For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್‌ನ ಪಾಕ್ ಪ್ರವಾಸ ಮುಂದಕ್ಕೆ: 2023ರ ಸರಣಿ 2024ಕ್ಕೆ ಆಯೋಜಿಸಲು ನಿರ್ಧಾರ

West Indies vs Pakistan T20I series postponed from 2023 to 2024

ಟಿ20 ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳು ಮಗ್ನವಾಗಿರುವ ಸಂದರ್ಭದಲ್ಲಿಯೇ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗಳು ಕ್ರಿಕೆಟ್ ಸರಣಿಗೆ ಸಂಬಂದಿಸಿದಂತೆ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮುಂದಿನ ವರ್ಷ ಆಯೋಜನೆಯಾಗಬೇಕಿದ್ದ ಟಿ20 ಸರಣಿಯನ್ನು ಪರಸ್ಪರ ಮಾತುಕತೆ ನಡೆಸಿ 2024ಕ್ಕೆ ಮರುನಿಗದಿಪಡಿಸಿದೆ.

ಈಗಾಗಲೇ ನಿರ್ಧಾರವಾಗಿರುವಂತೆ ವೆಸ್ಟ್ ಇಂಡೀಸ್ ತಂಡ 2023ರ ಜನವರಿ ತಿಂಗಳಿನಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಬೇಕಾಗಿತ್ತು. ಆದರೆ ಈ ಪ್ರವಾಸವನ್ನು ಒಂದು ವರ್ಷಗಳ ಕಾಲ ಮುಂದೂಡುವ ನಿರ್ಧಾರವನ್ನು ಎರಡು ಮಂಡಳಿಗಳು ತೆಗೆದುಕೊಂಡಿದ್ದು 2024ಕ್ಕೆ ಆಯೋಜಿಸಲು ನಿರ್ಧರಿಸಲಾಗಿದೆ.

2024ರಲ್ಲಿ ಟಿ20 ವಿಶ್ವಕಪ್ ಆಯೋಜನೆಯಾಗಲಿದ್ದು ಆ ಸಂದರ್ಭದಲ್ಲಿ ಸರಣಿ ಆಯೋಜನ ಮಾಡಿದರೆ ಎರಡೂ ತಂಡಗಳಿಗೆ ಪ್ರಯೋಜನವಾಗಲಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಎರಡೂ ಕ್ರಿಕೆಟ್ ಮಂಡಳಿಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ ಎಂದು ಪಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವೆಸ್ಟ್ ಇಂಡೀಸ್ ತಂಡ ಈ ವರ್ಷದಲ್ಲಿಯೇ ಏಕದಿನ ಹಾಗೂ ಟಿ20 ಸರಣಿಯನ್ನು ಆಡುವ ಸಲುವಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಆದರೆ ಏಕದಿನ ಸರಣಿ ಅಂತ್ಯವಾಗುತ್ತಿದ್ದಂತೆಯೇ ಪ್ರವಾಸಿ ತಂಡದಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದವು. ಹೀಗಾಗಿ ಟಿ20 ಸರಣಿಯನ್ನು 2023ಕ್ಕೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಇದೀಗ ಈ ಸರಣಿಯನ್ನು ಮತ್ತೊಂದು ವರ್ಷ ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪ್ರಸ್ತುತ, ಎರಡೂ ರಾಷ್ಟ್ರಗಳು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಮೇಲೆ ತಮ್ಮ ದೃಷ್ಟಿ ನೆಟ್ಟಿವೆ. ಸ್ಕಾಟ್ಲೆಂಡ್ ತಂಡದ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋಲು ಅನುಭವಿಸಿದ ಬಳಿಕ ಸೂಪರ್ -12 ಹಂತದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಂಡೀಸ್ ಪಡೆ ಹರಸಾಹಸ ಪಡುತ್ತಿದೆ. ಆದರೆ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಸೋಲಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ. ಟಿ20 ವಿಶ್ವಕಪ್‌ನ ಸೂಪರ್-12 ಹಂತಕ್ಕೆ ಅರ್ಹತೆ ಪಡೆಯಲು ಐರ್ಲೆಂಡ್ ವಿರುದ್ಧ ನಡೆಯುವ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ.

Story first published: Wednesday, October 19, 2022, 23:49 [IST]
Other articles published on Oct 19, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+