WI vs PAK: ಪಾಕಿಸ್ತಾನಕ್ಕೆ 18 ವರ್ಷಗಳ ನಂತರ ವೆಸ್ಟ್ ಇಂಡೀಸ್ ತಂಡ
ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರುವ ವೆಸ್ಟ್ ಇಂಡೀಸ್ ತಂಡವು 18 ವರ್ಷಗಳ ನಂತರ ಪಾಕಿಸ್ತಾನವನ್ನು ತಲುಪಿದೆ. ಐತಿಹಾಸಿಕ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡವು ಖಾಸಗಿ ವಿಮಾನಯಾನ ಮೂಲಕ ದುಬೈನಿಂದ ಇಸ್ಲಾಮಾಬಾದ್‌ಗೆ ಬಂದಿಳಿದಿದೆ. ಅಲ್ಲಿಂದ ವೆಸ್ಟ್ ಇಂಡೀಸ್ ತಂಡವನ್ನು ಬಿಗಿ ಭದ್ರತೆಯಲ್ಲಿ ಸ್ಥಳೀಯ ಹೋಟೆಲ್‌ಗೆ ಕರೆದೊಯ್ಯಲಾಗಿದೆ. ವೆಸ್ಟ್ ಇಂಡೀಸ್ ಕೊನೆಯದಾಗಿ 2006ರಲ್ಲಿ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಆಡಿತ್ತು.
ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮೊದಲ ಟೆಸ್ಟ್ ಜನವರಿ 17 ರಿಂದ ಪ್ರಾರಂಭವಾದರೆ, ಎರಡನೇ ಟೆಸ್ಟ್ ಜನವರಿ 25 ರಿಂದ ಶುರುವಾಗಲಿದೆ. ಎರಡೂ ಟೆಸ್ಟ್ ಪಂದ್ಯಗಳು ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಇದಕ್ಕೂ ಮುನ್ನ ಪಾಕಿಸ್ತಾನ ಶಾಹೀನ್ಸ್ ಮತ್ತು ವೆಸ್ಟ್ ಇಂಡೀಸ್ ನಡುವೆ 3 ದಿನಗಳ ಅಭ್ಯಾಸ ಪಂದ್ಯವು ಇಸ್ಲಾಮಾಬಾದ್ ಕ್ಲಬ್‌ನಲ್ಲಿ ಜನವರಿ 10 ರಿಂದ ನಡೆಯಲಿದೆ.

ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯು ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 (ಡಬ್ಲ್ಯೂಟಿಸಿ) ಭಾಗವಾಗಿದೆ. ಈ ಆವೃತ್ತಿಯಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯಗಳನ್ನು ಉಭಯ ತಂಡಗಳು ಆಡಲಿವೆ. ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಎರಡೂ ತಂಡಗಳು ಕೆಳಭಾಗದಲ್ಲಿವೆ.
ವೆಸ್ಟ್ ಇಂಡೀಸ್ ತಂಡ
ಕ್ರೈಗ್ ಬ್ರಾಥ್‌ವೈಟ್ (ನಾಯಕ), ಅಲೆಕ್ ಅಥಾನಾಜ್, ಕೇಸಿ ಕಾರ್ಟಿ, ಜೋಶುವಾ ಡಾ ಸಿಲ್ವಾ, ಜಸ್ಟಿನ್ ಗ್ರೀವ್ಸ್, ಕವೀಮ್ ಹಾಡ್ಜ್, ಟೆವಿನ್ ಇಮ್ಲಾಚ್, ಅಮೀರ್ ಜಂಗು, ಮೈಕೈಲ್ ಲೂಯಿಸ್, ಗುಡಕೇಶ್ ಮೋತಿ, ಆಂಡರ್ಸನ್ ಫಿಲಿಪ್, ಕೆಮರ್ ರೋಚ್, ಕೆಮರ್ ರೋಚ್, ಕೆಮರ್ ರೋಚ್, ಜೇಡಿನ್ ಜೋಮೆಲ್ ವಾರಿಕನ್.
ವಿಂಡೀಸ್ ಔಟ್
ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾದಂತಹ ಬಲಿಷ್ಠ ತಂಡಗಳು ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಆರ್ಹತೆ ಪಡೆಯುವಲ್ಲಿ ವಿಫಲವಾಗಿವೆ. ಐಸಿಸಿ ನಿಯಮಗಳ ಪ್ರಕಾರ, ಐಸಿಸಿ ಶ್ರೇಯಾಂಕದಲ್ಲಿ ಅಗ್ರ 8 ರಲ್ಲಿರುವ ತಂಡಗಳು ಮಾತ್ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುತ್ತವೆ. ವೆಸ್ಟ್ ಇಂಡೀಸ್ 1975 ಮತ್ತು 1979 ಏಕದಿನ ವಿಶ್ವಕಪ್ ಮತ್ತು ಎರಡು ಬಾರಿ ಟಿ20 ವಿಶ್ವ ಚಾಂಪಿಯನ್ ಆಗಿದೆ. ಇದರ ನಡುವೆ 2004ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನೂ ವಶಪಡಿಸಿಕೊಂಡಿದೆ. 2002 ರ ಚಾಂಪಿಯನ್ಸ್ ಟ್ರೋಫಿ ಆವೃತ್ತಿಯಲ್ಲಿ ಶ್ರೀಲಂಕಾ ಭಾರತದೊಂದಿಗೆ ಜಂಟಿ ವಿಜೇತರಾಗಿದೆ. ಇದಲ್ಲದೆ, ಶ್ರೀಲಂಕಾ 1996 ಏಕದಿನ ವಿಶ್ವಕಪ್ ಗೆದ್ದಿತ್ತು.
ಅರ್ಹತೆ ಪಡೆದಿರುವ ತಂಡಗಳು
ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಭಾರತ , ನ್ಯೂಜಿಲೆಂಡ್ , ದಕ್ಷಿಣ ಆಫ್ರಿಕಾ , ಅಫ್ಘಾನಿಸ್ತಾನ , ಆಸ್ಟ್ರೇಲಿಯಾ , ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ಆತಿಥೇಯ ದೇಶ ಪಾಕಿಸ್ತಾನ ಅರ್ಹತೆ ಪಡೆದಿವೆ . ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಂದು ಕರಾಚಿಯಲ್ಲಿ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಈ ಟೂರ್ನಿಯಲ್ಲಿ 8 ತಂಡಗಳ ನಡುವೆ 15 ಪಂದ್ಯಗಳು ನಡೆಯಲಿದ್ದು, ಪಾಕಿಸ್ತಾನ ಮತ್ತು ದುಬೈನಲ್ಲಿ ಈ ಟೂರ್ನಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications