For Quick Alerts
ALLOW NOTIFICATIONS  
For Daily Alerts
 

ಸೋಲಿನ ದಂಡಯಾತ್ರೆ ಮುಂದುವರೆಸಿದ ವಿಂಡೀಸ್‌

ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಲು ಸಾಲು ಸರಣಿಗಳನ್ನು ಸೋತಿದ್ದ ವೆಸ್ಟ್‌ ಇಂಡೀಸ್‌, ಗೆಲುವಿನ ಟ್ರ್ಯಾಕ್‌ಗೆ ಮರಳುವ ಆಸೆ ಕಮರಿದೆ. ವಿಂಡೀಸ್‌ ಪ್ರವಾಸದಲ್ಲಿರುವ ಪಾಕಿಸ್ತಾನ ಮೊದಲ ಟಿ20 ಪಂದ್ಯವನ್ನು ಗುರುವಾರ ಆಡಿದೆ. ಈ ವೇಳೆ ಪ್ರವಾಸಿ ತಂಡ 14 ರನ್‌ಗಳಿಂದ ಪಂದ್ಯವನ್ನು ಗೆದ್ದು 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್ (14) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಸೈಮ್‌ ಅಯೂಬ್ ಹಾಗೂ ಫಖಾರ್‌ ಜಮನ್‌ ಜೋಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ಜೋಡಿ 51 ಎಸೆತಗಳಲ್ಲಿ 81 ರನ್‌ ಸೇರಿಸಿತು. ಈ ವೇಳೆ ಸೈಮ್‌ ಔಟ್ ಆದರು. ಇವರು 38 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ ಸಹಾಯದಿಂದ 57 ರನ್ ಬಾರಿಸಿದರು.

West Indies Losing Streak Continues Pakistan Wins First T20 by 14 Runs

ಮಧ್ಯಮ ಕ್ರಮಾಂಕದಲ್ಲಿ ಹಸನ್‌ ನವಾಜ್ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 28 ರನ್‌ ಸಿಡಿಸಿದರು. ಹಸನ್‌ ನವಾಜ್ 1 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 24 ರನ್‌ ಸಿಡಿಸಿದರು. ಉಳಿದಂತೆ ನಾಯಕ ಸಲ್ಮಾನ್ ಅಘಾ ಅಜೇಯ 11, ಫಾಹೀಮ್ ಅಶ್ರಫ್‌ 15 ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಪಾಕ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 178 ರನ್‌ ಕಲೆ ಹಾಕಿತು. ವಿಂಡೀಸ್ ತಂಡದ ಪರ ಶಾಮರ್‌ ಜೋಸೆಫ್‌ 3 ವಿಕೆಟ್‌ ಕಬಳಿಸಿದರು.

ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಜಾನ್ಸನ್ ಚಾರ್ಲ್ಸ್, ಜ್ಯುವೆಲ್ ಆಂಡ್ರ್ಯೂ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 72 ರನ್‌ಗಳನ್ನು ಸೇರಿಸಿತು. ಉಭಯ ಆರಂಭಿಕರು 35 ರನ್ ಬಾರಿಸಿ ಔಟ್ ಆದರು. ತಂಡದ ಸ್ಟಾರ್ ಆಟಗಾರರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಕೆಳ ಕ್ರಮಾಂಕದಲ್ಲಿ ಜೇಸನ್‌ ಹೋಲ್ಡರ್‌ 12 ಎಸೆತಗಳಲ್ಲಿ 4 ಸಿಕ್ಸರ್ ಸಹಾಯದಿಂದ ಅಜೇಯ 30 ರನ್‌ ಬಾರಿಸಿದರು. ಶಾಮರ್‌ ಜೋಸೆಫ್‌ ಸಹ 12 ಎಸೆತಗಳಲ್ಲಿ 21 ರನ್‌ ಸಿಡಿಸಿದರು.

6 ವರ್ಷದ ಹಿಂದಿನ ದಾಖಲೆ ಸರಿ ಗಟ್ಟಿದ ವಿಂಡೀಸ್‌

ವೆಸ್ಟ್‌ ಇಂಡೀಸ್ ತಂಡ ಗೆಲುವಿನ ಟ್ರ್ಯಾಕ್‌ಗೆ ಮರಳುವ ಆಸೆ ಮುಂದಿನ ಪಂದ್ಯಕ್ಕೆ ಶಿಫ್ಟ್ ಆಗಿದೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ 5 ಪಂದ್ಯಗಳನ್ನು ಸೋತಿದ್ದ ವಿಂಡೀಸ್‌, ಪಾಕ್‌ ವಿರುದ್ಧದ ಮೊದಲ ಪಂದ್ಯದಲ್ಲೂ ಸೋಲು ಕಂಡಿತು. ಈ ಮೂಲಕ ಸತತ 6 ಸೋಲುಗಳನ್ನು ಕಂಡ, ತಾನೇ ನಿರ್ಮಿಸಿದ ದಾಖಲೆಯ ಸಮಕ್ಕೆ ನಿಂತಿತು. ವಿಂಡೀಸ್‌ 2019ರಲ್ಲೂ ಚುಟುಕು ಕ್ರಿಕೆಟ್‌ನಲ್ಲಿ ಸತತವಾಗಿ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಸೋಲು ಕಂಡಿತ್ತು.

Story first published: Friday, August 1, 2025, 13:18 [IST]
Other articles published on Aug 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+