Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's World Cup 2025: ಪಾಕಿಸ್ತಾನ ತಂಡದ ಭಾರತ ಪ್ರವಾಸದ ಬಗ್ಗೆ ಪಿಸಿಬಿ ಅಧ್ಯಕ್ಷರು ಹೇಳಿದ್ದೇನು?

ಚಾಂಪಿಯನ್ಸ್ ಟ್ರೋಫಿಯ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನಾಟಕ ಮತ್ತೊಮ್ಮೆ ಆರಂಭವಾಗಿದೆ. ಈ ವರ್ಷ ಭಾರತದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ಗೆ ಸಂಬಂಧಿಸಿದಂತೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿಚಿತ್ರ ಹೇಳಿಕೆ ನೀಡಿದ್ದಾರೆ. ಈ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ತಮ್ಮ ಮಹಿಳಾ ತಂಡ ಪ್ರಯಾಣಿಸುವುದಿಲ್ಲ ಎಂದು ನಖ್ವಿ ಶನಿವಾರ ಹೇಳಿದ್ದಾರೆ. ಈ ಹೇಳಿಕೆಯ ನಂತರ, ಅವರು ಭಾರತದಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ಐಸಿಸಿ ಅನುಮೋದಿಸಿದ ಹೈಬ್ರಿಡ್ ಮಾದರಿಯಲ್ಲಿ ನಿರ್ಧರಿಸಿದಂತೆ ಪಾಕಿಸ್ತಾನ ತಂಡವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಿದೆ ಎಂದು ಮೊಹ್ಸಿನ್ ನಖ್ವಿ ಸ್ಪಷ್ಟಪಡಿಸಿದರು. ಇತ್ತೀಚೆಗೆ ಪಾಕಿಸ್ತಾನ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿತ್ತು. ಆದರೆ ಪಾಕಿಸ್ತಾನಕ್ಕೆ ಭಾರತ ಭದ್ರತಾ ಕಾರಣಗಳಿಂದ ಹೋಗಲು ನಿರಾಕರಿಸಿತು. ಹೀಗಾಗಿ ಭಾರತ ತನ್ನ ಪಂದ್ಯಗಳು ದುಬೈನಲ್ಲಿ ಆಡಿತು.

What did the PCB chairman say about the Pakistan team s tour of India

ಭಾರತ ತಂಡ ಪಾಕಿಸ್ತಾನಕ್ಕೆ ಹೋಗದ ಕಾರಣ ಐಸಿಸಿ ಟೂರ್ನಿಗಳ ಸಮಯದಲ್ಲಿ ಹೈಬ್ರಿಡ್ ಮಾದರಿ ಅಡಿಯಲ್ಲಿ ಉಭಯ ತಂಡಗಳ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಿಸಲು ನಿರ್ಧರಿಸಲಾಯಿತು. ಈಗ ಭಾರತ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿದ್ದು, ಪಾಕಿಸ್ತಾನ ತಂಡ ಭಾರತಕ್ಕೆ ಬರುತ್ತಿಲ್ಲ.

ಮೊಹ್ಸಿನ್ ನಖ್ವಿ ಹೇಳಿದ್ದೇನು?

"ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಕಿಸ್ತಾನದಲ್ಲಿ ಆಡಲಿಲ್ಲ. ಅವರಿಗೆ ತಟಸ್ಥ ಸ್ಥಳದಲ್ಲಿ ಆಡಲು ಅವಕಾಶ ನೀಡಲಾಯಿತು, ಹಾಗೆಯೇ ನಾವು ಯಾವುದೇ ಸ್ಥಳದಲ್ಲಿ ನಿರ್ಧರಿಸಲ್ಪಟ್ಟರೂ ಆಡುತ್ತೇವೆ. ಒಪ್ಪಂದವಾದಾಗ ಅದನ್ನು ಪಾಲಿಸಬೇಕು. ಭಾರತ ಮತ್ತು ಐಸಿಸಿ ಟೂರ್ನಿಯ ಆತಿಥೇಯರಾಗಿರುವುದರಿಂದ ತಟಸ್ಥ ಸ್ಥಳವನ್ನು ನಿರ್ಧರಿಸುತ್ತವೆ ಎಂದು ಎಂದು ನಖ್ವಿ ಹೇಳಿದ್ದಾರೆ.

ಭಾರತವು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 26 ರವರೆಗೆ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲಿದೆ. ಆಸ್ಟ್ರೇಲಿಯಾ ಮಹಿಳಾ ಏಕದಿನ ವಿಶ್ವಕಪ್‌ನ ಹಾಲಿ ಚಾಂಪಿಯನ್ ಆಗಿದೆ. ಲಾಹೋರ್‌ನಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿಯೂ ಜಯಗಳಿಸಿತು. ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್, ಥೈಲ್ಯಾಂಡ್ ಮತ್ತು ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಪಾಕಿಸ್ತಾನ ತಂಡ ಅರ್ಹತೆ ಪಡೆಯಿತು. ಆತಿಥೇಯ ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ.

Story first published: Saturday, April 19, 2025, 23:39 [IST]
Other articles published on Apr 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+