Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ವಿಂಡೀಸ್‌ ತಂಡದ ಭವಿಷ್ಯ ಹೇಳಿದ ಕೆವಿನ್ ಪೀಟರ್ಸನ್‌

 West Indies team so unpredictable: Kevin Pietersen

ಟ್ರೆಂಟ್‌ಬ್ರಿಡ್ಜ್‌, ಮೇ 30: ನ್ಯೂಜಿಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 421 ರನ್‌ಗಳನ್ನು ಚಚ್ಚಿ 91 ರನ್‌ಗಳಿಂದ ಜಯ ದಾಖಲಿಸಿದ ವೆಸ್ಟ್‌ ಇಂಡೀಸ್‌ ತಂಡದ ಪ್ರದರ್ಶನ ಕಂಡು ಬೆರಗಾಗಿರುವ ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌, ವಿಂಡೀಸ್‌ ಪಡೆಯನ್ನು ಅಂದಾಜಿಸಲು ಖಂಡಿತಾ ಸಾಧ್ಯವಿಲ್ಲ ಎಂದಿದ್ದಾರೆ.

"ಸಾಮಾನ್ಯವಾಗಿ ಪಾಕಿಸ್ತಾನ ತಂಡದ ಪ್ರದರ್ಶನವನ್ನು ಅಂದಾಜಿಸುವುದು ಕಷ್ಟ. ಆದರೆ, ಈ ಬಾರಿ ವೆಸ್ಟ್‌ ಇಂಡೀಸ್‌ ತಂಡದ ಪ್ರದರ್ಶನವನ್ನು ಅಂದಾಜಿಸುವುದು ಕಷ್ಟವಾಗುತ್ತಿದೆ. ನ್ಯೂಜಿಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ ಗೆದ್ದಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಇನ್ನು ಅದ್ಭುತ ಲಯದಲ್ಲಿರುವ ಆಂಡ್ರೆ ರಸೆಲ್‌ ಅವರನ್ನು ತಂಡದಲ್ಲಿ ಸೇರ್ಪಡೆ ಮಾಡಿದೆ,'' ಎಂದು ವಿಂಡೀಸ್‌ ತಂಡದ ಭರ್ಜರಿ ಫಾರ್ಮ್‌ಗೆ ಕುರಿತಾಗಿ ಪೀಟರ್ಸನ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಆದರೆ, ವೆಸ್ಟ್ ಇಂಡೀಸ್‌ ತಂಡ ಈ ಬಾರಿ ಟ್ರೋಫಿ ಗೆಲ್ಲುವುದು ಅನುಮಾನ ಎಂದು ಕೆಪಿ ಅಭಿಪ್ರಾಯಪಟ್ಟಿದ್ದಾರೆ. ಭಾರತ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳ ಜೊತೆಗೆ ವೆಸ್ಟ್‌ ಇಂಡೀಸ್‌ ಸೆಮಿಫೈನಲ್ಸ್‌ ವರೆಗೆ ತಲುಪಬಹುದು ಎಂದು ಹೇಳಿದ್ದಾರೆ.

ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ಪ್ರಿಡಿಕ್ಟ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

"ನನ್ನ ಪ್ರಕಾರ ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಸೆಮಿಫೈನಲ್ಸ್‌ ತಲುಪಲಿವೆ. ಕ್ರಿಸ್‌ ಗೇಲ್‌ ಅಗ್ರಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಜೊತೆಗೆ ವಿಂಡೀಸ್‌ ತಂಡದಲ್ಲಿ ಕೆಲ ಯುವ ಪ್ರತಿಭೆಗಳೂ ಇದ್ದಾರೆ. ಈ ಬಾರಿಯ ವೆಸ್ಟ್‌ ಇಂಡೀಸ್‌ ತಂಡ ನಿಜಕ್ಕೂ ಇಷ್ಟವಾಗುತ್ತಿದೆ. ವಿಂಡೀಸ್‌ ವಿಶ್ವಕಪ್‌ ಗೆಲ್ಲುತ್ತಾ? ಬಹುಶಃ ಇಲ್ಲ. ಅಗ್ರ ನಾಲ್ಕರಲ್ಲಂತೂ ಖಂಡಿತಾ ಕಾಣಿಸಿಕೊಳ್ಳುತ್ತದೆ,'' ಎಂದು ಪೀಟರ್ಸನ್‌ ಭವಿಷ್ಯ ನುಡಿದಿದ್ದಾರೆ.

1
43645

ವೆಸ್ಟ್‌ ಇಂಡೀಸ್‌ ತಂಡ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ಪಂದ್ಯ ಆರಂಭ: ಭಾರತೀಯ ಕಾಲಮಾನ ಮಧ್ಯಾಹ್ನ 3:00ಕ್ಕೆ

Story first published: Thursday, May 30, 2019, 23:50 [IST]
Other articles published on May 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+