
ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಇಶಾನ್ ಕಿಶನ್ ಸ್ಪರ್ಧೆ
ಇಶಾಂತ್ ಕಿಶನ್ ಭಾರತ ತಂಡದ ಬಹು ಬೇಡಿಕೆಯ ಆಟಗಾರರಲ್ಲಿ ಒಬ್ಬರು. ಭಾರತದ ಎಡಗೈ ಓಪನರ್ ಆಡುವ 11 ರಲ್ಲಿ ಸ್ಥಾನವನ್ನು ಕಂಡುಕೊಳ್ಳುವುದು ಕಷ್ಟಕರವಾಗಿದೆ. ಏಕೆಂದರೆ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಪ್ರಮುಖ ಆರಂಭಿಕರು. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಇಶಾನ್ ಅವರನ್ನು ಬ್ಯಾಕಪ್ ಆಗಿ ಎಂದು ಪರಿಗಣಿಸಬಹುದು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ 48 ಎಸೆತಗಳಲ್ಲಿ 76 ರನ್ ಗಳಿಸಿದ್ದರು. ಇದರಲ್ಲಿ 11 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿವೆ.
IPL Media Rights E Auction: ಸ್ಥಳ, ಸಮಯ, ಬಿಡ್‌ದಾರರು, ಮೂಲ ಬೆಲೆಯ ಸಂಪೂರ್ಣ ಮಾಹಿತಿ

ಇಶಾನ್ ಕಿಶನ್ ಆಟಕ್ಕೆ ಒಲಿಯುವುದೇ ಟಿ20 ವಿಶ್ವಕಪ್‌ನಲ್ಲಿ ಸ್ಥಾನ
ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಇಶಾನ್ ಕಿಶನ್ ಪ್ರದರ್ಶನವನ್ನು ವ್ಯಾಪಕವಾಗಿ ಪರಿಗಣಿಸಲಾಗುವುದು ಎಂದು ಭಾರತದ ಮಾಜಿ ಆರಂಭಿಕ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಇಶಾನ್ ಒಂದು ಇನ್ನಿಂಗ್ಸ್ ಆಡಿದ್ರೆ ಸಾಲದು ಪರ್ವತವನ್ನು ಸೃಷ್ಟಿಸಬೇಕಾಗಿದೆ ಎಂದು ಇಶಾನ್ ಬಗ್ಗೆ ಆಕಾಶ್ ಚೋಪ್ರಾ ಹೇಳಿದರು.
'ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿರುವ ಅವರನ್ನು ಟಿ20 ವಿಶ್ವಕಪ್‌ಗೆ ಪರಿಗಣಿಸಲಾಗುವುದೇ? ನನ್ನ ಅಭಿಪ್ರಾಯದಲ್ಲಿ ಇದು ಕೇವಲ ಆರಂಭ ಅಷ್ಟೇ ಎಂದಿದ್ದಾರೆ.
ಉತ್ತಮ ಆರಂಭ ಆದರೆ ಇದು ಆರಂಭವಷ್ಟೇ. ಆ ದೂರವನ್ನು ತಲುಪಲು ಅವನು ಒಂದು ದೊಡ್ಡ ಪರ್ವತವನ್ನು ರಚಿಸಬೇಕು. ಎದುರಾಳಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಅವರಲ್ಲಿದೆ. ಕಠಿಣ ಪಿಚ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಅವರು ಇಷ್ಟಪಡುತ್ತಾರೆ. ಆದರೆ ವಿಶ್ವಕಪ್ ಇನ್ನೂ ಬಹಳ ದೂರದಲ್ಲಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
Ind vs SA 2nd T20: ಪಂದ್ಯದ ಪ್ರಿವ್ಯೂ, ಪಿಚ್ ರಿಪೋರ್ಟ್, ಹವಾಮಾನ, ಪ್ಲೇಯಿಂಗ್ 11

ಇಶಾನ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲ
ಇಶಾನ್ ಪ್ರತಿಭೆಯನ್ನು ಯಾರೂ ಅನುಮಾನಿಸದಿದ್ದರೂ, ಅವರ ಸ್ಥಿರತೆ ಸಮಸ್ಯೆಯಾಗಿದೆ. ಯಾವುದೇ ಬ್ಯಾಟಿಂಗ್ ಸ್ಥಾನದಲ್ಲಿ ಆಡುವ ಅವರ ಸಾಮರ್ಥ್ಯದ ಹೊರತಾಗಿಯೂ, ಸ್ಥಿರತೆಯು ತಂಡದಲ್ಲಿ ಅವರ ಸ್ಥಾನವನ್ನು ಪ್ರಶ್ನಿಸುತ್ತದೆ. ಈ ವಿಚಾರದಲ್ಲಿ ಇಶಾನ್ ಗೆ ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
'ನಾನು ಅವರಿಗೆ ವೈಯಕ್ತಿಕವಾಗಿ ಹೇಳಲು ಏನೂ ಇಲ್ಲ. ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದು ಐದು ಪಂದ್ಯಗಳ ಸರಣಿ. ಮುಂಬರುವ ಪಂದ್ಯಗಳಲ್ಲೂ ಇದೇ ಶ್ರೇಷ್ಠತೆಯನ್ನು ಮುಂದುವರಿಸಿ. ದೊಡ್ಡ ಇನ್ನಿಂಗ್ಸ್ ಆಡಲು ಯೋಜಿಸಿ. ಸ್ಟ್ರೈಕ್‌ರೇಟ್ ಕಡೆಗೆ ಹೆಚ್ಚಿನ ಗಮನ ಕೊಡಬೇಡಿ. ಕೆಲವು ಹಿನ್ನಡೆಗಳ ಹೊರತಾಗಿಯೂ ಅವರು ಸೂಪರ್‌ಸ್ಟಾರ್'' ಎಂದು ಆಕಾಶ್ ಚೋಪ್ರಾ ಸೇರಿಸಿದ್ದಾರೆ.
ಯಾವುದೇ ಸಂದರ್ಭದಲ್ಲಿ, ಬ್ಯಾಕಪ್ ಓಪನರ್ ಆಗಿ ಇಶಾನ್ ಕಿಶನ್ ಭಾರತಕ್ಕೆ ಮುಖ್ಯ ಪರಿಗಣನೆಯಾಗುವ ಸಾಧ್ಯತೆಯಿದೆ. ಅವರು ಎಡಗೈ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಆಗಿರುವುದು ಅವರಿಗೆ ಮೇಲುಗೈ ನೀಡುತ್ತದೆ. ಸಂಜು ಸ್ಯಾಮ್ಸನ್ ಇಶಾನ್‌ಗೆ ಯಾವುದೇ ಸ್ಪರ್ಧೆ ನೀಡುವಂತಿಲ್ಲ. ಆದರೆ ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಮಿಂಚಿದರೆ, ಇಶಾನ್ ಹಿನ್ನಡೆ ಅನುಭವಿಸುವುದು ಖಚಿತ.


Click it and Unblock the Notifications












