ಅಫ್ಘಾನಿಸ್ತಾನ ಎದುರು 30 ರನ್‌ನಿಂದ ಗೆದ್ದು ದಾಖಲೆ ಬರೆದ ವೆಸ್ಟ್ ಇಂಡೀಸ್!

ಲಕ್ನೋ, ನವೆಂಬರ್ 15: ಮುಂಬರಲಿರುವ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ವೆಸ್ಟ್ ಇಂಡೀಸ್ ಕೂಡ ತಯಾರಿಯಲ್ಲಿದೆ. ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ, ಲಕ್ನೋದಲ್ಲಿ ಗುರುವಾರ (ನವೆಂಬರ್ 14) ನಡೆದ ಅಫ್ಘಾನಿಸ್ತಾನ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ ವಿಂಡೀಸ್ 30 ರನ್ ಗೆಲುವನ್ನಾಚರಿಸಿದೆ.
ಎವಿನ್ ಲೆವಿಸ್ ಸ್ಫೋಟಕ ಅರ್ಧಶತಕದಾಟ, ವಿಂಡೀಸ್‌ಗೆ ಪ್ರಮುಖ ಗೆಲುವು ತಂದಿತು. ಯಾಕೆಂದರೆ ಈ ಹಿಂದೆ ವೆಸ್ಟ್ ಇಂಡೀಸ್ ಪಾಲ್ಗೊಂಡ ಒಟ್ಟು 8 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಲಭಿಸಿದ ಚೊಚ್ಚಲ ಗೆಲುವಿದು. ಹಿಂದಿನ 7 ಪಂದ್ಯಗಳಲ್ಲಿ ಕೆರಿಬಿಯನ್ನರು ಸೋಲಿನ ಮುಖಭಂಗ ಅನುಭವಿಸಿದ್ದರು. ಆ ಸತತ ಸೋಲಿನ ಕಹಿಗೆ ವಿಂಡೀಸ್ ಈಗ ಅಂತ್ಯ ಹಾಡಿದಂತಾಗಿದೆ.
ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದಾಗಲೂ 3 ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ 3-0ಯ ಸೋಲನುಭವಿಸಿತ್ತು. ಅಂತೂ ಈ ವರ್ಷ ಟಿ20ಯಲ್ಲಿನ ಸತತ 7 ಸೋಲಿನ ಕೆಟ್ಟ ದಾಖಲೆಯನ್ನು ಕೀರನ್ ಪೊಲಾರ್ಡ್ ನಾಯಕತ್ವದ ವಿಂಡೀಸ್ ಕೊನೆಗೊಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್, ಎವಿನ್ ಲೆವಿಸ್ 68 (41 ಎಸೆತ), ಕೀರನ್ ಪೊಲಾರ್ಡ್ 32, ಶಿಮ್ರನ್ ಹೆಟ್ಮೈಯರ್ 21, ದೆನೇಶ್ ರಾಮ್ದೀನ್ 20 ರನ್‌ನೊಂದಿಗೆ 264 ರನ್ ಮಾಡಿತ್ತು. ಚೇಸಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗೆ 9 ವಿಕೆಟ್ ಕಳೆದು 134 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications