India Squad for Women's T20 World Cup 2023 : ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ಭಾರತ ತಂಡ ಪ್ರಕಟ

ಅಖಿಲ ಭಾರತ ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾದಲ್ಲಿ ಜನವರಿಯಲ್ಲಿ ಪ್ರಾರಂಭವಾಗುವ ಟಿ20 ತ್ರಿಕೋನ ಸರಣಿ ಮತ್ತು ಮುಂಬರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023 ಟೂರ್ನಿಗಾಗಿ ಭಾರತ ತಂಡವನ್ನು ಬುಧವಾರ (ಡಿಸೆಂಬರ್ 28) ಆಯ್ಕೆ ಮಾಡಿದೆ.
ತ್ರಿಕೋನ ಸರಣಿ ಮತ್ತು 2023ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಭಾರತ ಮಹಿಳಾ ತಂಡವನ್ನು ಮುನ್ನಡೆಸಲಿದ್ದರೆ, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ.
IND vs SL: ಶ್ರೀಲಂಕಾ ವಿರುದ್ಧದ ಟಿ20, ಏಕದಿನ ಸರಣಿಗೆ ಭಾರತ ತಂಡ ಪ್ರಕಟ; ಪಾಂಡ್ಯಗೆ ಟಿ20 ನಾಯಕತ್ವ
"2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 10ರಿಂದ ಪ್ರಾರಂಭವಾಗಲಿದೆ. ಭಾರತ ಮಹಿಳಾ ತಂಡ ಫೆಬ್ರವರಿ 12ರಂದು ಪಾಕಿಸ್ತಾನದ ವಿರುದ್ಧ ಕೇಪ್ ಟೌನ್‌ನಲ್ಲಿ ತನ್ನ ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ. ಟೀಂ ಇಂಡಿಯಾವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಐರ್ಲೆಂಡ್‌ನೊಂದಿಗೆ ಗುಂಪು 2ರಲ್ಲಿದೆ".
"ಗುಂಪು ಹಂತದ ಕೊನೆಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್‌ನಲ್ಲಿ ಆಡುತ್ತವೆ. ಫೈನಲ್ ಪಂದ್ಯವು 2023ರ ಫೆಬ್ರವರಿ 26ರಂದು ನಡೆಯಲಿದೆ," ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಟಿ20 ವಿಶ್ವಕಪ್‌ಗಾಗಿ ಭಾರತದ 15 ಸದಸ್ಯರ ತಂಡ
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2023ರ ಮಹಿಳಾ ಟಿ20 ವಿಶ್ವಕಪ್‌ಗಾಗಿ ಭಾರತದ 15 ಸದಸ್ಯರ ತಂಡಕ್ಕೆ ಅನುಭವಿ ವೇಗಿ ಶಿಖಾ ಪಾಂಡೆ ಬುಧವಾರ ಅಚ್ಚರಿಯ ರೀತಿಯಲ್ಲಿ ಮರಳಿದ್ದಾರೆ.
ವಿವಾದಾತ್ಮಕವಾಗಿ ತಂಡದಿಂದ ಕೈಬಿಡುವ ಮೊದಲು ಶಿಖಾ ಪಾಂಡೆ ಕೊನೆಯದಾಗಿ ಅಕ್ಟೋಬರ್ 2021ರಲ್ಲಿ ಭಾರತ ತಂಡಕ್ಕಾಗಿ ಆಡಿದ್ದರು. ಆಕೆಯ ಸೇರ್ಪಡೆಯು ವೇಗದ ಬೌಲಿಂಗ್ ವಿಭಾಗದ ಕೊರತೆಯನ್ನು ನೀಗಿಸಲಿದೆ. ಚೆಂಡನ್ನು ಸ್ವಿಂಗ್ ಮಾಡುವ ಶಕ್ತಿ ಹೊಂದಿರುವ 33 ವರ್ಷ ವಯಸ್ಸಿನ ಶಿಖಾ ಮೂರು ಟೆಸ್ಟ್, 55 ಏಕದಿನ ಮತ್ತು 56 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ಬೌಲಿಂಗ್ ಆಯ್ಕೆಗಳಲ್ಲಿ ರೇಣುಕಾ ಠಾಕೂರ್ ಮತ್ತು ಪೂಜಾ ವಸ್ತ್ರಾಕರ್
ಇತ್ತೀಚಿಗೆ ಬಲಿಷ್ಠ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಭಾರತ 1-4 ಅಂತರದಿಂದ ಸರಣಿ ಸೋಲು ಕಂಡಾಗ, ಕಳಪೆ ರನ್ ಗಳಿಸಿದ ಹೊರತಾಗಿಯೂ ಜೆಮಿಮಾ ರೋಡ್ರಿಗಸ್ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಸರಣಿಯ ನಂತರ ಎಡಗೈ ವೇಗಿ ಅಂಜಲಿ ಸರ್ವಾಣಿ ಕೂಡ ವಿಶ್ವಕಪ್ ತಂಡದ ಭಾಗವಾಗಿದ್ದಾರೆ. ಇತರ ವೇಗದ ಬೌಲಿಂಗ್ ಆಯ್ಕೆಗಳಲ್ಲಿ ರೇಣುಕಾ ಠಾಕೂರ್ ಮತ್ತು ಪೂಜಾ ವಸ್ತ್ರಾಕರ್ ಸೇರಿದ್ದಾರೆ. ಪೂಜಾರನ್ನು ತಂಡದಲ್ಲಿ ಸೇರಿಸಿಕೊಳ್ಳುವುದು ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ.

ಜನವರಿ 19ರಿಂದ ಪ್ರಾರಂಭವಾಗುವ ತ್ರಿಕೋನ ಸರಣಿ
ಆಸ್ಟ್ರೇಲಿಯಾ ಸರಣಿಯು ಬೌಲಿಂಗ್ ವಿಭಾಗದಲ್ಲಿ ಭಾರತದ ದೌರ್ಬಲ್ಯವನ್ನು ಬಹಿರಂಗಪಡಿಸಿದೆ ಮತ್ತು ಐಸಿಸಿ ಟೂರ್ನಿಗೆ ಮೊದಲು ತಂಡಕ್ಕೆ ಸಾಕಷ್ಟು ಕೆಲಸ ಮಾಡಬೇಕಿದೆ. ತಂಡದ ಸ್ಪಿನ್ನರ್‌ಗಳಲ್ಲಿ ರಾಧಾ ಯಾದವ್ ಮತ್ತು ರಾಜೇಶ್ವರಿ ಗಾಯಕ್‌ವಾಡ್ ಜೊತೆಗೆ ಆಲ್‌ರೌಂಡರ್‌ಗಳಾದ ದೀಪ್ತಿ ಶರ್ಮಾ ಮತ್ತು ದೇವಿಕಾ ವೈದ್ಯ ಸೇರಿದ್ದಾರೆ.
ಶಫಾಲಿ ವರ್ಮಾ ಮತ್ತು ರಿಚಾ ಘೋಷ್ ಈಗಾಗಲೇ ಅಂಡರ್-19 ತಂಡದೊಂದಿಗೆ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಟಿ20 ವಿಶ್ವಕಪ್‌ಗೆ ಮುಂಚಿತವಾಗಿ, ಟೀಮ್ ಇಂಡಿಯಾ ಜನವರಿ 19ರಿಂದ ಪ್ರಾರಂಭವಾಗುವ ತ್ರಿಕೋನ ಸರಣಿಯ ಪಂದ್ಯಾವಳಿಯನ್ನು ಆಡಲಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023ಗಾಗಿ ಭಾರತ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್) ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.
ಮೀಸಲು: ಸಬ್ಬಿನೇನಿ ಮೇಘನಾ, ಸ್ನೇಹ ರಾಣಾ, ಮೇಘನಾ ಸಿಂಗ್.

ತ್ರಿಕೋನ ಸರಣಿಗೆ ಭಾರತ ಮಹಿಳಾ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಯಾಸ್ತಿಕಾ ಭಾಟಿಯಾ (ವಿಕೆಟ್), ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಜೇಶ್ವರಿ ಗಾಯಕ್‌ವಾಡ್, ರಾಧಾ ಯಾದವ್, ರೇಣುಕಾ ಸಿಂಗ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಅಮಂಜೋತ್ ಕೌರ್, ಪೂಜಾ ವಸ್ತ್ರಕರ್, ಸಬ್ಬಿನೇನಿ ಮೇಘನಾ, ಸ್ನೇಹ್ ರಾಣಾ, ಶಿಖಾ ಪಾಂಡೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications