Gary Ballance: ಎರಡು ದೇಶಗಳ ಪರ ಟೆಸ್ಟ್ ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಗ್ಯಾರಿ ಬ್ಯಾಲೆನ್ಸ್!

ಮಂಗಳವಾರ, ಫೆಬ್ರವರಿ 7ರಂದು ಬುಲವಾಯೊದಲ್ಲಿ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ನಡುವಿನ ಟೆಸ್ಟ್ ಪಂದ್ಯದಲ್ಲಿ ಗ್ಯಾರಿ ಬ್ಯಾಲೆನ್ಸ್ ಅಜೇಯ 137 ರನ್ ಬಾರಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದರು.
ವೆಸ್ಟ್ ಇಂಡೀಸ್ ವಿರುದ್ಧ ಜಿಂಬಾಬ್ವೆ ಪರ ಅಜೇಯ 137 ರನ್ ಗಳಿಸುವ ಮೂಲಕ ಗ್ಯಾರಿ ಬ್ಯಾಲೆನ್ಸ್ ಅವರು ದಕ್ಷಿಣ ಆಫ್ರಿಕಾದ ಕೆಪ್ಲರ್ ವೆಸೆಲ್ಸ್ ನಂತರ ಎರಡು ದೇಶಗಳ ಪರ ಶತಕ ಗಳಿಸಿದ ವಿಶ್ವದ ಎರಡನೇ ಟೆಸ್ಟ್ ಬ್ಯಾಟ್ಸ್‌ಮನ್ ಎಂಬ ವಿಶೇಷ ಹೆಗ್ಗಳಿಕೆ ಪಾತ್ರರಾದರು.
ಸಂಭವನೀಯ ಫಾಲೋ-ಆನ್ ತಪ್ಪಿಸಲು ವೆಸ್ಟ್ ಇಂಡೀಸ್ 6 ವಿಕೆಟ್‌ಗೆ 447 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡ ನಂತರ ಪ್ರತ್ಯುತ್ತರವಾಗಿ, ಜಿಂಬಾಬ್ವೆ ತಂಡಕ್ಕೆ ಕನಿಷ್ಠ 248 ರನ್‌ಗಳ ಅಗತ್ಯವಿತ್ತು. ಜಿಂಬಾಬ್ವೆ ಮೊದಲ ಟೆಸ್ಟ್‌ನ ನಾಲ್ಕನೇ ದಿನದ ಎರಡನೇ ಅವಧಿಯ ನಂತರ 9 ವಿಕೆಟ್‌ಗೆ 379 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಇಂಗ್ಲೆಂಡ್ ತಂಡಕ್ಕಾಗಿ ನಾಲ್ಕು ಶತಕ ಬಾರಿಸಿದ್ದ ಗ್ಯಾರಿ ಬ್ಯಾಲೆನ್ಸ್
ಎರಡು ವರ್ಷಗಳ ಹಿಂದೆ ಬಾಂಗ್ಲಾದೇಶ ವಿರುದ್ಧ ಸೋತ ನಂತರ ಆತಿಥೇಯ ಜಿಂಬಾಬ್ವೆ ತಮ್ಮ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನ ನಂತರ 68 ರನ್‌ಗಳ ಹಿನ್ನಡೆಯನ್ನು ಅನುಭವಿಸಿದರು.
ಮತ್ತೆ ಬ್ಯಾಟಿಂಗ್ ಮಾಡಿದ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಅಂತಿಮ ದಿನದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 21 ರನ್ ಕಲೆಹಾಕಿದ್ದು, ಒಟ್ಟಾರೆ 89 ರನ್‌ಗಳ ಮುನ್ನಡೆ ಸಾಧಿಸಿದ್ದಾರೆ.
ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಪರ ತಮ್ಮ ಚೊಚ್ಚಲ ಟೆಸ್ಟ್ ಶತಕ ಬಾರಿಸಲು ತವರಿಗೆ ಹಿಂದಿರುಗುವ ಮೊದಲು ಹರಾರೆಯಲ್ಲಿ ಜನಿಸಿದ ಗ್ಯಾರಿ ಬ್ಯಾಲೆನ್ಸ್ ಕಳೆದ ದಶಕದಲ್ಲಿ ಇಂಗ್ಲೆಂಡ್ ತಂಡಕ್ಕಾಗಿ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.

ಎಂಟನೇ ವಿಕೆಟ್ ಜೊತೆಯಾಟದಲ್ಲಿ 135 ರನ್
ಇನ್ನು ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಕೆಪ್ಲರ್ ವೆಸೆಲ್ಸ್ ತವರಿಗೆ ಹಿಂದಿರುಗುವ ಮೊದಲು ಆಸ್ಟ್ರೇಲಿಯಾ ತಂಡಕ್ಕಾಗಿ ನಾಲ್ಕು ಶತಕಗಳನ್ನು ಗಳಿಸಿದ್ದರು. 1990ರ ದಶಕದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ಮರುಸೇರ್ಪಡೆಯಾದಾಗ ಅವರ ತಾಯ್ನಾಡು ದಕ್ಷಿಣ ಆಫ್ರಿಕಾ ಪರ ಇನ್ನೂ ಎರಡು ಶತಕಗಳನ್ನು ಗಳಿಸಿದರು.
ಗ್ಯಾರಿ ಬ್ಯಾಲೆನ್ಸ್ ಮತ್ತು ಲೆಗ್ ಸ್ಪಿನ್ನರ್ ಬ್ರ್ಯಾಂಡನ್ ಮಾವುಟಾ ಎಂಟನೇ ವಿಕೆಟ್ ಜೊತೆಯಾಟದಲ್ಲಿ 135 ರನ್ ಪೇರಿಸಿದರು. ಮಾವುಟಾ ಒಂಬತ್ತು ಬೌಂಡರಿಗಳ ನೆರವಿನಿಂದ 56 ರನ್ ಗಳಿಸಿದ್ದಾಗ ಜೇಸನ್ ಹೋಲ್ಡರ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು.

ಗ್ಯಾರಿ ಬ್ಯಾಲೆನ್ಸ್ 231 ಎಸೆತಗಳಲ್ಲಿ 137 ರನ್
ಜಿಂಬಾಬ್ವೆ 114 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಐದನೆಯವರಾಗಿ ಕ್ರೀಸ್‌ಗೆ ಬಂದ ಗ್ಯಾರಿ ಬ್ಯಾಲೆನ್ಸ್ ತಮ್ಮ ಜವಾಬ್ದಾರಿ ಅರಿತು ಬ್ಯಾಟ್ ಬೀಸಿದರು ತಂಡಕ್ಕಾಗಿ ದೊಡ್ಡ ಇನ್ನಿಂಗ್ಸ್ ಆಡಿದರು. 33 ವರ್ಷದ ಬ್ಯಾಟರ್ ಗ್ಯಾರಿ ಬ್ಯಾಲೆನ್ಸ್ 231 ಎಸೆತಗಳನ್ನು ಎದುರಿಸಿ ಎರಡು ಸಿಕ್ಸರ್ ಮತ್ತು 12 ಬೌಂಡರಿಗಳ ನೆರವಿನಿಂದ 137 ರನ್ ಚಚ್ಚಿದರು.
ಜಿಂಬಾಬ್ವೆ ತಂಡವನ್ನು ಬೇಗನೆ ಆಲೌಟ್ ಮಾಡುವ ವೆಸ್ಟ್ ಇಂಡೀಸ್ ಯೋಜನೆಗಳನ್ನು ಗ್ಯಾರಿ ಬ್ಯಾಲೆನ್ಸ್ ಮತ್ತು ಬ್ರ್ಯಾಂಡನ್ ಮಾವುಟಾ ವಿಫಲಗೊಳಿಸಿದರು. ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ 5 ವಿಕೆಟ್‌ಗಳನ್ನು ಕಬಳಿಸಿದ್ದ, ಮಾವುಟಾ ಬ್ಯಾಟಿಂಗ್‌ನಲ್ಲಿಯೂ ತಮ್ಮ ಕೌಶಲ್ಯ ಸಾಬೀತುಪಡಿಸಿದರು.
ಇದಕ್ಕೂ ಮೊದಲು ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಇನ್ನೋಸೆಂಟ್ ಕೈಯಾ 59 ರನ್‌ಗಳೊಂದಿಗೆ ದಿನವನ್ನು ಪ್ರಾರಂಭಿಸಿ, 67 ರನ್‌ಗಳಾಗಿದ್ದಾಗ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಮಂಗಳವಾರ, ಫೆಬ್ರವರಿ 7ರಂದು ಬುಲವಾಯೊದಲ್ಲಿ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ನಡುವಿನ ಟೆಸ್ಟ್ ಪಂದ್ಯದಲ್ಲಿ ಗ್ಯಾರಿ ಬ್ಯಾಲೆನ್ಸ್ ಅಜೇಯ 137 ರನ್ ಬಾರಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications