For Quick Alerts
ALLOW NOTIFICATIONS  
For Daily Alerts
 

Asia Cup 2023: ಏಷ್ಯಾ ಕಪ್ ಇತಿಹಾಸದಲ್ಲಿ ಭಾರತ ಪರ ಹೆಚ್ಚು ರನ್ ಗಳಿಸಿದ, ಹೆಚ್ಚು ವಿಕೆಟ್ ಪಡೆದವರು ಯಾರು?

ಪಾಕಿಸ್ತಾನ ಮತ್ತು ಶ್ರೀಲಂಕಾ ಸಹ-ಆತಿಥ್ಯದಲ್ಲಿ 2023ರ ಏಷ್ಯಾ ಕಪ್ ಪಂದ್ಯಾವಳಿಗೆ ಈಗಾಗಲೇ ಆಗಸ್ಟ್ 30ರಂದು ಚಾಲನೆ ನೀಡಲಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಸೆಣಸಾಡಿದ್ದವು.

ಶನಿವಾರ, ಸೆಪ್ಟೆಂಬರ್ 2ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ 3ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಹೋರಾಡಲಿವೆ.

Which Indian Batter Hits Highest Runs and Bowler With the Most Wickets In Asia Cup History?

2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ವೇಗವಾಗಿ ಸಮೀಪಿಸುತ್ತಿರುವ ಕಾರಣ, ಏಷ್ಯಾ ಕಪ್ ಪಂದ್ಯಾವಳಿಯನ್ನು ಏಕದಿನ ಸ್ವರೂಪದಲ್ಲಿ ನಡೆಸಲಾಗುತ್ತಿದೆ ಎಂಬುದು ಗಮನಾರ್ಹ ಸಂಗತಿ.

ಇತ್ತೀಚಿನ ವರ್ಷಗಳಲ್ಲಿ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ ಅನೇಕ ಪ್ರತಿಭಾವಂತ ಆಟಗಾರರು ಇದ್ದಾರೆ.

Which Indian Batter Hits Highest Runs and Bowler With the Most Wickets In Asia Cup History?

ಇನ್ನು ಏಷ್ಯಾ ಕಪ್ ಪಂದ್ಯಾವಳಿ ಇತಿಹಾಸದಲ್ಲಿ ಭಾರತ ತಂಡಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನನ್ನು ನೋಡುವುದಾದರೆ, ಈ ಪಟ್ಟಿಯಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ.

ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು ಆಡಿದಾಗಲೆಲ್ಲ ಭಾರತಕ್ಕೆ ಮಹತ್ವದ ಪಾತ್ರ ವಹಿಸಿದ್ದು, ಒಟ್ಟು 23 ಏಷ್ಯಾ ಕಪ್ (ಏಕದಿನ) ಪಂದ್ಯಗಳ 21 ಇನ್ನಿಂಗ್ಸ್‌ಗಳಲ್ಲಿ 971 ರನ್ ಗಳಿಸಿದ್ದಾರೆ. ಅದರಲ್ಲಿ 2 ಶತಕ ಮತ್ತು 7 ಅರ್ಧಶತಕಗಳು ಒಳಗೊಂಡಿದ್ದು, 114 ರನ್ ಅತ್ಯುತ್ತಮ ಸ್ಕೋರ್ ಆಗಿದೆ.

ಏಷ್ಯಾ ಕಪ್‌ನಲ್ಲಿ ಭಾರತ ಪರ ಹೆಚ್ಚು ರನ್ ಗಳಿಸಿದವರು
1) ಸಚಿನ್ ತೆಂಡೂಲ್ಕರ್ - 23 ಪಂದ್ಯಗಳಲ್ಲಿ 971 ರನ್

2) ರೋಹಿತ್ ಶರ್ಮಾ - 22 ಪಂದ್ಯಗಳಲ್ಲಿ 745 ರನ್

3) ಎಂಎಸ್ ಧೋನಿ - 19 ಪಂದ್ಯಗಳಲ್ಲಿ 648 ರನ್

4) ವಿರಾಟ್ ಕೊಹ್ಲಿ - 11 ಪಂದ್ಯಗಳಲ್ಲಿ 613 ರನ್

5) ಗೌತಮ್ ಗಂಭೀರ್ - 13 ಪಂದ್ಯಗಳಲ್ಲಿ 573 ರನ್

ಮತ್ತೊಂದೆಡೆ, ಏಷ್ಯಾ ಕಪ್ (ಏಕದಿನ) ನಲ್ಲಿ ಭಾರತ ತಂಡಕ್ಕಾಗಿ ಗಮನಾರ್ಹ ಪ್ರದರ್ಶನ ನೀಡಿದ ಅನೇಕ ಬೌಲರ್‌ಗಳು ಇದ್ದಾರೆ. ಈ ಪಟ್ಟಿಯಲ್ಲಿ ಮಾಜಿ ವೇಗಿ ಇರ್ಫಾನ್ ಪಠಾಣ್ ಅಗ್ರಸ್ಥಾನದಲ್ಲಿದ್ದಾರೆ.

ಇರ್ಫಾನ್ ಪಠಾಣ್ ಅವರು ಏಷ್ಯಾ ಕಪ್ (ಏಕದಿನ) ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಉಳಿದಿದ್ದಾರೆ. ಪಠಾಣ್ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಪಡೆದಿದ್ದಾರೆ.

ಏಷ್ಯಾ ಕಪ್‌ನಲ್ಲಿ ಭಾರತ ಪರ ಹೆಚ್ಚು ವಿಕೆಟ್ ಪಡೆದವರು
1) ಇಫಾನ್ ಪಠಾಣ್ - 12 ಪಂದ್ಯಗಳಲ್ಲಿ 22 ವಿಕೆಟ್

2) ರವೀಂದ್ರ ಜಡೇಜಾ - 14 ಪಂದ್ಯಗಳಲ್ಲಿ 19 ವಿಕೆಟ್

3) ಸಚಿನ್ ತೆಂಡೂಲ್ಕರ್ - 23 ಪಂದ್ಯಗಳಲ್ಲಿ 17 ವಿಕೆಟ್

4) ಕಪಿಲ್ ದೇವ್ - 7 ಪಂದ್ಯಗಳಲ್ಲಿ 15 ವಿಕೆಟ್

5) ರವಿಚಂದ್ರನ್ ಅಶ್ವಿನ್ - 7 ಪಂದ್ಯಗಳಲ್ಲಿ 14 ವಿಕೆಟ್

Story first published: Saturday, September 2, 2023, 11:56 [IST]
Other articles published on Sep 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+