Women's T20 World Cup 2023: ಶ್ರೀಲಂಕಾ ವಿರುದ್ಧ ಆಸೀಸ್ ಮಹಿಳೆಯರಿಗೆ ಸುಲಭ ಜಯ; ಸೆಮಿಸ್‌ಗೆ ಹತ್ತಿರ

ಗುರುವಾರ, ಫೆಬ್ರವರಿ 16ರಂದು ದಕ್ಷಿಣ ಆಫ್ರಿಕಾದ ಗ್ಕೆಬರ್ಹಾನ ಜಾರ್ಜ್ ಪಾರ್ಕ್‌ನಲ್ಲಿ ನಡೆದ 2023ರ ಮಹಿಳಾ ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ಮಹಿಳೆಯರ ವಿರುದ್ಧ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮಹಿಳಾ ತಂಡ ಸುಲಭ ಜಯ ಸಾಧಿಸಿದೆ.
ಆಸ್ಟ್ರೇಲಿಯ ಮಹಿಳೆಯರು ಶ್ರೀಲಂಕಾ ಮಹಿಳೆಯರ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರು ಮತ್ತು ಗ್ರೂಪ್ 1ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.
Women's T20 World Cup: ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆಗೈದ ಮೊದಲ ಭಾರತೀಯಳಾದ ದೀಪ್ತಿ ಶರ್ಮಾ!
ಶ್ರೀಲಂಕಾ ನೀಡಿದ್ದ 113 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 15.5 ಓವರ್‌ಗಳಲ್ಲಿ ತಲುಪಿದರು. ಇದೇ ವೇಳೆ ಆರಂಭಿಕರಾದ ಬೆತ್ ಮೂನಿ 43 ಎಸೆತಗಳಲ್ಲಿ ಅಜೇಯ 54 ರನ್ ಮತ್ತು ಅಲಿಸ್ಸಾ ಹೀಲಿ 53 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು.
ಈ ಮೂಲಕ ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳ ಗೆಲುವು ತನ್ನದಾಗಿಸಿಕೊಂಡಿತು ಮತ್ತು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮಹಿಳಾ ತಂಡ ಸೆಮಿಫೈನಲ್ ತಲುಪುವುದು ಖಚಿತವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮಹಿಳಾ ತಂಡ ಉತ್ತಮ ಆರಂಭವನ್ನು ಪಡೆದಿತ್ತು. ಹರ್ಷಿತಾ ಸಮರವಿಕ್ರಮ ಮತ್ತು ನಾಯಕಿ ಚಾಮರಿ ಅಥಾಪತ್ತು ಉತ್ತಮ ಜೊತೆಯಾಟದ ಮುನ್ಸೂಚನೆ ನೀಡಿದ್ದರು.
ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಬೌಲಿಂಗ್‌ನಲ್ಲಿ ಚಾಮರಿ ಅಥಾಪತ್ತು ಅವರು 16 ರನ್‌ಗಳಿಗೆ ಔಟ್ ಆದ ಕಾರಣ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ನಂತರ ಗ್ರೇಸ್ ಹ್ಯಾರಿಸ್ ಬೌಲಿಂಗ್‌ನಲ್ಲಿ 34 ರನ್ ಗಳಿಸಿ ಆಡುತ್ತಿದ್ದ ಹರ್ಷಿತಾ ಸಮರವಿಕ್ರಮ ಔಟಾದರು.
ನಂತರ ವಿಶ್ಮಿ ಗುಣರತ್ನೆ ಅವರು 24 ರನ್ ಬಾರಿಸಿ ಉತ್ತಮವಾಗಿ ಆಡುತ್ತಿದ್ದಾಗ ಮೆಗನ್ ಶುಟ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದು ಶ್ರೀಲಂಕಾ ತಂಡಕ್ಕೆ ದೊಡ್ಡ ಹಿನ್ನಡೆ ತಂದುಕೊಟ್ಟಿತು.
ಖಾತೆ ತೆರೆಯುವ ಮುನ್ನವೇ ಓಷದಿ ರಣಸಿಂಘೆ ಅವರನ್ನು ಗ್ರೇಸ್ ಹ್ಯಾರಿಸ್ ಔಟ್ ಮಾಡಿ ತಮ್ಮ ಎರಡನೇ ವಿಕೆಟ್ ಪಡೆದರು. ಇನ್ನು ಶ್ರೀಲಂಕಾದ ಕೆಳ ಕ್ರಮಾಂಕವನ್ನು ಮೆಗನ್ ಶುಟ್ ಕಾಡಿದರು. ಅಂತಿಮವಾಗಿ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 112 ರನ್‌ಗಳಿಗೆ ನಿರ್ಬಂಧಗೊಂಡಿತು.
WPL 2023: ಸ್ಮೃತಿ ಮಂಧಾನ, ಎಲಿಸಾ ಪೆರ್ರಿ ಬಳಿ ಹೊಸ ಬೇಡಿಕೆ ಇಟ್ಟ ಆರ್‌ಸಿಬಿ ಫ್ಯಾನ್ಸ್!
ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಮೆಗನ್ ಶುಟ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಗ್ರೇಸ್ ಹ್ಯಾರಿಸ್ ಎರಡು ವಿಕೆಟ್ ಪಡೆದರು. ಎಲ್ಲಿಸ್ ಪೆರ್ರಿ ಮತ್ತು ವೇರ್ಹ್ಯಾಮ್ ತಲಾ ಒಂದೊಂದು ವಿಕೆಟ್ ತಮ್ಮದಾಗಿಸಿಕೊಂಡರು.
ಪ್ರತ್ಯುತ್ತರವಾಗಿ ನಂತರ ಬ್ಯಾಟಿಂಗ್ ಆರಂಭಿಸಿದ ಬೆಥ್ ಮೂನಿ ಮತ್ತು ಅಲಿಸ್ಸಾ ಹೀಲಿ ಅತ್ಯುತ್ತಮ ಆರಂಭವನ್ನು ಮುಂದುವರೆಸಿದರು. ಈ ಇಬ್ಬರೂ ಆರಂಭಿಕರು ತಮ್ಮ ವೈಯಕ್ತಿಕ ಅರ್ಧಶತಕಗಳನ್ನು ದಾಖಲಿಸಿದ್ದಲ್ಲದೇ, ತಂಡವನ್ನು ಗೆಲುವಿನ ಗಡಿ ತಲುಪಿಸಿದರು.
ಇದೇ ವೇಳೆ, ಮಹಿಳಾ ಟಿ20 ವಿಶ್ವಕಪ್‌ಗಳಲ್ಲಿ 7 ಅರ್ಧಶತಕ ಬಾರಿಸುವ ಮೂಲಕ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ವೆಸ್ಟ್ ಇಂಡೀಸ್‌ನ ಸ್ಟಾಫಾನಿ ಟೇಲರ್ ಮತ್ತು ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ ದಾಖಲೆಯನ್ನು ಅಲಿಸ್ಸಾ ಹೀಲಿ ಹಿಂದಿಕ್ಕಿದರು.
ಆಸ್ಟ್ರೇಲಿಯಾ ಮಹಿಳಾ ತಂಡದ ಮುಂದಿನ ಪಂದ್ಯವನ್ನು ಶನಿವಾರ, ಫೆಬ್ರುವರಿ 18ರಂದು ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications