Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WI vs PAK: ಎರಡನೇ ಏಕದಿನ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದ ವಿಂಡೀಸ್

ಜೇಡನ್ ಸೀಲ್ಸ್ ಹಾಗೂ ರೋಸ್ಟನ್‌ ಚೇಸ್‌ ಅವರ ಸೊಗಸಾದ ಆಟದ ನೆರವಿನಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡ 2ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ವಿಂಡೀಸ್‌ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಉಭಯ ತಂಡಗಳ ನಡುವಣ ಮೂರನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ.

ಟಾಸ್‌ ಗೆದ್ದ ವೆಸ್ಟ್ ಇಂಡೀಸ್‌ ತಂಡ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಆರಂಭಿಕರಾದ ಸೈಮ್‌ ಆಯುಬ್‌ (23) ಹಾಗೂ ಅಬ್ದುಲ್‌ ಶಫೀಕ್ (26) ಮೊದಲ ವಿಕೆಟ್‌ಗೆ 37 ರನ್‌ ಜೊತೆಯಾಟದ ಕಾಣಿಕೆ ನೀಡಿತು. ಸ್ಟಾರ್ ಆಟಗಾರ ಬಾಬರ್ ಅಜಮ್‌ (0) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ನಾಯಕ ಮೊಹಮ್ಮದ್‌ ರಿಜ್ವಾನ್ ಸಹ 2 ಬೌಂಡರಿಗಳ ಸಹಾಯದಿಂದ 16 ರನ್‌ ಬಾರಿಸಿ ಔಟ್ ಆದರು.

West Indies level ODI series 1-1 against Pakistan with a 5-wicket victory

ಹುಸೇನ್ ತಲಾತ್ ಸ್ಥಿರ ಪ್ರದರ್ಶನ ನೀಡಿದರು. 32 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 31 ರನ್‌ ಸಿಡಿಸಿದರು. ಕೆಳ ಕ್ರಮಾಂಕದಲ್ಲಿ ಹಸನ್ ನವಾಜ್ 30 ಎಸೆತಗಳಲ್ಲಿ 36 ರನ್‌ ಸಿಡಿಸಿತು. ಮಳೆಯಿಂದಾಗಿ ಓವರ್‌ಗಳಿಗೆ ಕತ್ತರಿ ಬಿದ್ದ ಪರಿಣಾಮ ಪಂದ್ಯವನ್ನು 37 ಓವರ್‌ಗಳಿಗೆ ಇಳಿಸಲಾಯಿತು. ಈ ಅವಧಿಯಲ್ಲಿ ಪಾಕ್‌ 7 ವಿಕೆಟ್‌ಗೆ 171 ರನ್‌ ಸೇರಿಸಿತು. ವಿಂಡೀಸ್‌ ಪರ ಜೇಡನ್ ಸೀಲ್ಸ್ 23 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು.

ವಿಂಡೀಸ್‌ ಜಯ

ಆರಂಭಿಕರಾದ ಬ್ರೆಂಡನ್‌ ಕಿಂಗ್‌ (1) ಹಾಗೂ ಇವಾನ್ ಲೂಯಿಸ್‌ (7) ಉತ್ತಮ ಆರಂಭವನ್ನು ನೀಡುವಲ್ಲಿ ವಿಫಲರಾದರು. ಕೀಸಿ ಕಾರ್ಟಿ (16) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ನಾಯಕ ಶಾಯ್ ಹೋಪ್‌ 35 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್‌ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶೆರ್ಫೇನ್ ರುದರ್ಫೋರ್ಡ್ 4 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 45 ರನ್‌ ಬಾರಿಸಿದರು.

West Indies level ODI series 1-1 against Pakistan with a 5-wicket victory

6ನೇ ವಿಕೆಟ್‌ಗೆ ಜಸ್ಟಿನ್ ಗ್ರೀವ್ಸ್ ಹಾಗೂ ರೋಸ್ಟನ್‌ ಚೇಸ್‌ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಪಾಕ್ ಬೌಲರ್‌ಗಳು ವಿಫಲರಾದರು. ಈ ಜೋಡಿ 72 ಎಸೆತಗಳಲ್ಲಿ 77 ರನ್‌ ಸೇರಿಸಿ ಅಬ್ಬರಿಸಿತು. ಚೇಸ್ 4 ಬೌಂಡರಿ, 2 ಸಿಕ್ಸರ್‌ ಸೇರಿದಂತೆ ಅಜೇಯ 49 ರನ್‌ ಸಿಡಿಸಿದರು. ಇನ್ನು ಜಸ್ಟಿನ್ ಗ್ರೀವ್ಸ್ 31 ಎಸೆತಗಳಲ್ಲಿ ಅಜೇಯ 26 ರನ್‌ ಸಿಡಿಸಿದರು. ಅಂತಿಮವಾಗಿ ವಿಂಡೀಸ್‌ 33.2 ಓವರ್‌ಗಳಲ್ಲಿ 5 ವಿಕೆಟ್‌ಗೆ 184 ರನ್‌ ಸೇರಿಸಿ ಜಯ ಸಾಧಿಸಿತು.

Story first published: Monday, August 11, 2025, 13:00 [IST]
Other articles published on Aug 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+