Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಪಾಂಟಿಂಗ್, ಗಂಗೂಲಿಯಿಂದ ಕಲಿತಿದ್ದನ್ನು ವಿಶ್ವಕಪ್‌ ವೇಳೆ ಬಳಸಿಕೊಳ್ಳುವೆ'

ಇಲ್ಲಿ ಏನು ಕಲಿತೆ ಅನ್ನೋದನ್ನ ವಿಶ್ವಕಪ್ ನಲ್ಲಿ ತೋರಿಸುತ್ತೇನೆ..! | Oneindia Kannada
What I am learning from Ponting, Ganguly will use during World Cup: Dhawan

ನವದೆಹಲಿ, ಏಪ್ರಿಲ್ 25: ಕ್ರಿಕೆಟ್ ದಂತಕತೆಗಳಾದ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿಯಂತವರಿಂದ ಸಾಕಷ್ಟನ್ನು ಕಲಿತಿದ್ದೇನೆ. ಹೀಗೆ ಕಲಿತಿದ್ದನ್ನು ಮುಂಬರಲಿರುವ ವಿಶ್ವಕಪ್ ವೇಳೆ ಬಳಸಿಕೊಳ್ಳುವೆ ಎಂದು ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಹೇಳಿದ್ದಾರೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಧವನ್ ಸದ್ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಡೆಲ್ಲಿ ತಂಡಕ್ಕೆ ಆಸ್ಟ್ರೇಲಿಯಾ ಮಾಜಿ ನಾಯಕ ಪಾಂಟಿಂಗ್ ಮುಖ್ಯ ತರಬೇತುದಾರರಾಗಿದ್ದರೆ, ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಗಂಗೂಲಿ, ಫ್ರಾಂಚೈಸಿಯ ಮಾರ್ಗದರ್ಶಕ ಜವಾಬ್ದಾರಿಯಲ್ಲಿದ್ದಾರೆ.

'ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಜೊತೆ ಕೆಲಸ ಮಾಡುತ್ತಿರುವುದಕ್ಕೆ ನಾನು ನಿಜಕ್ಕೂ ಅದೃಷ್ಟಶಾಲಿ. ಅವರಿಬ್ಬರೂ ಶ್ರೇಷ್ಠ ನಾಯಕರು. ಡೆಲ್ಲಿ ತಂಡದ ಮೂಲಕ ಅವರ ಹತ್ತಿರದಲ್ಲಿರುವುದರಿಂದ ಅವರ ಒಳನೋಟ, ಮನಸ್ಥಿತಿಯ ಬಗ್ಗೆ ಅರಿತುಕೊಳ್ಳಬಲ್ಲೆ' ಎಂದು ಧವನ್ ಎಂದಿದ್ದಾರೆ.

ಮಾತು ಮುಂದುವರೆಸಿದ ಧವನ್, ' ಕ್ರಿಕೆಟ್‌ಗೆ ಸಂಬಂಧಿಸಿ ನಾನು ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿಯುತ್ತಿದ್ದೇನೆ. ಅದು ನನ್ನ ಸಹಾಯಕ್ಕೂ ಬಂದಿದೆ. ನಾನದಕ್ಕೆ ಅಭಾರಿಯೂ ಆಗಿದ್ದೇನೆ. ಐಪಿಎಲ್‌ನಲ್ಲಿ ಅವರಿಂದ ಏನೆಲ್ಲ ಕಲಿತಿದ್ದೇನೋ ಅವನ್ನು ವಿಶ್ವಕಪ್ ವೇಳೆ ಬಳಸಿಕೊಳ್ಳುತ್ತೇನೆ ಎಂಬ ವಿಶ್ವಾಸ ನನಗಿದೆ' ಎಂದರು.

Story first published: Thursday, April 25, 2019, 18:26 [IST]
Other articles published on Apr 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+