For Quick Alerts
ALLOW NOTIFICATIONS  
For Daily Alerts
 

ಒಡಿಐ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ವೆಸ್ಟ್‌ ಇಂಡೀಸ್‌ ಜೋಡಿ!

West Indies John Campbell, Shai Hope set record ODI opening stand against Ireland

ಡಬ್ಲಿನ್‌, ಮೇ 06: ವೆಸ್ಟ್‌ ಇಂಡೀಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜಾನ್‌ ಕ್ಯಾಂಪ್‌ಬೆಲ್‌ ಮತ್ತು ಶೇಯ್‌ ಹೋಪ್‌, ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್‌ಗಳ ಜತೆಯಾಟದ ವಿಶ್ವ ದಾಖಲೆ ಬರೆದಿದ್ದಾರೆ.

ಇಲ್ಲಿನ ಕ್ಯಾಸೆಲ್‌ ಅವೆನ್ಯೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯಲ್ಲಿನ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆರ್ಭಟಿಸಿದ ಕೆರಿಬಿಯನ್‌ ಜೋಡಿ ಮೊದಲ ವಿಕೆಟ್‌ಗೆ 365 ರನ್‌ಗಳನ್ನು ಚಚ್ಚುವ ಮೂಲಕ ನೂತನ ವಿಶ್ವ ದಾಖಲೆ ಬರೆದಿದೆ. ಈ ಮೂಲಕ ಕಳೆದ ವರ್ಷ ಜಿಂಬಾಬ್ವೆ ತಂಡದ ವಿರುದ್ಧ ಬುಲವಾಯೊದಲ್ಲಿ ಪಾಕಿಸ್ತಾನ ತಂಡದ ಇಮಾಮ್‌ ಉಲ್‌ ಹಕ್‌ ಮತ್ತು ಫಖರ್‌ ಝಮಾನ್‌ ಗಳಿಸಿದ್ದ 304 ರನ್‌ಗಳ ಜತೆಯಾಟವನ್ನು ಅಳಿಸಿಹಾಕಿದೆ.

ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಕ್ಯಾಂಪ್‌ಬೆಲ್‌ 137 ಎಸೆತಗಳಲ್ಲಿ 15 ಫೋರ್‌ ಮತ್ತು 6 ಸಿಕ್ಸರ್‌ಗಳೊಂದಿಗೆ 179 ರನ್‌ಗಳನ್ನು ಸಿಡಿಸಿದರೆ, ಅವರಿಗೆ ಉತ್ತಮ ಸಾಥ್‌ ನೀಡಿದ ಶೇಯ್‌ ಹೋಪ್‌ 152 ಎಸೆತಗಳಲ್ಲಿ 22 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ 170 ರನ್‌ಗಳನ್ನು ಬಾರಿಸಿದರು.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳ ಅಬ್ಬರದೊಂದಿಗೆ ತನ್ನ ಪಾಲಿನ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 381 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಆತಿಥೇಯ ಐರ್ಲೆಂಡ್‌ ತಂಡವನ್ನು 34.4 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲ್‌ಔಟ್‌ ಮಾಡಿ 196 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ವೆಸ್ಟ್‌ ಇಂಡೀಸ್‌ ತಂಡ ತನ್ನ ಮುಂದಿನ ಪಂದ್ಯದಲ್ಲಿ ಅಪಾಯಕಾರಿ ಬಾಂಗ್ಲಾದೇಶ ತಂಡವನ್ನು ಎದುರಾಗಲಿದೆ.

Story first published: Sunday, May 5, 2019, 23:08 [IST]
Other articles published on May 5, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+