ಕೊಹ್ಲಿ, ರೈನಾ, ರಾಹುಲ್, ಐಯ್ಯರ್: 34 ಟಿ20 ಇನ್ನಿಂಗ್ಸ್ ನಂತರ ಹೆಚ್ಚು ರನ್ ಬಾರಿಸಿದ ನಂಬರ್ 1 ಆಟಗಾರ ಯಾರು?

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಪುನರಾರಂಭಗೊಂಡಿದ್ದು, ಟೀಮ್ ಇಂಡಿಯಾ ಸಾಲು ಸಾಲು ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳಲ್ಲಿ ಪಾಲ್ಗೊಳ್ಳುತ್ತಿದೆ.
ಟೀಮ್ ಇಂಡಿಯಾ ಮೊದಲಿಗೆ ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿದ್ದು, ಸದ್ಯ ಇತ್ತಂಡಗಳ ನಡುವಿನ ಮೊದಲೆರಡು ಪಂದ್ಯಗಳು ಮುಕ್ತಾಯಗೊಂಡಿವೆ. ಮೊದಲಿಗೆ ಜೂನ್ 9ರ ಗುರುವಾರದಂದು ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಜಯ ಸಾಧಿಸಿತ್ತು ಹಾಗೂ ನಿನ್ನೆ ( ಜೂನ್ 12 ) ಕಟಕ್ ನಗರದ ಬಾರಾಬತಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಸುಲಭ ಜಯ ಸಾಧಿಸಿ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಇನ್ನು ಪ್ರಥಮ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿ ಸೋತಿದ್ದ ಟೀಮ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಸಾಮಾನ್ಯ ರನ್ ಗುರಿ ನೀಡಿ ಸೋತಿದೆ. ಆದರೆ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಶ್ರೇಯಸ್ ಅಯ್ಯರ್ ಮಾತ್ರ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ 36 ರನ್ ಕಲೆಹಾಕಿದ್ದ ಶ್ರೇಯಸ್ ಅಯ್ಯರ್, ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ 40 ರನ್ ಬಾರಿಸಿ ಉತ್ತಮ ಫಾರ್ಮ್ ಹೊಂದಿದ್ದಾರೆ. ಹೀಗೆ ಈ ಪಂದ್ಯದ ಮೂಲಕ ಶ್ರೇಯಸ್ ಅಯ್ಯರ್ ತಮ್ಮ 34ನೇ ಟಿ ಟ್ವೆಂಟಿ ಇನ್ನಿಂಗ್ಸ್ ಪೂರೈಸಿದರು. ಹೀಗೆ ಶ್ರೇಯಸ್ ಅಯ್ಯರ್ 34 ಅಂತರರಾಷ್ಟ್ರೀಯ ಟಿ ಟ್ವೆಂಟಿ ಇನ್ನಿಂಗ್ಸ್ ಆಡಿ ಮುಗಿಸಿದ ನಂತರ ಎಷ್ಟು ರನ್ ಕಲೆಹಾಕಿದ್ದಾರೆ ಮತ್ತು ಇಷ್ಟು ಇನ್ನಿಂಗ್ಸ್‌ನಲ್ಲಿ ಇತರೆ ಆಟಗಾರರು ಎಷ್ಟು ರನ್ ಗಳಿಸಿದ್ದಾರೆ ಎಂಬುದರ ಕುರಿತಾದ ಮಾಹಿತಿ ಮತ್ತು ಟಾಪ್ 5 ಪಟ್ಟಿ ಮುಂದೆ ಇದೆ ಓದಿ.

34 ಟಿ ಟ್ವೆಂಟಿ ಇನ್ನಿಂಗ್ಸ್ ಮುಕ್ತಾಯದ ನಂತರ ಹೆಚ್ಚು ರನ್ ಗಳಿಸಿದವರ ಪಟ್ಟಿ
34 ಅಂತರರಾಷ್ಟ್ರೀಯ ಟಿ ಟ್ವೆಂಟಿ ಇನ್ನಿಂಗ್ಸ್ ಮುಕ್ತಾಯದ ಬಳಿಕ ಅತಿ ಹೆಚ್ಚು ರನ್ ಕಲೆಹಾಕಿರುವ ಭಾರತೀಯ ಕ್ರಿಕೆಟಿಗರ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ
1. ವಿರಾಟ್ ಕೊಹ್ಲಿ - 1327 ರನ್
2. ಕೆಎಲ್ ರಾಹುಲ್ - 1293 ರನ್
3. ಸುರೇಶ್ ರೈನಾ - 894 ರನ್
4. ಶ್ರೇಯಸ್ ಅಯ್ಯರ್ - 884 ರನ್
5. ಯುವರಾಜ್ ಸಿಂಗ್ - 879 ರನ್

ಅಯ್ಯರ್ ಕೊನೆಯ 5 ಟಿ ಟ್ವೆಂಟಿ ಇನ್ನಿಂಗ್ಸ್
ಶ್ರೇಯಸ್ ಅಯ್ಯರ್ ಕೊನೆಯ 5 ಟಿ ಟ್ವೆಂಟಿ ಪಂದ್ಯಗಳ ರನ್ ಪಟ್ಟಿ ಈ ಕೆಳಕಂಡಂತಿದ್ದು, ಎಲ್ಲಾ ಪಂದ್ಯಗಳಲ್ಲಿಯೂ 30ಕ್ಕೂ ಅಧಿಕ ರನ್ ಬಾರಿಸಿ ಉತ್ತಮ ಫಾರ್ಮ್ ಹೊಂದಿದ್ದಾರೆ.
57, 74, 73, 36 ಮತ್ತು 40 ( ಜೂನ್ 12ರ ಪಂದ್ಯ )

ಈ ದಾಖಲೆಯಲ್ಲಿಯೂ ಕೊಹ್ಲಿಯೇ ಕಿಂಗ್
ಇನ್ನು 34 ಅಂತರರಾಷ್ಟ್ರೀಯ ಟಿ ಟ್ವೆಂಟಿ ಇನ್ನಿಂಗ್ಸ್ ಮುಕ್ತಾಯವಾದ ಬಳಿಕ ಅತಿ ಹೆಚ್ಚು ರನ್ ಕಲೆಹಾಕಿರುವ ಭಾರತೀಯ ಬ್ಯಾಟ್ಸ್ ಮನ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಕೊಹ್ಲಿ 34 ಟಿ ಟ್ವೆಂಟಿ ಇನ್ನಿಂಗ್ಸ್ ಮುಕ್ತಾಯದ ಬಳಿಕ 1327 ರನ್ ಚಚ್ಚಿದ ದಾಖಲೆ ನಿರ್ಮಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications