Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ವಿಶ್ವಕಪ್, ಭಾರತ vs ಪಾಕ್: 114 ರನ್‌ಗೆ 6 ವಿಕೆಟ್ ಕಳೆದುಕೊಂಡು ನಂತರ ಅಬ್ಬರಿಸಿದ ಭಾರತ

Womens WC 2022: India Women have given the target of 245 runs to Pakistan Women

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ನ್ಯೂಜಿಲೆಂಡ್ ನೆಲದಲ್ಲಿ ನಡೆಯುತ್ತಿದ್ದು, ಮಾರ್ಚ್ 4ರಂದು ನಡೆದ ನ್ಯೂಜಿಲೆಂಡ್ ಮಹಿಳಾ ತಂಡ ಹಾಗೂ ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿ ಆರಂಭಗೊಂಡಿದೆ. ಇನ್ನು ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯವನ್ನು ಭಾರತೀಯ ವನಿತೆಯರ ತಂಡ ಇಂದು ( ಮಾರ್ಚ್ 6 ) ಆಡುತ್ತಿದ್ದು ತನ್ನ ಬದ್ಧ ವೈರಿಯಾದ ಪಾಕಿಸ್ತಾನ ವನಿತೆಯರ ತಂಡದ ವಿರುದ್ಧ ಕಣಕ್ಕಿಳಿದಿದೆ.

ಮೌಂಟ್ ಮೌಂಗನುಯಿ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 6.30ಕ್ಕೆ ಆರಂಭವಾಗಿದ್ದು ಟಾಸ್ ಗೆದ್ದ ಭಾರತೀಯ ವನಿತೆಯರ ತಂಡ ಬ್ಯಾಟಿಂಗ್ ಆರಿಸಿಕೊಂಡು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಕಲೆಹಾಕಿದೆ. ಈ ಮೂಲಕ ತನ್ನ ಬದ್ಧ ವೈರಿಯಾದ ಪಾಕಿಸ್ತಾನ ತಂಡಕ್ಕೆ ಭಾರತೀಯ ವನಿತೆಯರ ತಂಡ 245 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿದೆ.

ಇನ್ನು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತೀಯ ವನಿತೆಯರ ತಂಡದ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದ ಸ್ಮೃತಿ ಮಂದಣ್ಣ ಮತ್ತು ಶೆಫಾಲಿ ವರ್ಮಾ ಪೈಕಿ ಶೆಫಾಲಿ ವರ್ಮಾ ಶೂನ್ಯಕ್ಕೆ ಔಟ್ ಆದ ಕಾರಣ ಟೀಮ್ ಇಂಡಿಯಾ ಆರಂಭಿಕ ಆಘಾತವನ್ನು ಅನುಭವಿಸಿತು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪ್ತಿ ಶರ್ಮಾ ಜತೆ 92 ರನ್‌ಗಳ ಜತೆ ಆಟವನ್ನಾಡಿದ ಸ್ಮೃತಿ ಮಂದಾನ 4 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾದರು. ಸ್ಮೃತಿ ಮಂಧಾನ 52 ರನ್ ಗಳಿಸಿ ಔಟ್ ಆದರೆ, ದೀಪ್ತಿ ಶರ್ಮಾ 40 ರನ್ ಗಳಿಸಿ ಔಟಾದರು. ಹೀಗೆ 98 ರನ್‌ಗಳಿಗೆ ತನ್ನ ಮೊದಲ 3 ವಿಕೆಟ್ ಕಳೆದುಕೊಂಡ ಭಾರತ 114 ರನ್ ಮುಟ್ಟುವಷ್ಟರಲ್ಲಿ ತನ್ನ ಮುಂದಿನ 3 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು.

ಹೌದು, ಸ್ಮೃತಿ ಮಂದಾನ ಔಟ್ ಆದ ನಂತರ ನಾಯಕಿ ಮಿಥಾಲಿ ರಾಜ್ 9 ರನ್ ಗಳಿಸಿ ನಿರಾಸೆ ಮೂಡಿಸಿದರೆ, ಹರ್ಮನ್ ಪ್ರೀತ್ ಕೌರ್ 5 ರನ್ ಗಳಿಸಿ ಔಟ್ ಆದರು ಹಾಗೂ ರಿಚಾ ಘೋಷ್ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಹೀಗೆ 114 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತ ಕಲೆ ಹಾಕುವತ್ತ ಸಾಗುತ್ತಿದ್ದ ಭಾರತೀಯ ವನಿತೆಯರ ತಂಡಕ್ಕೆ ಸ್ನೇಹಾ ರಾಣಾ ಮತ್ತು ಪೂಜಾ ವಸ್ತ್ರಾಕರ್ ಆಸರೆಯಾದರು. ಪೂಜಾ ವಸ್ತ್ರಾಕರ್ 59 ಎಸೆತಗಳಲ್ಲಿ 8 ಬೌಂಡರಿ ಸಹಿತ 67 ರನ್ ಚಚ್ಚಿದರೆ, ಸ್ನೇಹಾ ರಾಣಾ 48 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು ಹಾಗೂ ಪೂಜಾ ವಸ್ತ್ರಾಕರ್ ಔಟ್ ಆದ ನಂತರ ಬಂದ ಜುಲಾನ್ ಗೋಸ್ವಾಮಿ 6 ರನ್ ಕಲೆ ಹಾಕಿದರು. ಈ ಮೂಲಕ ಅಲ್ಪ ಮೊತ್ತ ಕಲೆಹಾಕುವತ್ತ ಸಾಗಿದ್ದ ಭಾರತೀಯ ವನಿತೆಯರ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ಗಳಿಸಿದ್ದು ಎದುರಾಳಿ ಪಾಕಿಸ್ತಾನ ವನಿತೆಯರ ತಂಡಕ್ಕೆ ಗೆಲ್ಲಲು 245 ರನ್‌ಗಳ ಗುರಿಯನ್ನು ನೀಡಿದ್ದಾರೆ. ಏಳನೇ ವಿಕೆಟ್‍ಗೆ ಜತೆಯಾದ ಸ್ನೇಹ ರಾಣಾ ಮತ್ತು ಪೂಜಾ ವಸ್ತ್ರಾಕರ್ 122 ರನ್‌ಗಳ ಜತೆಯಾಟವಾಡಿದ್ದು ಟೀಮ್ ಇಂಡಿಯಾಗೆ ಆಸರೆಯಾಗಿ ಪರಿಣಮಿಸಿದೆ. ಆರಂಭದಲ್ಲಿ ಲಯ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಪಂದ್ಯದ ಅಂತ್ಯದ ವೇಳೆಯಲ್ಲಿ ಉತ್ತಮ ಹಂತ ತಲುಪಿದ್ದು, ಸದ್ಯ ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ..

Story first published: Sunday, March 6, 2022, 10:22 [IST]
Other articles published on Mar 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+