ಟೀಮ್ ಇಂಡಿಯಾಕ್ಕೆ ರೋಹಿತ್ ಶರ್ಮಾ ಏಕೆ ಆಯ್ಕೆಯಾಗಿಲ್ಲ: ಕಾರಣ ತಿಳಿಸಿದ ಮೈಕಲ್ ವಾನ್
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸದ್ಯ ಕ್ರಿಕೆಟ್ ಲೋಕದಲ್ಲಿ ಚರ್ಚೆಯ ಪ್ರಮುಖ ವಿಷಯವಾಗಿದ್ದಾರೆ. ಇದಕ್ಕೆ ಕಾರಣ ಆತ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯದೇ ಇರುವುದರ ಜೊತೆಗೆ ಐಪಿಎಲ್‌ನಲ್ಲಿ ಆಡುತ್ತಿರುವುದು.
ಹೌದು, ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದ ರೋಹಿತ್ ಶರ್ಮಾ ಕುರಿತು ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದವು. ರೋಹಿತ್ ಫಿಟ್ ಆಗಿಲ್ವ ಅಥವಾ ಬೇಕಾಗಿಯೇ ತಂಡದಿಂದ ಹೊರಗಿಡಲಾಗಿದೆಯೇ ಎಂದು ಪ್ರಶ್ನೆಗಳು ಎದುರಾಗಿದ್ದು. ಆದರೆ ರೋಹಿತ್ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಕಣಕ್ಕಿಳಿಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಮೂರು ಫಾರ್ಮೆಟ್‌ನಿಂದ ಹಿಟ್‌ಮ್ಯಾನ್ ಹೊರಕ್ಕೆ
ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್ ಶರ್ಮಾ ಆಯ್ಕೆಯಾಗಿಲ್ಲ ಅನ್ನೋದು ನಿಮಗೆಲ್ಲಾ ಗೊತ್ತಿರುವ ವಿಚಾರ. ಮೂರು ಫಾರ್ಮೆಟ್‌ನ ಸರಣಿಗೆ ರೋಹಿತ್‌ರನ್ನು ಹೊರಗಿಡಲಾಗಿದೆ. ಆದರೆ ಎಸ್‌ಆರ್‌ಹೆಚ್ ವಿರುದ್ಧ ಹಿಟ್‌ಮ್ಯಾನ್ ಕಣಕ್ಕಿಳಿದು ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರವನ್ನೇ ಪ್ರಶ್ನಿಸಿದರು. ಅಭಿಮಾನಿಗಳು ಸಹ ರೋಹಿತ್ ಶರ್ಮಾ ಫಿಟ್ನೆಸ್ ಕುರಿತು ಬಿಸಿಸಿಐಗೆ ಯಾವುದೇ ಮಾಹಿತಿ ಇರಲಿಲ್ವ? ಅವರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆದಿದ್ಯಾ ಎಂದು ಕಮೆಂಟ್ ಮಾಡುವ ಮೂಲಕ ಬಿಸಿಸಿಐಯನ್ನು ಪ್ರಶ್ನಿಸಿದ್ದರು.

ರೋಹಿತ್ ಏಕೆ ಆಯ್ಕೆಯಾಗಿಲ್ಲ ಎಂಬುದನ್ನು ಬಹಿರಂಗಪಡಿಸಿ!
ರೋಹಿತ್ ಶರ್ಮಾ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗದೇ, ಐಪಿಎಲ್‌ನಲ್ಲಿ ಆಡಿದ್ದರ ಬೆನ್ನಲ್ಲೇ ಹೀಗೆ ಆಡಲು ಹೇಗೆ ಸಾಧ್ಯ ಎಂದು ಅಭಿಮಾನಿಗಳಲ್ಲಿ ಸಹಜವಾಗಿ ಗೊಂದಲ ಮೂಡಿತು. ಹೀಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ರೋಹಿತ್‌ರನ್ನು ಮೂರು ಸರಣಿಯಿಂದ ಹೊರಗಿಡಲು ಕಾರಣವೇನು ಎಂಬುದನ್ನು ಬಿಸಿಸಿಐ ಬಹಿರಂಗಪಡಿಸಲಿ ಎಂದು ಟ್ವಿಟ್ಟರ್‌ನಲ್ಲಿ ಒತ್ತಾಯಿಸಿದ್ದರು.
ಗಾಯದ ಕುರಿತು ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ: ಹುಷಾರಾಗಿದೆ ಎಂದ ಹಿಟ್‌ಮ್ಯಾನ್

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ನಡುವೆ ಒಳಜಗಳ ನಡೀತಿದ್ಯಾ?
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ತಿಕ್ಕಾಟ ನಡೀತಿದ್ಯಾ? ಎಂಬ ಗುಮಾನಿ ಅಭಿಮಾನಿಗಳಲ್ಲಿ ಮೂಡಿದೆ. ರೋಹಿತ್ ಐಪಿಎಲ್ ಆಡುವಷ್ಟು ಸಮರ್ಥರಾಗಿದ್ದರೆ, ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದೇ ಇರುವುದಕ್ಕೆ ಕಾರಣ ಏನು ಎಂಬುದು ಪ್ರಶ್ನೆಯಾಗಿದೆ.
ರೋಹಿತ್ ಗಾಯಾಳುವಾಗಿದ್ದರೆ ಐಪಿಎಲ್ ಕೂಡ ಆಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಿದ್ದರೆ ದುಡ್ಡಿನ ಟೂರ್ನಿಯಲ್ಲಿ ಆಡುವಷ್ಟು ಸಮರ್ಥರಾಗಿದ್ದಾರ? ಅಥವಾ ಗಾಯ ಒಂದು ಕಾರಣವೇ ಎಂದು ಹೊರಜಗತ್ತಿಗೆ ತಿಳಿಯದಾಗಿದೆ.

ರೋಹಿತ್ ಶರ್ಮಾರನ್ನು ಹೊರಗಿಡಲು, ಮೈಕಲ್ ವಾನ್ ನೀಡುವ ಕಾರಣ
ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ರೋಹಿತ್ ಶರ್ಮಾ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗದೇ ಇರುವುದಕ್ಕೆ ಫಿಟ್ ಆಗದಿರುವುದು ಕಾರಣ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಫಿಟ್‌ನೆಸ್‌ಗೆ ಸಂಬಂಧಪಟ್ಟಂತೆ ನಿಗದಿತ ಒಂದು ಮಟ್ಟವನ್ನು ತಂಡದಲ್ಲಿ ಹೊಂದಿದ್ದಾರೆ ಮತ್ತು ಆಟಗಾರರು ಈಗ ತಂಡಕ್ಕೆ ಆಯ್ಕೆಯಾಗುವ ಮೊದಲು ಆ ಫಿಟ್‌ನೆಸ್ ಪರೀಕ್ಷೆಯನ್ನು ಮೊದಲು ತೆರವುಗೊಳಿಸಬೇಕಾಗಿದೆ.
ಈ ವರ್ಷದ ಆರಂಭದಲ್ಲಿ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿದ್ದಾಗ ರೋಹಿತ್ ಸ್ವಲ್ಪ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಆದಾಗ್ಯೂ, ಕಳೆದ ತಿಂಗಳು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅವರು ಹ್ಯಾಮ್‌ಸ್ಟ್ರಿಂಗ್ (ಮಂಡಿರಜ್ಜು) ಗಾಯದಿಂದಾಗಿ ಬಿಸಿಸಿಐ ಅವರನ್ನು ತಂಡಗಳಲ್ಲಿ ಹೆಸರಿಸಲಿಲ್ಲ. ಬಿಸಿಸಿಐ ನಿರ್ಧಾರವು ರೋಹಿತ್ ಗಂಭೀರವಾಗಿ ಗಾಯಗೊಂಡಿದೆ ಎಂದು ಹಲವರು ನಂಬುವಂತೆ ಮಾಡಿದೆ ಎಂದು ವಾನ್ ಅಭಿಪ್ರಾಯ ಪಟ್ಟಿದ್ದಾರೆ.

ಹೈದ್ರಾಬಾದ್ ವಿರುದ್ಧ ಆಡೋಕು ಮೊದಲು ಅಭ್ಯಾಸ ನಡೆಸಿದ್ದ ರೋಹಿತ್
ಎಸ್‌ಆರ್‌ಹೆಚ್ ವಿರುದ್ಧ ಆಡುವುದಕ್ಕೂ ಮೊದಲೇ ಹಿಟ್‌ಮ್ಯಾನ್ ರೋಹಿತ್ ಶರ್ಮಾ ನೆಟ್ ಪ್ರಾಕ್ಟೀಸ್ ಮಾಡಿ ಸಂಚಲನವನ್ನು ಸೃಷ್ಟಿಸಿದ್ದರು. ಟೀಮ್ ಇಂಡಿಯಾ ಆಯ್ಕೆ ಸಮಿತಿಯು ತಂಡವನ್ನು ಪ್ರಕಟಿಸಿದ ಕೆಲ ಘಂಟೆಗಳಲ್ಲಿ ರೋಹಿತ್ ಶರ್ಮಾರ ಈ ಫೋಟೋ ವೈರಲ್ ಆಗಿತ್ತು.

ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಯನ್ನು ಪೂರ್ಣಗೊಳಿಸಿಲ್ಲ-ಮೈಕಲ್ ವಾನ್
ರೋಹಿತ್ ಶರ್ಮಾರನ್ನು ಭಾರತ ತಂಡದಿಂದ ಹೊರಗಿಡಲು ಹ್ಯಾಮ್‌ಸ್ಟ್ರಿಂಗ್ ಕಾರಣ ಒಂದೇ ಎಂದು ನಾನು ಭಾವಿಸುವುದಿಲ್ಲ ಎಂದು ಮೈಕಲ್ ವಾನ್ ಭಾವಿಸಿದ್ದರೆ. ರೋಹಿತ್ ಶರ್ಮಾ ಟೀಮ್ ಇಂಡಿಯಾದಲ್ಲಿ ರೂಪಿಸಿರುವ ಫಿಟ್ನೆಸ್ ಪರೀಕ್ಷೆಯನ್ನು ಸಂಪೂರ್ಣವಾಗಿ ಪೂರೈಸದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದಿದ್ದಾರೆ.
''ಫಿಟ್ನೆಸ್‌ನಲ್ಲಿ ರೋಹಿತ್ ತಂಡದ ಗುಣಮಟ್ಟವನ್ನು ಪೂರೈಸಿಲ್ಲ ಮತ್ತು ಆದ್ದರಿಂದ ತಂಡದಿಂದ ಹೊರಗುಳಿದಿದ್ದಾರೆ. ಭಾರತ ತಂಡವು ಪರಿಸ್ಥಿತಿಯ ಬಗ್ಗೆ ಸ್ಪಷ್ಟವಾಗಿರಬೇಕು ಮತ್ತು ರೋಹಿತ್ ಅವರನ್ನು ಬಿಟ್ಟುಕೊಟ್ಟ ಕಾರಣವನ್ನು ವಿವರಿಸಬೇಕು'' ಮೈಕಲ್ ವಾನ್ ಹೇಳಿದ್ದಾರೆ.
"ರೋಹಿತ್ ಶರ್ಮಾ ಅವರಿಗೆ ಗಾಯವಾಗಿದ್ದರೆ, ಗಾಯ ಏನು ಎಂದು ನಮಗೆ ತಿಳಿಸಿ. ಅದನ್ನು ಸ್ಪಷ್ಟವಾಗಿ ತಿಳಿಸಿ, ಅವನಿಗೆ ಮಂಡಿರಜ್ಜು ಸಮಸ್ಯೆ ಇದೆ ಎಂದು ತೋರುತ್ತದೆ. ಒಳ್ಳೆಯದು, ಸಮಸ್ಯೆಯಲ್ಲ, ಅದಕ್ಕಾಗಿಯೇ ಅವನು ಆಡುತ್ತಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಅವನು ಆಟವಾಡಿದರೆ ಗಾಯಗೊಳ್ಳಬಹುದು ಎಂಬ ಕಾರಣದಿಂದಾಗಿ, ಆತನನ್ನು ತಂಡದಿಂದ ಹೊರಗಿಟ್ಟಿದ್ದರೆ, ಇದನ್ನು ನನ್ನ ಜೀವನದಲ್ಲಿ ನಾನು ಹಿಂದೆಂದೂ ಕೇಳಿಲ್ಲ, "ಎಂದು ಅವರು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications