ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನಕ್ಕೆ ಆತಿಥ್ಯ ವಹಿಸಲಿದೆ ವೆಸ್ಟ್ ಇಂಡೀಸ್

ಪೋರ್ಟ್‌ ಆಫ್‌ ಸ್ಪೇನ್: ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಲಿದೆ. ಈ ಮೂರೂ ತಂಡಗಳು ಒಟ್ಟಾರೆ ನಾಲ್ಕು ಟೆಸ್ಟ್‌ ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು 15 ಪಂದ್ಯಗಳನ್ನು ಆಡಲಿವೆ.

ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!

ಈ ವರ್ಷ ದಕ್ಷಿಣ ಆಫ್ರಿಕಾ ತಂಡ ದ್ವಿಪಕ್ಷೀಯ ಸರಣಿಗಾಗಿ ವೆಸ್ಟ್ ಇಂಡೀಸ್‌ಗೆ ಹೋಗಲಿದೆ. 2010ರ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ದ್ವಿಪಕ್ಷೀಯ ಸರಣಿಗಾಗಿ ಕೆರಿಬಿಯನ್ ರಾಷ್ಟ್ರಕ್ಕೆ ಬರಲಿದೆ. ಜೂನ್ 10ರಿಂದ ಇತ್ತಂಡಗಳ ಮಧ್ಯೆ ಸೇಂಟ್ ಲೂಸಿಯಾದಲ್ಲಿ 2 ಟೆಸ್ಟ್‌ ಪಂದ್ಯಗಳು ನಡೆಯಲಿವೆ. ಅದಾಗಿ ಜೂನ್ 26ರಿಂದ ಜುಲೈ 3ರ ವರೆಗೆ ಎರಡೂ ತಂಡಗಳ ಮಧ್ಯೆ 5 ಟಿ20 ಪಂದ್ಯಗಳು ನಡೆಯಲಿವೆ.

ಇನ್ನು ಆಸ್ಟ್ರೇಲಿಯಾ ತಂಡ ಕೂಡ ವಿಂಡೀಸ್‌ಗೆ ವೈಟ್ ಬಾಲ್ ಸರಣಿಗಳಿಗಾಗಿ ಬರಲಿದೆ. ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾ-ವೆಸ್ಟ್‌ ಇಂಡೀಸ್ ಮಧ್ಯೆ ಜುಲೈ 9ರಿಂದ 16ರ ವರೆಗೆ 5 ಟಿ20ಐ ಪಂದ್ಯಗಳು ಮತ್ತು ಜುಲೈ 20-24ರ ವರೆಗೆ ಬರ್ಬೊಡೋಸ್‌ನಲ್ಲಿ 3 ಏಕದಿನ ಪಂದ್ಯಗಳು ನಡೆಯಲಿವೆ.

"ಮುಂದಿನ ಐಪಿಎಲ್‌ನಿಂದ ತಂಡವೊಂದರ ಪರ 5 ವಿದೇಶಿ ಆಟಗಾರರು ಕಣಕ್ಕಿಳಿಯಬೇಕು"

ಪಾಕಿಸ್ತಾನ ಮತ್ತು ವೆಸ್ಟ್‌ ಇಂಡೀಸ್ ಮಧ್ಯೆ 3 ಟೆಸ್ಟ್‌ ಪಂದ್ಯಗಳು ನಡೆಯಲಿತ್ತು. ಆದರೆ 1 ಟೆಸ್ಟ್‌ ಪಂದ್ಯಕ್ಕೆ ಬದಲು ಎರಡು ಹೆಚ್ಚುವರಿ ಟಿ20ಐ ಪಂದ್ಯಗಳಲ್ಲಿ ಆಡಲು ಎರಡೂ ತಂಡಗಳ ಬೋರ್ಡ್‌ಗಳು ಒಪ್ಪಿಕೊಂಡಿವೆ. ಹೀಗಾಗಿ ಎರಡೂ ತಂಡಗಳ ಮಧ್ಯೆ ಬಾರ್ಬೊಡೋಸ್‌ನಲ್ಲಿ 2 ಟಿ20 ಪಂದ್ಯಗಳು (ಜುಲೈ 27-28) ನಡೆದರೆ, ಜುಲೈ 31ರಿಂದ ಆಗಸ್ಟ್ 3ರ ವರೆಗೆ ಗಯಾನಾದಲ್ಲಿ 3 ಟಿ20 ಪಂದ್ಯಗಳು ನಡೆಯಲಿವೆ.

ಪಾಕಿಸ್ತಾನ ಮತ್ತು ವೆಸ್ಟ್‌ ಇಂಡೀಸ್ ಮಧ್ಯೆ 2 ಟೆಸ್ಟ್ ಪಂದ್ಯಗಳು ನಡೆಯಲಿವೆ. ಆಗಸ್ಟ್ 12ರಿಂದ ಇತ್ತಂಡಗಳ ಟೆಸ್ಟ್ ಸರಣಿ ಆರಂಭವಾಗಲಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, May 14, 2021, 21:24 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X