ವೆಸ್ಟ್ ಇಂಡೀಸ್ ಸ್ಪಿನ್ ಲೆಜೆಂಡ್ ಸೊನಿ ರಾಮದಿನ್ ವಿಧಿವಶ

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಪಿನ್ ದಿಗ್ಗಜ ಸೊನಿ ರಾಮದಿನ್ ವಿಧಿವಶರಾಗಿದ್ದಾರೆ. 92 ವಯಸ್ಸಿನ ರಾಮದಿನ್ 1950ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ವೆಸ್ಟ್ ಇಂಡೀಸ್ ತಂಡದಲ್ಲಿ ಆಡಿದ್ದರು.
43 ಟೆಸ್ಟ್ ಪಂದ್ಯಗಳನ್ನ ಆಡಿದ ಸೊನಿ ರಾಮದಿನ್ ಒಟ್ಟಾರೆ 158 ವಿಕೆಟ್ ಉರುಳಿಸಿದ್ದರು. ಅದ್ರಲ್ಲೂ 72 ವರ್ಷಗಳ ಹಿಂದೆ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮೊದಲ ಗೆಲುವಿನ ಪಂದ್ಯದಲ್ಲಿಗೆದ್ದ ರಾಮದಿನ್ 11 ವಿಕೆಟ್ ಕಬಳಿಸಿದ್ದರು.
'' ವಿಂಡೀಸ್ ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾಗಿರುವ ರಾಮದಿನ್ ನಿಧನರಾಗಿರುವ ಸುದ್ದಿ ಬೇಸರ ತರಿಸಿದೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸುತ್ತೇವೆ'' ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಹೇಳಿದೆ.
ಓಲ್ಡ್ ಟ್ರಾಫರ್ಡ್‌ನಲ್ಲಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ ರಾಮದಿನ್ ವಿಂಡೀಸ್ ಪರ ಅತ್ಯಂಕ ಚಾಣಾಕ್ಷ ಸ್ಪಿನ್ನರ್ ಆಗಿದ್ದರು. ಜೊತೆಗೆ ವಿಂಡೀಸ್ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications