For Quick Alerts
ALLOW NOTIFICATIONS  
For Daily Alerts
 

West Indies: ಪಾಕ್‌ ವಿರುದ್ಧದ ಎರಡು ಟೆಸ್ಟ್‌ಗೆ ವಿಂಡೀಸ್ ತಂಡ ಪ್ರಕಟ

ಪಾಕಿಸ್ತಾನ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್‌ ಪಂದ್ಯಗಳಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಪ್ರಕಟಿತ ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರು ಸ್ಥಾನ ಪಡೆದಿದ್ದಾರೆ. ಭರವಸೆಯ ಆಟಗಾರ ಕ್ರೇಗ್ ಬ್ರಾಥ್‌ವೈಟ್ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಗುಡಾಕೇಶ್ ಮೋತಿ ಸ್ಪಿನ್ ಬೌಲರ್‌ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಗ್ಲೋಬಲ್‌ ಸೂಪರ್ ಲೀಗ್‌ನ ಭಾಗವಾಗಿದ್ದರಿಂದ ತವರಿನಲ್ಲಿ ಬಾಂಗ್ಲಾ ವಿರುದ್ಧ ಸೀಮಿತ ಓವರ್‌ಗಳ ಪಂದ್ಯದಲ್ಲಿ ಮೈದಾನಕ್ಕೆ ಇಳಿದಿರಲಿಲ್ಲ.

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಫ್‌ ಭಾಗವಾಗಿರುವ ಈ ಸರಣಿಗಾಗಿ ವಿಂಡೀಸ್ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೀಮಿತ ಓವರ್‌ಗಳ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಅಮೀರ್ ಜಂಗು ಅವವರರಿಗೆ ಅವಕಾಶ ಸಿಕ್ಕಿದೆ.
ಕೆಲ ದಿನಗಳಿಂದ ದೇಶಿ ಕ್ರಿಕೆಟ್ ನಲ್ಲಿ ದಿಟ್ಟ ಪ್ರದರ್ಶನ ತೋರಿದ ಅವರು ತಮ್ಮ ಆಟದ ಮೂಲಕ ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ದೇಶೀಯ ಪಂದ್ಯಾವಳಿಯಲ್ಲಿ ಅವರು ಐದು ಪಂದ್ಯಗಳಲ್ಲಿ 63.50 ಸರಾಸರಿಯಲ್ಲಿ ಎರಡು ಶತಕಗಳು ಮತ್ತು ಒಂದು ಅರ್ಧ ಶತಕ ಸೇರಿದಂತೆ 500 ರನ್ ಗಳಿಸಿದರು. ಅಮೀರ್ ಜಂಗು ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ಮಿಂಚಿದರು.

West Indies Announce Test Squad for Pakistan Series Gudakesh Moti Returns Amir Jangoo Set for Debut

ವೇಗದ ಬೌಲರ್‌ಗಳಿಗೆ ಗೇಟ್ ಪಾಸ್

ಭರವಸೆಯ ವೇಗದ ಬೌಲರ್ ಶಮರ್ ಜೋಸೆಫ್ ಅವರನ್ನು ಟೆಸ್ಟ್‌ ತಂಡದಿಂದ ಕೈ ಬಿಡಲಾಗಿದೆ. ಇವರು ಗಾಯದ ಸಮಸ್ಯೆ ಎದಿರುಸುತ್ತಿದ್ದರಿಂದ ಇವರನ್ನು ತಂಡದಿಂದ ಕೈ ಬಿಡಲಾಗಿದೆ. ಹೀಗಾಗಿ ಇವರನ್ನು ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಕೈ ಬಿಡಲಾಗಿದೆ. ಇನ್ನು ಆರ್‌ಸಿಬಿ ತಂಡದ ಮಾಜಿ ಆಟಗಾರ ಅಲ್ಜಾರಿ ಜೋಸೆಫ್‌ ಸಹ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ.

ವೆಸ್ಟ್ ಇಂಡೀಸ್ ಮುಖ್ಯ ಕೋಚ್ ಆಂಡ್ರೆ ಕೊಲ್ಲಿ ಮಾತನಾಡಿ, ಅಮೀರ್ ಜಂಗು ದೇಶೀಯ ಕ್ರಿಕೆಟ್‌ನ ಸ್ವರೂಪಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಈ ಮೂಲಕ ತಮ್ಮ ಆಟವನ್ನು ಸಾಬೀತು ಪಡಿಸಿದ್ದಾರೆ. ಹೀಗಾಗಿ ಅವರನ್ನು ಟೆಸ್ಟ್‌ ತಂಡದಲ್ಲೂ ಸೇರಿಸಿಕೊಳ್ಳಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಬಾಂಗ್ಲಾ ವಿರುದ್ಧ ಟೆಸ್ಟ್‌ ಸರಣಿ ಆಡಲಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್‌ಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೋಶುವಾ ಡಾ ಸಿಲ್ವಾ (ಉಪನಾಯಕ), ಅಲೆಕ್ ಅಥಾನಾಜೆ, ಕೇಸಿ ಕಾರ್ಟಿ, ಜಸ್ಟಿನ್ ಗ್ರೀವ್ಸ್, ಕ್ವಾಮ್ ಹಾಡ್ಜ್, ಟೆವಿನ್ ಇಮ್ಲಾಚ್, ಅಮೀರ್ ಜಂಗು, ಮೈಕೆಲ್ ಲೂಯಿಸ್, ಗುಡಕೇಶ್ ಮೋತಿ, ಆಂಡರ್ಸನ್ ಫಿಲಿಪ್, ಕೆಮರ್ ರೋಚ್, ಕೆವಿನ್ ಸಿನ್‌ಕ್ಲೇಸ್ , ಜೋಮೆಲ್ ವಾರಿಕನ್.

Story first published: Tuesday, December 24, 2024, 16:49 [IST]
Other articles published on Dec 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+