ಇಂಗ್ಲೆಂಡ್‌ನಲ್ಲಿ ವಿಶ್ವಕಪ್‌ಗೆ ಬ್ಯಾಟಿಂಗ್ ಫ್ರೆಂಡ್ಲೀ ಪಿಚ್‌ಗಳು: ಸಚಿನ್ ತೆಂಡೂಲ್ಕರ್

ಮುಂಬಯಿ, ಮೇ 02: ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್‌ಗೆ ನೆರವಾಗುವ ಪಿಚ್‌ಗಳು ಲಭ್ಯವಾಗಲಿದ್ದು, ಬೌಲರ್‌ಗಳು ಸ್ವಿಂಗ್ ತರಲು ಪರದಾಟ ನಡೆಸಲಿದ್ದಾರೆಂದು ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಭವಿಷ್ಯ ನುಡಿದಿದ್ದಾರೆ.
ಇಂಗ್ಲೆಂಡ್‌ನಲ್ಲಿ ಈಗ ಬೇಸಿಗೆ ಇರುವ ಕಾರಣ ವಿಶ್ವಕಪ್ ಟೂರ್ನಿ ವೇಳೆ ಅಲ್ಲಿನ ವಾತಾವರಣ ಬೌಲರ್‌ಗಳಿಗೆ ಹೆಚ್ಚು ನೆರವಾಗುವುದಿಲ್ಲ. ಪಿಚ್‌ಗಳು 2017ರ ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಾದ ರೀತಿಯಲ್ಲೇ ಇರಲಿವೆ ಎಂದು ಸಚಿನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಈ ಬಾರಿ ಬೇಸಿಗೆಯ ಬಿಸಿ ಹೆಚ್ಚಿರಲಿದೆ ಎಂದು ತಿಳಿಯಲ್ಪಟ್ಟಿದ್ದೇನೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆಯೂ ಬಿಸಿಲು ಹೆಚ್ಚಿದ್ದಾಗ ಪಿಚ್‌ಗಳು ಬ್ಯಾಟಿಂಗ್‌ಗೆ ಅದ್ಭುತವಾಗಿದ್ದವು. ಉಷ್ಣಾಂಶಕ್ಕೆ ಪಿಚ್ ಸಂಪೂರ್ಣ ಫ್ಲ್ಯಾಟ್ ಆಗಿರಲಿದೆ. ಆಯೋಜಕರು ಉತ್ತಮ ಪಿಚ್‌ಗಳನ್ನು ಒದಗಿಸುತ್ತಾರೆಂಬ ವಿಶ್ವಾಸವೂ ಇದೆ,'' ಎಂದು 46 ವರ್ಷದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ಹೇಳಿದ್ದಾರೆ.
"ಮೋಡ ಮುಚ್ಚಿದ ವಾತಾವರಣ ಇದ್ದರಷ್ಟೇ ಸ್ಥಿತಿಗತಿಗಳಲ್ಲಿ ಕೊಂಚ ಬದಲಾವಣೆ ಆಗಿಲಿದೆ. ತಂಪಿನ ಅಂಶ ಹೆಚ್ಚಿದ್ದರೆ ಚೆಂಡು ಸ್ವಿಂಗ್ ಆಗಬಹುದು. ಆದರೂ ಇದು ಹೆಚ್ಚು ಕಾಲ ನಡೆಯುವುದಿಲ್ಲ ಕೇವಲ ಆರಂಭಿಕ ಓವರ್‌ಗಳಲ್ಲಿ ಮಾತ್ರವೇ ಚೆಂಡು ಸ್ವಿಂಗ್ ಪಡೆಯಲು ಸಾಧ್ಯ,'' ಎಂದು ಸಚಿನ್ ಇಂಗ್ಲೆಂಡ್ ಪಿಚ್‌ಗಳ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚುತ್ತಿರುವ ಟೀಮ್ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ, ಶಿಖರ್ ಧವನ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ಮುಂಬರುವ ವಿಶ್ವಕಪ್‌ಗೆ ಆತ್ಮವಿಶ್ವಾಸ ಹೆಚ್ಚಿರಲಿದೆ ಎಂದು ಸಚಿನ್ ಹೇಳಿದ್ದಾರೆ.
"ಯಾವುದೇ ಮಾದರಿಯಲ್ಲಾಗಲಿ ಆಟಗಾರರು ಉತ್ತಮ ಲಯದಲ್ಲಿದ್ದರೆ, ಆತ್ಮವಿಶ್ವಾಸವೂ ಹೆಚ್ಚಿರುತ್ತದೆ. ಇದೇ ಮುಖ್ಯ. ಆದರೂ ಆಟಗಾರರು ಕೆಲ ಹೊಂದಾಣಿಕೆಗಳನ್ನು ತಂದುಕೊಳ್ಳ ಬೇಕಾಗುತ್ತದೆ'' ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications