'ಸಚಿನ್ ತೆಂಡೂಲ್ಕರ್ ಎಂದ್ರೆ ಯಾರು ನನಗೊತ್ತಿಲ್ಲ'
ಲಂಡನ್, ಜು.2: ಕ್ರಿಕೆಟ್ ಜಗತ್ತು ಕಂಡ ಮಹಾನ್ ಆಟಗಾರ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿರಬಹುದು ಆದ್ರ್ರೆ ಅವರ ಜನಪ್ರಿಯತೆಗೇನೂ ಕುಂದುಂಟಾಗಿಲ್ಲ, 'ಕ್ರಿಕೆಟ್ ದೇವರು' ಎಂದು ಈಗಲೂ ಅಭಿಮಾನಿಗಳಿಂದ ಹೊಗಳಿಸಿಕೊಳ್ಳುವ ಸಚಿನ್ ಕ್ರಿಕೆಟ್ ಆಡದ ದೇಶಗಳಲ್ಲೂ ಜನಪ್ರಿಯ ಆದರೆ, ರಷ್ಯಾದ ಜನಪ್ರಿಯ ಟೆನಿಸ್ ಆಟಗಾರ್ತಿಗೆ ಮಾತ್ರ ಸಚಿನ್ ತೆಂಡೂಲ್ಕರ್ ಅಂದ್ರೆ ಯಾರು ಎಂದು ಗೊತ್ತಿಲ್ಲವಂತೆ!
ವಿಂಬಲ್ಡನ್ ನಲ್ಲಿ ಸೋತು ಸುಣ್ಣವಾಗ ಫೇವರೀಟ್ ಆಟಗಾರ್ತಿ ರಷ್ಯಾದ ಟೆನಿಸ್ ತಾರೆ ಹಲವು ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಮರಿಯಾ ಶರಪೋವಾಗೆ ಮಾತ್ರ ಸಚಿನ್ ತೆಂಡೂಲ್ಕರ್ ಯಾರೆಂಬುದು ಗೊತ್ತಿಲ್ಲವಂತೆ.
ಪ್ರತಿ ವರ್ಷದಂತೆ ಈ ಬಾರಿಯೂ ವಿಂಬಲ್ಡನ್ ಟೂರ್ನಿ ವೀಕ್ಷಿಸಲು ತೆರಳಿದ್ದ ಸಚಿನ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಂಡ್ರ್ಯೂ ಸ್ಟ್ರಾಸ್, ಫುಟ್ಬಾಲ್ ಪಟು ಡೇವಿಡ್ ಬೆಕ್ ಹ್ಯಾಮ್ದಂಪತಿ ಸಾಥ್ ನೀಡಿದ್ದರು. ಎಲ್ಲರೂ ರಾಯಲ್ ಬಾಕ್ಸ್ ನಲ್ಲಿ ಕುಳಿತು ಪಂದ್ಯವೀಕ್ಷಿಸಿದ್ದಾರೆ. [ವಿಶ್ವದ ನಂ.1 ರಾಫೆಲ್ ನಡಾಲ್ ಔಟ್]
ಪಂದ್ಯದ ಬಳಿಕ ಪತ್ರಕರ್ತನೊಬ್ಬ ಸಚಿನ್ ಯಾರೆಂಬುದು ನಿಮಗೆ ಗೊತ್ತೇ ಎಂದು ಕೇಳಿದ ಪ್ರಶ್ನೆಗೆ ಶರಪೋವಾ 'ನೋ ಐ ಡೋಂಟ್' ಎಂದು ಉತ್ತರ ಕೊಟ್ಟಿದ್ದಾರೆ. ಬೆಕ್ ಹ್ಯಾಮ್ ಯಾರೆಂಬುದು ಗೊತ್ತು.. ಎರಡು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ಅವರೊಬ್ಬ ದೊಡ್ಡ ಪುಟ್ಬಾಲ್ ಆಟಗಾರ, ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಆದರೆ ಸಚಿನ್ ಯಾರೆಂಬುದೇ ಗೊತ್ತಿಲ್ಲ' ಎಂದಿದ್ದಾರೆ. ಪ್ರಶ್ನೆ ಕೇಳಿದ ಪತ್ರಕರ್ತ ಒಂದು ಕ್ಷಣ ಅವಾಕ್ಕಾದರಂತೆ.
ಈ ಬಾರಿ ಟೂರ್ನಿಯ ಫೇವರಿಟ್ ಎನಿಸಿದ್ದ ಐದು ಬಾರಿ ಚಾಂಪಿಯನ್ ಮರಿಯಾ ಆಟ ನೋಡಲೆಂದೇ ಸಚಿನ್ ಬಂದಿದ್ದರು ಆದರೆ, ಮರಿಯಾಗೆ ಸಚಿನ್ ಯಾರೆಂಬುದೇ ಗೊತ್ತಿಲ್ಲವಂತೆ ಎಂದು ಆಕೆ ಹೇಳಿಕೆ ಉಲ್ಲೇಖಿಸಿ tennisworldusa.org ವರದಿ ಮಾಡಿದೆ. ವಿಂಬಲ್ಡನ್ ನಲ್ಲಿ ಮಹಿಳೆಯರ ಸಿಂಗಲ್ಸ್, ಡಬಲ್ಸ್ ಫಲಿತಾಂಶ, ಚಿತ್ರಗಳು ಮುಂದಿದೆ...

'ಸಚಿನ್ ತೆಂಡೂಲ್ಕರ್ ಎಂದ್ರೆ ಯಾರು ನನಗೊತ್ತಿಲ್ಲ'
ಈ ಬಾರಿ ಟೂರ್ನಿಯ ಫೇವರಿಟ್ ಎನಿಸಿದ್ದ ಐದು ಬಾರಿ ಚಾಂಪಿಯನ್ ಮರಿಯಾ ಆಟ ನೋಡಲೆಂದೇ ಸಚಿನ್ ಬಂದಿದ್ದರು ಆದರೆ, ಮರಿಯಾಗೆ ಸಚಿನ್ ಯಾರೆಂಬುದೇ ಗೊತ್ತಿಲ್ಲವಂತೆ ಎಂದು ಆಕೆ ಹೇಳಿಕೆ ಉಲ್ಲೇಖಿಸಿ tennisworldusa.org ವರದಿ ಮಾಡಿದೆ.
ಚಿತ್ರದಲ್ಲಿ : ಡೇವಿಡ್ ಬೆಕ್ ಹ್ಯಾಮ್, ಸಚಿನ್ ತೆಂಡೂಲ್ಕರ್ ಕಾಣಬಹುದು
ಟೂರ್ನಿಯಿಂದ ಮರಿಯಾ ಔಟ್
ವಿಂಬಲ್ಡನ್ ಐದನೇ ಸುತ್ತಿನಲ್ಲಿ ರಷ್ಯಾದ ಮರಿಯಾ ಶರಪೋವಾ ಅವರನ್ನು ಐದನೇ ಸೀಡ್ ನ ಜರ್ಮನಿಯ ಕರ್ಬರ್ ಅವರು 7-6, 4-6, 6-4 ರಲ್ಲಿ ಸೋಲಿಸಿದ್ದಾರೆ.

ವೀನಸ್ ಹಾಗೂ ಸೆರೆನಾ ವಿಲಿಯಮ್ಸ್
ಗಾಯಗೊಂಡು ನಿವೃತ್ತಿ ಘೋಷಿಸಿದ ವೀನಸ್ ಹಾಗೂ ಸೆರೆನಾ ವಿಲಿಯಮ್ಸ್ ಸೋದರಿಯರು.
ಅಮೆರಿಕದ ಈ ಜೋಡಿ ಜರ್ಮನಿಯ ಕ್ರಿಸ್ಟಿನಾ ಬಾರಿಯೊಸ್ ಹಾಗೂ ಸ್ವಿಟ್ಜರ್ಲೆಂಡ್ ನ ಸ್ಟೆಫನಿ ವೊಗೆಲೆ ಅವರ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಮುಂದುವರೆದಿದೆ.

ಜರ್ಮನಿಯ ಲಿಸಿಕಿಗೆ ಚಿಕಿತ್ಸೆ
ಕಜಕಿಸ್ತಾನದ ಯರೊಸ್ಲಾವಾ ಶ್ವೆಡೋವಾ ವಿರುದ್ಧದ ಪಂದ್ಯದಲ್ಲಿ ಜರ್ಮನಿಯ ಲಿಸಿಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಚಿತ್ರAP/PTI

ಜೆಕ್ ರಿಪಬ್ಲಿಕ್ ನ ಪೆಟ್ರಾ ಕ್ವಿಟೊವಾ
ಬರ್ಬೊರಾ ಜಹ್ಲಾವೊವಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೆಕ್ ರಿಪಬ್ಲಿಕ್ ನ ಪೆಟ್ರಾ ಕ್ವಿಟೊವಾ ಅವರ ಭಂಗಿ. AP/PTI

ಸೆರೆನಾ ಸೋಲಿಸಿದ ಸಂಭ್ರಮದಲ್ಲಿ ಕಿಸ್
ಅಮೆರಿಕದ ಸೆರೆನಾ ವಿಲಿಯಮ್ಸ್ ಸೋಲಿಸಿದ ಸಂಭ್ರಮದಲ್ಲಿ ಭೂಮಿಗೆ ಕಿಸ್ ಮಾಡಿದ ಫ್ರಾನ್ಸಿನ ಅಲಿಜ್ ಕೊರ್ನೆಟ್

ಅಯ್ಯೋ ನಾನು ಗೆದ್ದು ಬಿಟ್ನಾ
ಅಯ್ಯೋ ನಾನು ಗೆದ್ದು ಬಿಟ್ನಾ ಎನ್ನುವ ರೀತಿಯಲ್ಲಿ ನಿಂತಿರುವ ಜರ್ಮನ್ನಿಯ ಆಂಜಲಿಕ್ಯೂ ಕರ್ಬರ್. ಮರಿಯಾ ಶರಪೋವಾ ಮನೆಗೆ ಕಳಿಸಿದ ಆಟಗಾರ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications