Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ವಿಶ್ವಕಪ್‌ 2022: ಸಂಕಷ್ಟಕ್ಕೆ ಸಿಲುಕಿ ನಂತರ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ

Womens World Cup 2022: India beats Pakistan by 107 runs

ಒಂದೆಡೆ ಮೊಹಾಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ನ್ಯೂಜಿಲೆಂಡ್ ನೆಲದಲ್ಲಿ ಆಯೋಜನೆಯಾಗಿರುವ ಮಹಿಳಾ ವಿಶ್ವಕಪ್ ಟೂರ್ನಿ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡುತ್ತಿದೆ. ಮಾರ್ಚ್ 4ರಂದು ನಡೆದ ನ್ಯೂಜಿಲೆಂಡ್ ಮಹಿಳಾ ತಂಡ ಮತ್ತು ವೆಸ್ಟ್ ಇಂಡೀಸ್ ವನಿತೆಯರ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾದ ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ವನಿತೆಯರ ತಂಡ ಇಂದು ( ಮಾರ್ಚ್ 6 ) ತನ್ನ ಮೊದಲನೇ ಪಂದ್ಯವನ್ನಾಡಿದ್ದು, ಈ ಪಂದ್ಯದಲ್ಲಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ 107 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಮೌಂಟ್ ಮೌಂಗನುಯಿ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 6.30ಕ್ಕೆ ಆರಂಭವಾಗಿದ್ದು ಟಾಸ್ ಗೆದ್ದ ಭಾರತೀಯ ವನಿತೆಯರ ತಂಡ ಬ್ಯಾಟಿಂಗ್ ಆರಿಸಿಕೊಂಡು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ ಸ್ಮೃತಿ ಮಂಧಾನ 52 ರನ್, ದೀಪ್ತಿ ಶರ್ಮಾ 40 ರನ್, ಸ್ನೇಹ ರಾಣಾ ಅಜೇಯ 53 ರನ್ ಮತ್ತು ಪೂಜಾ ವಸ್ತ್ರಾಕರ್ 67 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನ ತಂಡಕ್ಕೆ 245 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು.

ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 137 ರನ್‌ಗಳಿಗೆ ಆಲ್ ಔಟ್ ಆಗಿದ್ದು, ಭಾರತೀಯ ವನಿತೆಯರ ತಂಡದ ವಿರುದ್ಧ 107 ರನ್‌ಗಳ ಸೋಲನ್ನು ಕಂಡಿದೆ. ಇತ್ತ ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿ ಅದರಲ್ಲಿಯೂ ತನ್ನ ಬದ್ಧ ಎದುರಾಳಿಯಾದ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿರುವ ಭಾರತೀಯ ವನಿತೆಯರ ತಂಡ ಶುಭಾರಂಭವನ್ನು ಮಾಡಿದೆ.

ಬ್ಯಾಟಿಂಗ್‌ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ವನಿತೆಯರು

ಬ್ಯಾಟಿಂಗ್‌ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ವನಿತೆಯರು

ಭಾರತೀಯ ವನಿತೆಯರ ತಂಡದ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಪೈಕಿ ಶೆಫಾಲಿ ವರ್ಮಾ ಶೂನ್ಯಕ್ಕೆ ಔಟ್ ಆದ ಕಾರಣ ಟೀಮ್ ಇಂಡಿಯಾ ಆರಂಭಿಕ ಆಘಾತವನ್ನು ಅನುಭವಿಸಿತು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪ್ತಿ ಶರ್ಮಾ ಜತೆ 92 ರನ್‌ಗಳ ಜತೆ ಆಟವನ್ನಾಡಿದ ಸ್ಮೃತಿ ಮಂದಾನ 4 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾದರು. ಸ್ಮೃತಿ ಮಂಧಾನ 52 ರನ್ ಗಳಿಸಿ ಔಟ್ ಆದರೆ, ದೀಪ್ತಿ ಶರ್ಮಾ 40 ರನ್ ಗಳಿಸಿ ಔಟಾದರು. ಹೀಗೆ 98 ರನ್‌ಗಳಿಗೆ ತನ್ನ ಮೊದಲ 3 ವಿಕೆಟ್ ಕಳೆದುಕೊಂಡ ಭಾರತ 114 ರನ್ ಮುಟ್ಟುವಷ್ಟರಲ್ಲಿ ತನ್ನ ಮುಂದಿನ 3 ವಿಕೆಟ್‍ಗಳನ್ನು ಕಳೆದುಕೊಂಡು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಹೌದು, ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ನಾಯಕಿ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಎರಡಂಕೆ ಮುಟ್ಟುವಲ್ಲಿಯೂ ವಿಫಲರಾಗಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಬೇಗನೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಸ್ನೇಹಾ ರಾಣಾ ಮತ್ತು ಪೂಜಾ ವಸ್ತ್ರಾಕರ್ ಆಸರೆಯಾದರು. ಪೂಜಾ ವಸ್ತ್ರಾಕರ್ 59 ಎಸೆತಗಳಲ್ಲಿ 8 ಬೌಂಡರಿ ಸಹಿತ 67 ರನ್ ಚಚ್ಚಿದರೆ, ಸ್ನೇಹಾ ರಾಣಾ 48 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿ ಆಸರೆಯಾದರು.

ರಾಜೇಶ್ವರಿ ಗಾಯಕ್ವಾಡ್ ಉತ್ತಮ ಪ್ರದರ್ಶನ

ರಾಜೇಶ್ವರಿ ಗಾಯಕ್ವಾಡ್ ಉತ್ತಮ ಪ್ರದರ್ಶನ

ಬ್ಯಾಟಿಂಗ್ ವಿಭಾಗದಲ್ಲಿ ಪೂಜಾ ವಸ್ತ್ರಾಕರ್ ಅಬ್ಬರಿಸಿದರೆ, ಬೌಲಿಂಗ್ ವಿಭಾಗದಲ್ಲಿ ರಾಜೇಶ್ವರಿ ಗಾಯಕ್ವಾಡ್ 4 ವಿಕೆಟ್ ಪಡೆದು ಮಿಂಚಿದರು. ಬ್ಯಾಟಿಂಗ್‌ನಲ್ಲಿ ಅಜೇಯ 53 ರನ್ ಕಲೆಹಾಕಿ ಮಿಂಚಿದ್ದ ಸ್ನೇಹ ರಾಣಾ ಮತ್ತು ಜೂಲನ್ ಗೋಸ್ವಾಮಿ ಅಜೇಯ 2 ವಿಕೆಟ್ ಪಡೆದರು. ಇನ್ನು ದೀಪ್ತಿ ಶರ್ಮಾ ಹಾಗೂ ಮೇಘನಾ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

Ind vs Pakistan Worldcup ಪಂದ್ಯದಲ್ಲಿ ನಡೆದಿದ್ದೇನು? | Oneindia Kannada
30 ರನ್ ದಾಟದ ಪಾಕಿಸ್ತಾನ ಆಟಗಾರ್ತಿಯರು

30 ರನ್ ದಾಟದ ಪಾಕಿಸ್ತಾನ ಆಟಗಾರ್ತಿಯರು

ಭಾರತೀಯ ವನಿತೆಯರ ತಂಡ ನೀಡಿದ 245 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ವನಿತೆಯರ ತಂಡದ ಪರ ಯಾವುದೇ ಆಟಗಾರ್ತಿ ಕೂಡ 30 ರನ್‌ಗಳಿಗಿಂತ ಹೆಚ್ಚಿನ ರನ್ ಬಾರಿಸುವಲ್ಲಿ ಯಶಸ್ವಿಯಾಗಲಿಲ್ಲ. ಆರಂಭಿಕ ಆಟಗಾರ್ತಿ ಸಿದ್ರಾ ಅಮಿನ್ 30 ರನ್ ಮತ್ತು ದಿಯಾನ್ ಬೈಗ್ 24 ರನ್ ಗಳಿಸಿದ್ದು ಬಿಟ್ಟರೆ ಬೇರೆ ಆಟಗಾರ್ತಿಯರು 20ರ ಗಡಿದಾಟುವಲ್ಲಿಯೂ ವಿಫಲರಾದರು.

Story first published: Sunday, March 6, 2022, 13:45 [IST]
Other articles published on Mar 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+