PCB: ಪಾಕಿಸ್ತಾನದ ಅಂತಿಮ ತಂಡದ ಘೋಷಣೆಯ ಬಗ್ಗೆ ಪಿಸಿಬಿ ಹೇಳಿದ್ದೇನು?
ಪಾಕಿಸ್ತಾನ ಮತ್ತು ಯುಎಇ ಆತಿಥ್ಯದಲ್ಲಿ ನಡೆಯುವ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಂದು ಪ್ರಾರಂಭವಾಗಲಿದೆ. ಭದ್ರತಾ ಕಾರಣಗಳಿಂದಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿಲ್ಲ. ಟೀಮ್ ಇಂಡಿಯಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಈ ಮೆಗಾ ಟೂರ್ನಿ ಆರಂಭವಾಗುವ ಕೆಲವು ದಿನಗಳ ಮೊದಲು, ಆತಿಥೇಯ ಪಾಕಿಸ್ತಾನ ತನ್ನ ತಂಡದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿದೆ. ಹಿಂದೆ ಆಯ್ಕೆ ಮಾಡಲಾದ ತಂಡದಲ್ಲಿ ಅವರು ಯಾವುದೇ ಬದಲಾವಣೆಗಳನ್ನು ಮಾಡಲಿಲ್ಲ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಕೆಲವು ಆಟಗಾರರನ್ನು ಸೇರಿಸಿಕೊಂಡ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಪಿಸಿಬಿ ಆಯ್ಕೆದಾರರು ತಂಡವನ್ನು ಪರಿಶೀಲಿಸಿದರು. ಬ್ಯಾಟರ್ ಖುಶ್ದಿಲ್ ಶಾ ಮತ್ತು ಆಲ್‌ರೌಂಡರ್ ಫಹೀಮ್ ಅಶ್ರಫ್ ಅವರ ಆಯ್ಕೆಯ ಬಗ್ಗೆ ಟೀಕೆ ವ್ಯಕ್ತವಾಗಿತ್ತು.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಆಯ್ಕೆದಾರರು 15 ಸದಸ್ಯರ ತಂಡವನ್ನು ಪರಿಶೀಲಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಾಂತ್ರಿಕ ಸಮಿತಿಯು ಬದಲಾವಣೆಗಳನ್ನು ಮಾಡಲು ನಿಗದಿಪಡಿಸಿದ ಗಡುವು ಮಂಗಳವಾರ ಮುಕ್ತಾಯಗೊಂಡರೂ, ಕೊನೆಯ ಕ್ಷಣದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪಿಸಿಬಿಯ ಮೂಲವೊಂದು ತಿಳಿಸಿದೆ.
ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಈಗಾಗಲೇ ಪ್ರಕಟಿಸಿರುವ 15 ಆಟಗಾರರು ಪಾಕಿಸ್ತಾನವನ್ನು ಪ್ರತಿನಿಧಿಸಲಿದ್ದಾರೆ. ಯಾವುದೇ ಆಟಗಾರ ಗಾಯಗೊಂಡರೆ, ಐಸಿಸಿ ನಿಯಮಗಳ ಪ್ರಕಾರ ಬದಲಿ ಆಟಗಾರನನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪಿಸಿಬಿಯ ಮೂಲಗಳು ತಿಳಿಸಿವೆ. ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ತಂಡವು ಒಂದಕ್ಕಿಂತ ಹೆಚ್ಚು ಸ್ಪೆಷಲಿಸ್ಟ್ ಓಪನರ್‌ಗಳನ್ನು ಹೊಂದಿರದ ಮತ್ತು ಕೇವಲ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಕೆಲವು ಮಾಜಿ ಆಟಗಾರರು ಟೀಕೆ ಮಾಡಿದ್ದರು.
ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತಂಡ
ಮೊಹಮ್ಮದ್ ರಿಜ್ವಾನ್ (ನಾಯಕ), ಬಾಬರ್ ಅಜಮ್, ಫಖರ್ ಜಮಾನ್, ಸೌದ್ ಶಕೀಲ್, ಕಮ್ರಾನ್ ಗುಲಾಮ್, ತಯ್ಯಬ್ ತಾಹಿರ್, ಸಲ್ಮಾನ್ ಅಲಿ ಆಘಾ, ಖುಶ್ದಿಲ್ ಶಾ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್ ಮತ್ತು ಹ್ಯಾರಿಸ್ ರೌಫ್.
ಇತ್ತೀಚೆಗೆ ಪಾಕಿಸ್ತಾನ ಸರ್ಕಾರವು ದೇಶದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭದ್ರತೆಯನ್ನು ಹೆಚ್ಚಿಸಲು ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ರೇಂಜರ್‌ಗಳನ್ನು ಬಳಸಲು ಅನುಮೋದನೆ ನೀಡಿತ್ತು. ವರದಿಗಳ ಪ್ರಕಾರ, ಈ ಮೆಗಾ ಟೂರ್ನಿಗೆ ಫೆಡರಲ್ ಕ್ಯಾಬಿನೆಟ್ ಬಲಿಷ್ಠ ಭದ್ರತಾ ಯೋಜನೆಯನ್ನು ಅನುಮೋದಿಸಿತ್ತು. ಈ ಭಧ್ರತೆ ಯೋಜನೆಯಲ್ಲಿ ಸೈನ್ಯ ಮತ್ತು ರೇಂಜರ್‌ಗಳು ಇರಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications