೂಲಿಗೆ ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ: ಮೋದಿಗೆ ಮಮತಾ ಬ್ಯಾನರ್ಜಿ ಮನವಿ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿರುವ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಅಧಿಕಾರಾವಧಿ ಈ ವಾರ ಕೊನೆಗೊಳ್ಳಲಿದೆ. ಭಾರತದ ಮಾಜಿ ಆಲ್‌ರೌಂಡರ್ ರೋಜರ್ ಬಿನ್ನಿ ಮುಂದಿನ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ್ರೂ ಸಹ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

ದಾದಾ ಕುರಿತಾಗಿ ಇಡೀ ಜಗತ್ತೇ ಹೆಮ್ಮೆ ಪಡುತ್ತದೆ
ಗಂಗೂಲಿ ಅವರನ್ನು ಬೆಂಬಲಿಸಿ ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಐಸಿಸಿ ಅಧ್ಯಕ್ಷರಾಗಲು ಚುನಾವಣೆಗೆ ಸ್ಪರ್ಧಿಸಲು ಗಂಗೂಲಿಗೆ ಅವಕಾಶ ನೀಡಲು ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಗೆ ಮನವಿ ಮಾಡಿದರು. ಸೌರವ್ ಗಂಗೂಲಿ ಬಗ್ಗೆ ಜಗತ್ತು ಹೆಮ್ಮೆ ಪಡುತ್ತಿದೆ. ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಆಟಗಾರ ಮತ್ತು ಉತ್ತಮ ಆಡಳಿತಗಾರ ಎಂದು ಸಾಬೀತುಪಡಿಸಿದ್ದಾರೆ. ಅಮಿತ್ ಶಾ ಪುತ್ರನಿಗೆ ಮೂರು ವರ್ಷಗಳ ಅಧಿಕಾರಾವಧಿ ನೀಡಲಾಗಿದೆ. ಸೌರವ್ ಗಂಗೂಲಿಗೆ ಐಸಿಸಿ ಹೋಗಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.
ಸೌರವ್ ಐಸಿಸಿಗೆ ಹೋಗಲು ಅರ್ಹರು ಎಂದ ಮಮತಾ ಬ್ಯಾನರ್ಜಿ
ಸೌರವ್ ಅವರು ಐಸಿಸಿಗೆ ಹೋಗಲು ಅರ್ಹರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ''ಸೌರವ್ ಅವರು ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ರೆ ಪ್ರಧಾನಿಗೆ ನನ್ನ ನಮ್ರ ನಮನಗಳು. ಸೌರವ್ ಗಂಗೂಲಿ ಸೋತಿದ್ದನ್ನು ನೋಡಿ ನನಗೆ ಆಘಾತವಾಗಿದೆ. ಇದನ್ನು ರಾಜಕೀಯವಾಗಿ ಮತ್ತು ಪ್ರತೀಕಾರವಾಗಿ ತೆಗೆದುಕೊಳ್ಳಬೇಡಿ. ಅವರು ರಾಜಕಾರಣಿಯಲ್ಲ. ಕ್ರಿಕೆಟ್‌ಗಾಗಿ ಆತನಿಗೆ ಅವಕಾಶ ಕೊಡಿ'' ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.
ಭಾರತ vs ನ್ಯೂಜಿಲೆಂಡ್ ಅಭ್ಯಾಸ ಪಂದ್ಯ: ಪ್ರಿವ್ಯೂ, ಪ್ಲೇಯಿಂಗ್ 11

ದಾದಾಗೆ ಗಾಳ ಹಾಕಲು ಪ್ರಯತ್ನಿಸಿತ್ತಾ ಬಿಜೆಪಿ?
ಈ ಪರಿಸ್ಥಿತಿಯಲ್ಲಿ ಗಂಗೂಲಿ ಅವರು ಬಿಜೆಪಿಗೆ ಸೇರದ ಕಾರಣ ಎರಡನೇ ಬಾರಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ನೀಡದೆ ಪಕ್ಷವು ಅವಮಾನ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಕುನಾಲ್ ಘೋಷ್ ಮಾತನಾಡಿ, ಕಳೆದ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಸೌರವ್ ಗಂಗೂಲಿ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿಯನ್ನು ಜನರಲ್ಲಿ ಹರಡಲು ಬಿಜೆಪಿ ಯತ್ನಿಸಿತ್ತು.
ಕಳೆದ ಮೇ ತಿಂಗಳಲ್ಲಿ ಗಂಗೂಲಿ ಅವರ ಮನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಔತಣಕೂಟವನ್ನು ಉಲ್ಲೇಖಿಸಿದ ಕುನಾಲ್ ಘೋಷ್, ಗಂಗೂಲಿ ಅವರು ಪಕ್ಷಕ್ಕೆ ಸೇರದ ಕಾರಣ ಪಕ್ಷವು ರಾಜಕೀಯವಾಗಿ ಅವರನ್ನು ಅವಮಾನಿಸಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಜಯಶಾ ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾದಾಗ ಗಂಗೂಲಿಯನ್ನು ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂದು ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ.
ಸುನಿಲ್ ಗವಾಸ್ಕರ್ ಆಟೋಗ್ರಾಫ್ ಪಡೆದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ಟಿಎಂಸಿ ದಾಳಿಗೆ ಬಿಜೆಪಿ ಪ್ರತಿದಾಳಿ
ಇನ್ನು ಈ ಟೀಕೆಗಳಿಗೆ ಉತ್ತರಿಸಿದ ಬಿಜೆಪಿ, ತೃಣಮೂಲ ಕಾಂಗ್ರೆಸ್ ಪಕ್ಷದ ಆರೋಪಗಳು ಆಧಾರರಹಿತವಾಗಿವೆ. ಸೌರವ್ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಎಂದಿಗೂ ಪ್ರಯತ್ನಿಸಲಿಲ್ಲ ಎಂದು ವಿವರಿಸಲಾಗಿದೆ. ಏತನ್ಮಧ್ಯೆ, ಶೀಘ್ರದಲ್ಲೇ ಐಸಿಸಿ ಅಧ್ಯಕ್ಷರ ಚುನಾವಣೆ ನಡೆಯಲಿರುವ ಕಾರಣ, ಗಂಗೂಲಿ ಬಿಸಿಸಿಐ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತೆ ಮುಂದಾಗಲಿಲ್ಲ ಎಂದು ಸಮರ್ಥಿತಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications