3 ವರ್ಷಗಳ ನಂತರ ಭಾರತ ತಂಡಕ್ಕೆ ಪುನರಾಗಮನ; ಭಾವನಾತ್ಮಕವಾಗಿ ಹಂಚಿಕೊಂಡ ದಿನೇಶ್ ಕಾರ್ತಿಕ್!

ಸುಮಾರು ಮೂರು ವರ್ಷಗಳಿಂದ ಟೀಮ್ ಇಂಡಿಯಾದಿಂದ ಸೈಡ್‌ಲೈನ್‌ನಲ್ಲಿದ್ದ ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಭಾರತ ತಂಡದೊಂದಿಗೆ ತಮ್ಮ ಎರಡನೇ ಹಂತದ ಕ್ರಿಕೆಟ್ ಜೀವನದ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದಾರೆ. ಇದನ್ನು ಖುದ್ದು ಅವರೇ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಗಾಗಿ ಭಾರತೀಯ ತಂಡಕ್ಕೆ ಪುನರಾಗಮನ ಮಾಡಿದ್ದಾರೆ ಮತ್ತು ಈ ತಿಂಗಳ ಕೊನೆಯಲ್ಲಿ ಐರ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳಿಗೆ ತಂಡದ ಭಾಗವಾಗಲಿದ್ದಾರೆ.
ಶುಕ್ರವಾರ ರಾಜ್‌ಕೋಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯಕ್ಕೂ ಮುಂಚಿತವಾಗಿ ಮಾತನಾಡಿದ ದಿನೇಶ್ ಕಾರ್ತಿಕ್, ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಆಡುವ ಕನಸು ಅವರನ್ನು ಒಂದು ದಶಕದಿಂದ ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರಿಸಿದೆ ಎಂದು ಹೇಳಿದರು.
ಪ್ರತಿ ಸೆಕೆಂಡ್ ಅನ್ನು ನಾನು ಆನಂದಿಸುತ್ತಿದ್ದೇನೆ
"ಸುಮಾರು ಮೂರು ವರ್ಷಗಳಿಂದ ನಾನು ತಂಡದ ಹೊರಗಿನಿಂದ ನೋಡುತ್ತಿದ್ದೇನೆ. ಈ ತಂಡದ ಭಾಗವಾಗುವುದು ಎಷ್ಟು ವಿಶೇಷವಾದ ಭಾವನೆ ಎಂದು ನಾನು ನೋಡುತ್ತಿದ್ದೇನೆ. ನಾನು ಇಲ್ಲಿರುವ ಪ್ರತಿ ಸೆಕೆಂಡ್ ಅನ್ನು ನಾನು ಆನಂದಿಸುತ್ತಿದ್ದೇನೆ ಮತ್ತು ತುಂಬಾ ಕೃತಜ್ಞನಾಗಿದ್ದೇನೆ. ಭಾರತ ತಂಡಕ್ಕೆ ಹಿಂತಿರುಗುವುದು, ರಾಷ್ಟ್ರೀಯ ಬಣ್ಣದ ಜೆರ್ಸಿಯನ್ನು ಧರಿಸುವುದು ತುಂಬಾ ಹೆಮ್ಮೆಯ ವಿಷಯ," ಎಂದರು.
"ಭಾರತ ತಂಡವನ್ನು ಪ್ರತಿನಿಧಿಸುವ ಬಯಕೆಯ ವಿಷಯದಲ್ಲಿ ನಾನು ಹೊಟ್ಟೆಯಲ್ಲಿ ಬೆಂಕಿ ಇರುವುಂತೆ, ನಾನು ದಿನನಿತ್ಯ ಕನಸು ಕಾಣುತ್ತೇನೆ ಮತ್ತು ಇದು ಕಳೆದ ಒಂದು ದಶಕದಿಂದ ನನ್ನನ್ನು ಮುಂದುವರಿಸಿದ್ದೆ," ಎಂದು ಬಿಸಿಸಿಐ ಟ್ವಿಟ್ಟರ್‌ನಲ್ಲಿ ದಿನೇಶ್ ಕಾರ್ತಿಕ್ ತಮ್ಮ ಅನುಭವ ಹಂಚಿಕೊಂಡರು.

ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ
ದಿನೇಶ್ ಕಾರ್ತಿಕ್ ಇಲ್ಲಿಯವರೆಗೆ ಎಲ್ಲಾ ಮೂರು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ, 1*(2), 30*(21) ಮತ್ತು 6(8) ರನ್‌ಗಳನ್ನು ಬಾರಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 48 ರನ್‌ಗಳಿಂದ ಸೋಲಿಸಿದೆ. ಆದರೂ ದಕ್ಷಿಣ ಆಫ್ರಿಕಾ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ರಾಜ್‌ಕೋಟ್‌ನಲ್ಲಿ ಶುಕ್ರವಾರ ನಡೆಯಲಿರುವ 4ನೇ ಟಿ20 ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಕೊನೆಯ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಅದ್ಭುತ ಪ್ರದರ್ಶನದಿಂದ ಭಾರತ ತಂಡಕ್ಕೆ ಮರಳಿದ
37 ವರ್ಷ ವಯಸ್ಸಿನ ದಿನೇಶ್ ಕಾರ್ತಿಕ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ ಭಾರತ ತಂಡಕ್ಕೆ ಮರಳಿದರು. ಅವರು ಫಿನಿಶರ್ ಪಾತ್ರವನ್ನು ನಿರ್ವಹಿಸಿದರು ಮತ್ತು ಆರ್‌ಸಿಬಿ ತಂಡವನ್ನು ಐಪಿಎಲ್ 2022ರ ಪ್ಲೇಆಫ್ ಹಂತಗಳನ್ನು ತಲುಪುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.
ಐಪಿಎಲ್‌ನ 16 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ 55.00 ಸರಾಸರಿಯಲ್ಲಿ 183.33ರ ಸ್ಟ್ರೈಕ್ ರೇಟ್ ಸಹಾಯದೊಂದಿಗೆ 330 ರನ್‌ಗಳನ್ನು ಗಳಿಸಿದರು ಮತ್ತು ಸರಾಸರಿ ಮತ್ತು ಸ್ಟ್ರೈಕ್ ರೇಟ್‌ಗೆ ಸಂಬಂಧಿಸಿದಂತೆ ಇದು ಅವರ ಅತ್ಯುತ್ತಮ ಐಪಿಎಲ್ ಋತುವಾಗಿತ್ತು.

ಐರ್ಲೆಂಡ್ ವಿರುದ್ಧ ಭಾರತದ ಟಿ20 ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications