T20 World Cup 2022: ಒಂದು ವೇಳೆ ರಿಷಬ್ ಪಂತ್ ಪಾಕಿಸ್ತಾನ ತಂಡದಲ್ಲಿದ್ದರೆ, ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಿದೆ. ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋತ ಪಾಕಿಸ್ತಾನದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ನಂತರದ ಪಂದ್ಯದಲ್ಲಿ ಯಾವಾಗ ಜಿಂಬಾಬ್ವೆ ವಿರುದ್ಧ ರೋಚಕ ಪಂದ್ಯದಲ್ಲಿ ಒಂದು ರನ್‌ನಿಂದ ಸೋತರೋ ಆಗ ಬಹಳಷ್ಟು ಟೀಕೆಗಳು ವ್ಯಕ್ತವಾದವು.
ಟಿ20 ವಿಶ್ವಕಪ್‌ಗೆ ತಂಡವನ್ನು ಘೋಷಣೆ ಮಾಡಿದಾಗಿನಿಂದಲೂ ಹಲವರು ತಂಡದ ಆಯ್ಕೆ ಬಗ್ಗೆ ಟೀಕೆ ಮಾಡಿದ್ದರು. ಹಲವಾರು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಆಯ್ಕೆ ಸಮಿತಿ ಮತ್ತು ಬಾಬರ್ ಅಜಮ್ ಅವರ ನಾಯಕತ್ವದ ವಿರುದ್ಧ ಕಿಡಿ ಕಾರಿದ್ದಾರೆ.
ಈಗ ಪಾಕಿಸ್ತಾನದ ಮಾಜಿ ವೇಗಿ ವಹಾಬ್ ರಿಯಾಜ್ ಕೂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಕಿಡಿಕಾರಿದ್ದು, ಭಾರತ ತಂಡದ ಉದಾಹರಣೆ ನೀಡಿದ್ದಾರೆ. ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ತನ್ನ ಆಟಗಾರರಿಗೆ ಹೇಗೆ ಸ್ಥಿರ ಪಾತ್ರಗಳನ್ನು ನಿರ್ಧರಿಸುತ್ತದೆ ಎಂದು ಭಾರತದ ರಿಷಬ್ ಪಂತ್ ಅವರ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. ಇದೇ ವಿಚಾರದಲ್ಲಿ ಪಾಕಿಸ್ತಾನ ತಂಡದ ಮನಸ್ಥಿತಿಯ ಬಗ್ಗೆ ಟೀಕಿಸಿದ್ದಾರೆ.

ಪಂತ್ ಬದಲಿಗೆ ದಿನೇಶ್ ಕಾರ್ತಿಕ್‌ಗೆ ಅವಕಾಶ
ಪಂತ್ ಈ ಸಮಯದಲ್ಲಿ ಆಟದಲ್ಲಿ ಅತ್ಯಂತ ಪ್ರತಿಭಾವಂತ ವಿಕೆಟ್-ಕೀಪರ್ ಬ್ಯಾಟರ್ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಆದರೆ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಮತ್ತೊಂದೆಡೆ, ದಿನೇಶ್ ಕಾರ್ತಿಕ್ ಕಳೆದ ವರ್ಷ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು, ಭಾರತದ ಪರವಾಗಿ ಕೂಡ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಆದ್ದರಿಂದ, ಭಾರತ ತಂಡದ ಮ್ಯಾನೇಜ್‌ಮೆಂಟ್ ವಿಶ್ವಕಪ್ ತಂಡದಲ್ಲಿ ಫಿನಿಶರ್‌ನ ಪಾತ್ರಕ್ಕಾಗಿ ಪಂತ್‌ಗಿಂತ ದಿನೇಶ್ ಕಾರ್ತಿಕ್‌ಗೆ ಆದ್ಯತೆ ನೀಡಿದೆ.
ಆ ಇಬ್ಬರ ಮೇಲೆ ಪಾಕಿಸ್ತಾನ ಅವಲಂಬಿತವಾಗಿರುವುದು ನಿಜ: ಒಪ್ಪಿಕೊಂಡ ಪಾಕ್ ಉಪ ನಾಯಕ

ರಿಷಬ್ ಪಂತ್ ಪಾಕಿಸ್ತಾನ ತಂಡದಲ್ಲಿದ್ದರೆ!
"ಎಂಎಸ್ ಧೋನಿ ನಂತರ ರಿಷಬ್ ಪಂತ್ ಭಾರತದ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದಾರೆ. ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಶತಕಗಳನ್ನು ಸಿಡಿಸಿದ್ದಾರೆ. ಅವರು ಪಾಕಿಸ್ತಾನ ತಂಡದಲ್ಲಿದ್ದರೆ, ಆತ ವಿಶ್ವಕಪ್ ಪಂದ್ಯವೊಂದರಲ್ಲಿ ಹೀಗೆ ಹೊರಗೆ ಕುಳಿತುಕೊಳ್ಳುತ್ತಿದ್ದರಾ? ಇಲ್ಲ ಅದಕ್ಕೆ ಅವಕಾಶ ಇರುತ್ತಿರಲಿಲ್ಲ. ಆದರೆ ಭಾರತ, ದಿನೇಶ್ ಕಾರ್ತಿಕ್ ಅವರನ್ನು ಆಡಿಸಲು ಪಂತ್ ಅವರನ್ನು ಹೊರಗಿಟ್ಟಿತು. ಪಂತ್ ಒಬ್ಬ ಉತ್ತಮ ಆಟಗಾರ ಎಂದು ಅವರಿಗೆ ತಿಳಿದಿದೆ, ಆದರೆ ಅವರು ಫಿನಿಶರ್ ಆಗಲು ಸಾಧ್ಯವಿಲ್ಲ. ಅವರಿಗೆ ಒಬ್ಬ ಫಿನಿಶರ್ ಬೇಕು. ಪಂತ್ ಒಂದೆರಡು ಸಿಕ್ಸರ್‌ಗಳನ್ನು ಬಾರಿಸಬಹುದು ಆದರೆ ಆಟವನ್ನು ಪೂರ್ಣಗೊಳಿಸಲು ವಿಫಲವಾದರೆ, ಭಾರತವು ಸೋಲುತ್ತದೆ, ಆದ್ದರಿಂದ ಟೀಂ ಇಂಡಿಯಾ ಇಂತ ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿದೆ" ಎಂದು ರಿಯಾಜ್ ಹೇಳಿದ್ದಾರೆ.

ಸಹಮತ ವ್ಯಕ್ತಪಡಿಸಿದ ಮೊಹಮ್ಮದ್ ಅಮೀರ್
ಇದಕ್ಕೆ ಮತ್ತೊಬ್ಬ ಮಾಜಿ ಕ್ರಿಕಟರ್ ಮೊಹಮ್ಮದ್ ಅಮೀರ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. "ನಾನು ರಿಯಾಜ್ ಮಾತನ್ನು ಒಪ್ಪುತ್ತೇನೆ. ಅವರು ನೀಡಿದ ರಿಷಭ್ ಪಂತ್ - ಡಿಕೆ ಉದಾಹರಣೆ ಸಂಪೂರ್ಣವಾಗಿ ಒಪ್ಪುವಂತದ್ದಾಗಿದೆ. ರವೀಂದ್ರ ಜಡೇಜಾ ಟಿ 20 ವಿಶ್ವಕಪ್‌ನಿಂದ ಹೊರಗುಳಿದಾಗ, ಅವರು ಅಕ್ಷರ್ ಪಟೇಲ್‌ರನ್ನು ಆಯ್ಕೆ ಮಾಡಿದರು, ಮತ್ತೊಬ್ಬ ಬೌಲರ್ ಆಯ್ಕೆಗೆ ಹೋಗಲಿಲ್ಲ." ಎಂದು ಅವರು ಹೇಳಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಿದ ಎರಡು ಪಂದ್ಯಗಳಲ್ಲಿ, ಪಂತ್‌ಗಿಂತ ಕಾರ್ತಿಕ್ ವಿಕೆಟ್‌ಕೀಪರ್ ಪಾತ್ರಕ್ಕೆ ಆದ್ಯತೆ ನೀಡಲಾಗಿದೆ. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ, ಭಾರತವು ತಮ್ಮ ತಂಡದ ಸಂಯೋಜನೆಯನ್ನು ಬದಲಾಯಿಸುವ ನಿರೀಕ್ಷೆಯಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications