SMATನಲ್ಲಿ ಸೆಮಿಫೈನಲ್‌ಗೆ ಕರ್ನಾಟಕ; ನವೆಂಬರ್ 18ರ ಕ್ರಿಕೆಟ್ ಸುದ್ದಿಗಳು

ನವೆಂಬರ್ 18ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು, ಒಂದೆಡೆ ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಂಗಾಳ ವಿರುದ್ಧ ಕರ್ನಾಟಕ ಜಯ ಸಾಧಿಸುವುದರ ಮೂಲಕ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದರೆ, ಮತ್ತೊಂದೆಡೆ ನಿನ್ನೆ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ ಟ್ವೆಂಟಿ ಪಂದ್ಯದ ಬೆಳೆ ನಾಯಕ ರೋಹಿತ್ ಶರ್ಮಾ ಮೊಹಮ್ಮದ್ ಸಿರಾಜ್ ಅವರ ತಲೆಗೆ ತಮಾಷೆಯಾಗಿ ಹೊಡೆದ ವಿಡಿಯೋ ಇಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ನವೆಂಬರ್ 18ರ ಕ್ರಿಕೆಟ್ ಸುದ್ದಿಗಳು ಈ ಕೆಳಕಂಡಂತಿವೆ.
* ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಜೇಸನ್ ಹೋಲ್ಡರ್, ಕ್ರಿಕೆಟ್ ದಿಗ್ಗಜ , ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್‌ಗೇಲ್‌ಗೆ ಕಿಕ್ಕಿರಿದು ತುಂಬಿರುವ ತವರಿನ ಪ್ರೇಕ್ಷಕರ ಎದುರು ಬೀಳ್ಕೊಡುಗೆ ಸಿಗಬಹುದೆಂಬ ಭರವಸೆ ವ್ಯಕ್ತಪಡಿಸಿದ್ದಾರೆ. 2021ರ ಟಿ 20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಪರ ಕಾಣಿಸಿಕೊಂಡಿರುವ ಗೇಲ್, ಜಮೈಕಾದಲ್ಲಿ ತಮ್ಮ ತವರು ಅಭಿಮಾನಿಗಳ ಮುಂದೆ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
* 18ನೇ ಓವರ್ ಬೌಲಿಂಗ್ ಮಾಡಲು ಬಂದ ದೀಪಕ್ ಚಹರ್ ಎಸೆದ ಮೊದಲ ಎಸೆತಕ್ಕೆ ಗಪ್ಟಿಲ್ ಸಿಕ್ಸರ್ ಬಾರಿಸಿದರು. ಹೀಗೆ ದೀಪಕ್ ಚಹರ್ ಎಸೆತಕ್ಕೆ ಸಿಕ್ಸರ್ ಬಾರಿಸಿದ ಮಾರ್ಟಿನ್ ಗಪ್ಟಿಲ್ ದೀಪಕ್ ಚಹರ್ ಅವರನ್ನೇ ದಿಟ್ಟಿಸಿ ನೋಡುವುದರ ಮೂಲಕ ಕೆರಳಿಸಿದ್ದರು. ಹೀಗೆ ಮೊದಲನೇ ಎಸೆತವನ್ನು ಹಾಕಿ ಸಿಕ್ಸರ್ ಚಚ್ಚಿಸಿಕೊಂಡಿದ್ದ ದೀಪಕ್ ಚಹರ್ ದ್ವಿತೀಯ ಎಸೆತದಲ್ಲಿ ಗಪ್ಟಿಲ್ ವಿಕೆಟ್ ಪಡೆಯುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡರು. ಹೌದು ವಿಕೆಟ್ ಪಡೆದ ನಂತರ ಮಾರ್ಟಿನ್ ಗಪ್ಟಿಲ್ ಅವರನ್ನು ದೀಪಕ್ ಚಹರ್ ದಿಟ್ಟಿಸಿ ನೋಡುವ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡರು. ಹೀಗೆ ಜೈಪುರ ಕ್ರಿಕೆಟ್ ಕ್ರೀಡಾಂಗಣದ ಅಂಗಳದಲ್ಲಿ ಮಾರ್ಟಿನ್ ಗಪ್ಟಿಲ್ ಮತ್ತು ದೀಪಕ್ ಚಹರ್ ನಡುವೆ ನಡೆದ ದೃಷ್ಟಿಯುದ್ಧ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಮನರಂಜನೆಯನ್ನು ನೀಡಿತು. ಪಂದ್ಯ ಮುಗಿದ ನಂತರ ದೀಪಕ್ ಚಹರ್ ಮಾರ್ಟಿನ್ ಗಪ್ಟಿಲ್ ಅವರನ್ನು ದಿಟ್ಟಿಸಿ ನೋಡಿದ ಕ್ಷಣವನ್ನು ಮೂಮೆಂಟ್ ಆಫ್ ದಿ ಮ್ಯಾಚ್ ಎಂದು ಗುರುತಿಸಿ 1 ಲಕ್ಷ ಬಹುಮಾನ ನೀಡಲಾಯಿತು.
* ಟೀಮ್ ಇಂಡಿಯಾ ಹೆಡ್ ಕೋಚ್ ಆಗುವ ಆಫರ್ ಐಪಿಎಲ್ ವೇಳೆಯಲ್ಲಿ ನನಗೆ ಬಂದಿತ್ತು ಎಂಬ ಹೇಳಿಕೆ ನೀಡುವುದರ ಮೂಲಕ ರಿಕಿ ಪಾಂಟಿಂಗ್ ಗೊಂದಲವನ್ನು ಹುಟ್ಟುಹಾಕಿದ್ದಾರೆ. ಬಿಸಿಸಿಐ ಇತ್ತೀಚೆಗಷ್ಟೇ ರಾಹುಲ್ ದ್ರಾವಿಡ್ ಅವರನ್ನು ಯಾವುದೇ ಪೈಪೋಟಿಗಳಿಲ್ಲದೆ ಟೀಮ್ ಇಂಡಿಯಾ ಕೋಚ್ ಎಂದು ಆಯ್ಕೆ ಮಾಡಿತ್ತು. ಆದರೆ ಇದೀಗ ಐಪಿಎಲ್ ವೇಳೆಯಲ್ಲಿಯೇ ಟೀಮ್ ಇಂಡಿಯಾ ಕೋಚ್ ಆಗುವ ಆಫರ್ ಬಂದಿತ್ತು ಎಂಬ ರಿಕಿ ಪಾಂಟಿಂಗ್ ಅವರ ಹೇಳಿಕೆ ರಾಹುಲ್ ದ್ರಾವಿಡ್ ಅವರಿಗೂ ಮುಂಚೆಯೇ ರಿಕಿ ಪಾಂಟಿಂಗ್ ಅವರಿಗೆ ಟೀಮ್ ಇಂಡಿಯಾ ಹೆಡ್ ಕೋಚ್ ಆಗುವ ಆಫರ್ ಹೋಗಿತ್ತಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
* ತಂಡದ ಬ್ಯಾಟಿಂಗ್ ಆಧಾರಸ್ಥಂಭವಾಗಿರುವ ಮಯಾಂಕ್ ಅಗರ್ವಾಲ್ ಅವರ ವಿಡಿಯೋವನ್ನು ಪಂಜಾಬ್ ಕಿಂಗ್ಸ್ ಹಂಚಿಕೊಂಡಿದೆ. ಈ ಮೂಲಕ ಮುಂದಿನ ಮಹಾ ಹರಾಜಿಗೂ ಮುನ್ನ ಫ್ರಾಂಚೈಸಿ ಪ್ರಮುಖ ಸುಳಿವೊಂದನ್ನು ಬಿಟ್ಟುಕೊಟ್ಟಿದೆ. ಈ ಸಂದರ್ಭದಲ್ಲಿ ಮಯಾಂಕ್ ಅವರ ವಿಡಿಯೋ ಹಂಚಿಕೊಂಡಿರುವ ಫ್ರಾಂಚೈಸಿ "ಮಯಾಂಕ್ ಅಗರ್ವಾಲ್ ಪರವಾಗಿ ಸದ್ದು ಮಾಡಿ" ಎಂದು ಬರೆದುಕೊಂಡಿದೆ. ಇದು ಕುತೂಹಲ ಮೂಡಿಸಿದೆ. ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತೊರೆಯುವ ಕಾರಣದಿಂದಾಗಿ ತಂಡದ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬ ಕುತೂಲ ಮೂಡಿಸಿದೆ. ಇದಕ್ಕೆ ಮಯಾಂಕ್ ಅಗರ್ವಾಲ್ ಅವರು ಸಮರ್ಥ ಆಟಗಾರನೂ ಆಗಿದ್ದಾರೆ. ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ಟ್ವಿಟ್ಟರ್ ಪೋಸ್ಟ್‌ನಲ್ಲಿ ಇದೇ ಸುಳಿವನ್ನು ನೀಡುತ್ತಿದೆಯಾ ಎಂಬ ಕುತೂಹಲ ಅಭಿಮಾನಿಗಳದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications