Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್ ಇಂಡೀಸ್ vs ಇಂಗ್ಲೆಂಡ್, ಪ್ರಥಮ ಟೆಸ್ಟ್, ಮೊದಲ ದಿನ, Live ಸ್ಕೋರ್

West Indies vs England, 1st Test, Live Score and playing XI details, Antigua

ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಆರಂಭದಲ್ಲಿಯೇ ವೆಸ್ಟ್ ಇಮಡೀಸ್ ಬೌಲರ್‌ಗಳು ಮೇಲುಗೈ ಸಾಧಿಸಿದ್ದು ಮೊದಲ ಹತ್ತು ಓವರ್‌ಗಳಲ್ಲಿ ಇಂಗ್ಲೆಂಡ್ ತಂಡದ ಮೂವರು ಆಟಗಾರರನ್ನು ಫೆವಿಲಿಯನ್‌ಗೆ ಅಟ್ಟುವ ಮೂಲಕ ಪ್ರವಾಸಿ ತಂಡಕ್ಕೆ ಆಘಾತ ನೀಡಿದೆ.

Live ಸ್ಕೋರ್‌ಪಟ್ಟಿ ಹೀಗಿದೆ

1
50928

ಇನ್ನು ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಈ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗುವ ಮುನ್ನ ಟಿ20 ಸರಣಿಯಲ್ಲಿ ಕಣಕ್ಕಿಳಿದಿದ್ದವು. ಈ ಚುಟುಕು ಸರಣಿಯಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡ ಮೇಲುಗೈ ಸಾಧಿಸಿದ್ದು ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಪಂದ್ಯಗಳನ್ನು ವಿಂಡೀಸ್ ಪಡೆ ಗೆದ್ದಿದ್ದರೆ ಎರಡು ಪಂದ್ಯ ಮಾತ್ರ ಇಂಗ್ಲೆಂಡ್ ಗೆದ್ದುಕೊಂಡಿತ್ತು. ಹೀಗಾಗಿ ಸರಣಿ 3-2 ಅಂತರದಿಂದ ವಿಂಡೀಸ್ ಪಾಲಾಗಿತ್ತು.

ಇನ್ನು ಮೂರು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಮೊದಲ ಪಂದ್ಯ ಆಂಟಿಗುವಾದಲ್ಲಿ ನಡೆಯುತ್ತಿದೆ. ಎರಡನೇ ಪಂದ್ಯ ಬಾರ್ನಡೋಸ್‌ನ ಕೆಲ್ಲಿಂಗ್ಟನ್ ಓವಲ್‌ನಲ್ಲಿ ನಡೆಯಲಿದ್ದು ಮಾರ್ಚ್ 16ರಿಂದ ಆರಂಭವಾಗಲಿದೆ. ಮೂರನೇ ಪಂದ್ಯ ಮಾರ್ಚ್ 24ರಿಂದ ಗ್ರೆನೆಡಾದ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜಾನ್ ಕ್ಯಾಂಪ್‌ಬೆಲ್, ಶಮರ್ ಬ್ರೂಕ್ಸ್, ಎನ್ಕ್ರುಮಾ ಬೋನರ್, ಜರ್ಮೈನ್ ಬ್ಲಾಕ್‌ವುಡ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಕೆಮರ್ ರೋಚ್, ಅಲ್ಜಾರಿ ಜೋಸೆಫ್, ವೀರಸಾಮಿ ಪರ್ಮಾಲ್, ಜೇಡನ್ ಸೀಲ್ಸ್

ಬೆಂಚ್ ಕೈಲ್ ಮೇಯರ್ಸ್, ಆಂಡರ್ಸನ್ ಫಿಲಿಪ್

ಇಂಗ್ಲೆಂಡ್ ಪ್ಲೇಯಿಂಗ್ XI: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಜೋ ರೂಟ್ (ನಾಯಕ), ಡೇನಿಯಲ್ ಲಾರೆನ್ಸ್, ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಬೆನ್ ಫೋಕ್ಸ್ (WK), ಕ್ರಿಸ್ ವೋಕ್ಸ್, ಕ್ರೇಗ್ ಓವರ್‌ಟನ್, ಮಾರ್ಕ್ ವುಡ್, ಜ್ಯಾಕ್ ಲೀಚ್
ಬೆಂಚ್: ಸಾಕಿಬ್ ಮಹಮೂದ್

Story first published: Tuesday, March 8, 2022, 20:39 [IST]
Other articles published on Mar 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+