ಮೈದಾನದಲ್ಲಿ ಕುಸಿದು ಬಿದ್ದ ಇಬ್ಬರು ವೆಸ್ಟ್ ಇಂಡೀಸ್ ಆಟಗಾರ್ತಿಯರು: ವಿಡಿಯೋ

ಆ್ಯಂಟಿಗುವಾ: ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲೇ ಇಬ್ಬರು ಆಟಗಾರ್ತಿಯರು ಕುಸಿದು ಬಿದ್ದಿರುವ ಘಟನೆ ನಡೆದಿದೆ. ಆ್ಯಂಟಿಗುವಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಜುಲೈ 2) ನಡೆದ ವೆಸ್ಟ್ ಇಂಡೀಸ್ ಮಹಿಳೆಯರು ಮತ್ತು ಪಾಕಿಸ್ತಾನ ಮಹಿಳೆಯರ ನಡುವಿನ ದ್ವಿತೀಯ ಟಿ20ಐ ಪಂದ್ಯದಲ್ಲಿ ಈ ಘಟನೆ ಸಂಭವಿಸಿದೆ.
ಪಾಕಿಸ್ತಾನ ತಂಡ ರನ್ ಚೇಸ್ ಮಾಡುತ್ತಿದ್ದಾಗ ಫೀಲ್ಡಿಂಗ್ ಮಾಡುತ್ತಿದ್ದ ವೆಸ್ಟ್ ಇಂಡೀಸ್ ಮಹಿಳಾ ತಂಡದ ಚಿನೆಲ್ಲೆ ಹೆನ್ರಿ ಮತ್ತು ಚೆಡಿಯನ್ ನೇಶನ್ ಎನ್ನುವ ಇಬ್ಬರು ಆಟಗಾರ್ತಿಯರು ಬೇರೆ ಬೇರೆ ಸಂದರ್ಭ ಕುಸಿದು ಬಿದ್ದಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
"ವೇಗದ ಬೌಲರ್ ಚಿನೆಲ್ಲೆ ಹೆನ್ರಿ ಮತ್ತು ಬ್ಯಾಟ್ಸ್‌ಮನ್ ಚೆಡಿಯನ್ ನೇಶನ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆನ್ರಿ ಮತ್ತು ಚೆಡಿಯನ್ ಇಬ್ಬರಿಗೂ ಪ್ರಜ್ಞೆ ಬಂದಿದೆ. ಇಬ್ಬರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದೆ," ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ತಿಳಿಸಿದೆ.
ಮೈದಾನದಲ್ಲಿ ಕುಸಿದು ಬಿದ್ದ ಇಬ್ಬರ ಬದಲಿಗೆ ಬೇರೆ ಆಟಗಾರ್ತಿಯರನ್ನು ಮೈದಾನಕ್ಕಿಳಿಸಿ ಆಟ ಮುಂದುವರೆಸಲಾಯ್ತು. ಅಂದ್ಹಾಗೆ, ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ 125 ರನ್ ಗಳಿಸಿದ್ದರೆ, ಪಾಕಿಸ್ತಾನ ವನಿತೆಯರು 103 ರನ್ ಬಾರಿಸಿ ಡಕ್ವರ್ಥ್ ಲೂಯಿಸ್ ನಿಯಮ ಪ್ರಕಾರ 7 ರನ್ ಸೋಲನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications