Ind vs SA 2nd T20: ಪಂದ್ಯದ ಪ್ರಿವ್ಯೂ, ಪಿಚ್ ರಿಪೋರ್ಟ್, ಹವಾಮಾನ, ಪ್ಲೇಯಿಂಗ್ 11

ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಅಂತರಾಷ್ಟ್ರೀಯ ಪಂದ್ಯಕ್ಕೆ ಕಟಕ್‌ನ ಬಾರಾಬತಿ ಸ್ಟೇಡಿಯಂ ಸಿದ್ಧಗೊಂಡಿದ್ದು, ಉಭಯ ತಂಡಗಳು ಭರ್ಜರಿ ಅಭ್ಯಾಸ ನಡೆಸಿವೆ. ಈಗಾಗಲೇ ಒಡಿಶಾದ ಸುಂದರ ನಗರಿ ಕಟಕ್‌ನಲ್ಲಿ ಬೀಡುಬಿಟ್ಟಿರುವ ಉಭಯ ತಂಡಗಳು ಭಾನುವಾರ (ಜೂ. 12) ಮುಖಾಮುಖಿಯಾಗಲಿವೆ.
ಎರಡನೇ ಟಿ20 ಪಂದ್ಯವು ಕಟಕ್‌ನ ಬಾರಾಮತಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈಗಾಗಲೇ ಮೊದಲ ಟಿ20 ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಟೀಂ ಇಂಡಿಯಾ 212ರನ್ ಟಾರ್ಗೆಟ್ ನೀಡಿದ್ರೂ ಸಹ ಡಿಫೆಂಡ್ ಮಾಡಿಕೊಳ್ಳಲಾಗದೆ ಪಂದ್ಯ ಸೋತಿದೆ. ಐದು ಎಸೆತಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ಗೆಲುವಿನ ಗೆರೆ ದಾಟಿತು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಪ್ರವಾಸಿ ತಂಡವು 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ಈ ಪಂದ್ಯ ಗೆದ್ದು ಸರಣಿಯಲ್ಲಿ 1-1 ಸಮಬಲ ಸಾಧಿಸಲು ಟೀಂ ಇಂಡಿಯಾ ಗುರಿನೆಟ್ಟಿದೆ.

ಪಿಚ್ ರಿಪೋರ್ಟ್
ಕಟಕ್‌ನಲ್ಲಿರುವ ಪಿಚ್ ಸ್ವಲ್ಪಮಟ್ಟಿಗೆ ನಿಧಾನವಾಗಿದೆ. ಗುರುವಾರ (ಜೂನ್ 9) ದೆಹಲಿಯಲ್ಲಿ ನಡೆದ ಮೊದಲ ಪಂದ್ಯದಂತೆ ನಾವು ಬ್ಯಾಟಿಂಗ್ ಅಬ್ಬರವನ್ನ ಕಾಣದೇ ಇರಬಹುದು. ಇಲ್ಲಿ ಸ್ಪಿನ್ನರ್‌ಗಳು ಹೆಚ್ಚಿನ ಪಾತ್ರವನ್ನು ವಹಿಸುತ್ತಾರೆ. ಏಕೆಂದರೆ ಯುಜುವೇಂದ್ರ ಚಹಾಲ್ ಈ ಸ್ಥಳದಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿದ್ದಾರೆ. ಆದಾಗ್ಯೂ, ಹೆಚ್ಚಿನ ಹ್ಯುಮಿಡಿಟಿ ಮತ್ತು ನಂತರದ ಇಬ್ಬನಿ ಅಂಶವು ಬೌಲರ್‌ಗಳನ್ನು ಸ್ವಲ್ಪ ಚಿಂತೆ ಮಾಡುತ್ತದೆ. ಹೀಗಾಗಿ ಟಾಸ್ ಗೆದ್ದ ತಂಡವು ಫೀಲ್ಡಿಂಗ್ ಆಯ್ಕೆ ಮಾಡಬಹುದು.

ಹವಾಮಾನ
ಕಟಕ್ ಕರಾವಳಿ ಪಟ್ಟಣವಾಗಿದೆ, ಆದ್ದರಿಂದ ತೇವಾಂಶವು ಹೆಚ್ಚಿನ ಭಾಗದಲ್ಲಿರುತ್ತದೆ ಮತ್ತು ದೇಶದ ಈ ಭಾಗದಲ್ಲಿ ಮಾನ್ಸೂನ್ ಅಸ್ತವ್ಯಸ್ತವಾಗಿದೆ. ಕಟಕ್‌ನಲ್ಲಿ ಭಾನುವಾರ (ಜೂನ್ 12) ತಾಪಮಾನವು 28 ಡಿಗ್ರಿಗಳಷ್ಟಿದ್ದು, 69 ಪ್ರತಿಶತದಷ್ಟು ಮೋಡ ಮತ್ತು 2% ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
PAK vs WI: 2ನೇ ಏಕದಿನ ಪಂದ್ಯದಲ್ಲಿ ಪಾಕ್‌ಗೆ ಭಾರೀ ಗೆಲುವು, ಸರಣಿ ಕೈವಶ

ಬಾರಾಬತಿ ಸ್ಟೇಡಿಯಂ ಭಾರತದ ರೆಕಾರ್ಡ್
ಕಟಕ್‌ನಲ್ಲಿರುವ ಈ ಮೈದಾನದಲ್ಲಿ ಭಾರತ ಎರಡು ಟಿ20 ಪಂದ್ಯಗಳನ್ನು ಆಡಿದೆ. ಭಾರತ ಇಲ್ಲಿ 1-1 ದಾಖಲೆಯನ್ನು ಹೊಂದಿದೆ. ಈ ಪಿಚ್‌ನಲ್ಲಿ 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್‌ಗಳಿಂದ ಸೋತಿದ್ದು, ಅದೇ 2017 ರಲ್ಲಿ ಶ್ರೀಲಂಕಾವನ್ನು 93 ರನ್‌ಗಳಿಂದ ಸೋಲಿಸಿದರು. ಆದ್ದರಿಂದ, ಕಟಕ್ ಕ್ರೀಡಾಂಗಣದಲ್ಲಿ ಅವರು 1-1 ದಾಖಲೆಯನ್ನು ಹೊಂದಿದ್ದಾರೆ.
ಗರಿಷ್ಠ ಮೊತ್ತ: 180/3 ಭಾರತ ವಿರುದ್ಧ ಶ್ರೀಲಂಕಾ
ಕಡಿಮೆ ಮೊತ್ತ: 87 ಶ್ರೀಲಂಕಾ ವಿರುದ್ಧ ಭಾರತ
ಅತಿ ಹೆಚ್ಚು ರನ್: ಕೆಎಲ್ ರಾಹುಲ್ 61 ರನ್ (ಒಂದು ಪಂದ್ಯ)
ಒಂದು ಡಾಟ್ ಬಾಲ್, ಮೂರು ರನ್ ಕೊಟ್ಟು ನಗೆಪಾಟಲಿಗೀಡಾದ ತಂಡ: ವೀಡಿಯೋ ವೈರಲ್

ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಭಾರತ: ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ನಾಯಕ, ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯುಜವೇಂದ್ರ ಚಾಹಲ್, ಉಮ್ರಾನ್ ಮಲಿಕ್.
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಎನ್ರಿಕ್ ನೊರ್ಕಿಯಾ, ತಬ್ರೈಜ್ ಶಮ್ಸಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications