For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವಕಪ್ 2022: ಬಾಂಗ್ಲಾದೇಶ ವಿರುದ್ಧವೂ ಸೋತು ಹೀನಾಯ ಹಂತ ತಲುಪಿದ ಪಾಕಿಸ್ತಾನ

Womens World Cup 2022: Bangladesh women beat Pakistan Women by 9 runs

ಮಾರ್ಚ್ 4ರಂದು ನಡೆದ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವನಿತೆಯರ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿರುವ ಪ್ರತಿಷ್ಠಿತ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಇಂದು ( ಮಾರ್ಚ್ 14 ) ಪಾಕಿಸ್ತಾನ ವನಿತೆಯರ ತಂಡ ಹಾಗೂ ಬಾಂಗ್ಲಾದೇಶ ವನಿತೆಯರ ತಂಡಗಳು ಸೆಣಸಾಟ ನಡೆಸಿವೆ. ಈ ಪಂದ್ಯದಲ್ಲಿ ಪಾಕಿಸ್ತಾನ ವನಿತೆಯರ ತಂಡ ಬಾಂಗ್ಲಾದೇಶ ವನಿತೆಯರ ತಂಡದ ವಿರುದ್ಧ 9 ರನ್‌ಗಳ ಸೋಲನ್ನು ಅನುಭವಿಸುವುದರ ಮೂಲಕ ಮತ್ತೊಂದು ಮುಖಭಂಗಕ್ಕೆ ಒಳಗಾಗಿದೆ.

ಇಂದು ( ಮಾರ್ಚ್ 14 ) ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 3.30ಕ್ಕೆ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ವನಿತೆಯರ ತಂಡ ಬೌಲಿಂಗ್ ಆಯ್ದುಕೊಳ್ಳುವುದರ ಮೂಲಕ ಎದುರಾಳಿ ಬಾಂಗ್ಲಾದೇಶ ವನಿತೆಯರ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ವನಿತೆಯರ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಕಲೆಹಾಕಿ ಪಾಕಿಸ್ತಾನ ವನಿತೆಯರ ತಂಡಕ್ಕೆ ಗೆಲ್ಲಲು 235 ರನ್‌ಗಳ ಗುರಿಯನ್ನು ನೀಡಿತು. ಬಾಂಗ್ಲದೇಶದ ಪರ ಶರ್ಮಿನ್ ಅಖ್ತೆರ್ 44 ರನ್, ಫರ್ಘಾನಾ ಹೊಕ್ 71 ರನ್, ನಾಯಕಿ ನಿಗರ್ ಸುಲ್ತಾನಾ 46 ರನ್ ಕಲೆಹಾಕಿ ಜವಾಬ್ದಾರಿಯುತ ಆಟವನ್ನಾಡಿ ತಂಡಕ್ಕೆ ಆಸರೆಯಾದರು. ಈ ಆಟಗಾರ್ತಿಯರನ್ನು ಹೊರತುಪಡಿಸಿ ತಂಡದ ಇತರೆ ಉಳಿದ ಯಾವುದೇ ಆಟಗಾರ್ತಿಯರೂ ಕೂಡ ಇಪ್ಪತ್ತರ ಗಡಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ. ಪಾಕಿಸ್ತಾನ ವನಿತೆಯರ ತಂಡದ ಪರ ನಶ್ರಾ ಸಂಧು 3 ವಿಕೆಟ್ ಪಡೆದರೆ, ಫಾತಿಮಾ ಸನಾ, ನಿದಾ ದರ್ ಮತ್ತು ಒಮೈಮಾ ಸೋಹೈಲ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ಬಾಂಗ್ಲಾದೇಶ ವನಿತೆಯರ ತಂಡ ನೀಡಿದ 235 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ವನಿತೆಯರ ತಂಡಕ್ಕೆ ಉತ್ತಮ ಆರಂಭ ದೊರಕಿತು. ಪಾಕ್ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದ ನಹಿದಾ ಖಾನ್ ಮತ್ತು ಸಿದ್ರಾ ಅಮೀನ್ 91 ರನ್‌ಗಳ ಜತೆಯಾಟವಾಡಿದರು. ನಹಿದಾ ಖಾನ್ 43 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರೆ ಸಿದ್ರಾ ಅಮೀನ್ ಶತಕ ಸಿಡಿಸಿ ಅಂತಿಮ ಹಂತದವರೆಗೂ ಹೋರಾಟ ನಡೆಸಿ ರನ್ಔಟ್ ಆಗಿ ನಿರಾಸೆ ಮೂಡಿಸಿದರು. ಹೀಗೆ ಕೊನೆಯವರೆಗೂ ಹೋರಾಟ ನಡೆಸಿದ ಸಿದ್ರಾ ಅಮೀನ್ 104 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಿ ಬಿಸ್ಮಾ ಮರೂಫ್ 31 ರನ್ ಗಳಿಸಿದರು. ಇನ್ನುಳಿದಂತೆ ಒಮೈಮಾ ಸೊಹೈಲ್ 10 ರನ್ ಗಳಿಸಿದರೆ, ನಂತರ ಕಣಕ್ಕಿಳಿದ ನಿದಾ ದರ್, ಅಲಿಯಾ ರಿಯಾಜ್ ಮತ್ತು ಫಾತಿಮಾ ಸನಾ ಸಾಲು ಸಾಲಾಗಿ ಶೂನ್ಯ ಸುತ್ತಿ ನಿರ್ಗಮಿಸಿದರು. ಹಾಗೂ ಸಿದ್ರಾ ನವಾಜ್ 1 ರನ್, ಡಯಾನಾ ಬೈಗ್ 12 ರನ್ ಗಳಿಸಿದರೆ, ನಶ್ರಾ ಸಂಧು ಅಜೇಯ 9 ರನ್ ಮತ್ತು ಗುಲಾಮ್ ಫಾತಿಮಾ ಅಜೇಯ 5 ರನ್ ಗಳಿಸಿದರು. ಈ ಮೂಲಕ ಪಾಕಿಸ್ತಾನ ವನಿತೆಯರ ತಂಡ 9 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿ 9 ರನ್‌ಗಳ ಸೋಲನ್ನು ಅನುಭವಿಸಿತು. ಬಾಂಗ್ಲಾದೇಶ ವನಿತೆಯರ ತಂಡದ ಪರ ಫತಿಮಾ ಖಾತುನ್ 3 ವಿಕೆಟ್, ರುಮಾನಾ ಅಹ್ಮೆದ್ 2 ವಿಕೆಟ್, ಸಲ್ಮಾ ಖಾತುನ್ ಮತ್ತು ಜಹಾನಾರಾ ಆಲಂ ತಲಾ ಒಂದೊಂದು ವಿಕೆಟ್ ಪಡೆದರು. ಈ ಮೂಲಕ ಈ ಬಾರಿಯ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಇಲ್ಲಿಯವರೆಗೂ ತಾನಾಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಪಾಕಿಸ್ತಾನ ವನಿತೆಯರ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೌದು, ಮೊದಲಿಗೆ ಭಾರತೀಯ ವನಿತೆಯರ ತಂಡದ ವಿರುದ್ದ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ವನಿತೆಯರ ತಂಡ ನಂತರ ನಡೆದ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧವೂ ಸೋಲುಂಡಿತು, ನಂತರ ತನ್ನ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ತಂಡದ ವಿರುದ್ಧ ಸೋತು ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನ ವನಿತೆಯರ ತಂಡ ಇದೀಗ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲದೇಶ ವನಿತೆಯರ ತಂಡದ ವಿರುದ್ಧವೂ ಸೋತು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ತೀವ್ರ ಮುಖಭಂಗಕ್ಕೊಳಗಾಗಿದೆ.

ಪಾಕಿಸ್ತಾನ ವನಿತೆಯರ ತಂಡ: ನಹಿದಾ ಖಾನ್, ಸಿದ್ರಾ ಅಮೀನ್, ಬಿಸಾಮ್ಹ್ ಮಾರೂಫ್ ( ನಾಯಕಿ ), ಒಮೈಮಾ ಸೊಹೈಲ್, ನಾದಾ ದಾರ್, ಆಲಿಯಾ ರಿಯಾಜ್, ಫಾತಿಮಾ ಸನಾ, ಸಿದ್ರಾ ನವಾಜ್ ( ವಿಕೆಟ್ ಕೀಪರ್ ), ಡಯಾನಾ ಬೈಗ್, ನಶ್ರಾ ಸಂಧು, ಗುಲಾಮ್ ಫಾತಿಮಾ

ಬಾಂಗ್ಲಾದೇಶ ವನಿತೆಯರ ತಂಡ: ಶಮೀಮಾ ಸುಲ್ತಾನ (ವಾಕ್), ಶರ್ಮಿನ್ ಅಖ್ತರ್, ಫರ್ಗಾನಾ ಹೊಕ್, ನಿಗರ್ ಸುಲ್ತಾನಾ (ಸಿ), ರುಮಾನಾ ಅಹ್ಮದ್, ರಿತು ಮೋನಿ, ಸಲ್ಮಾ ಖಾತುನ್, ಫಾಹಿಮಾ ಖಾತುನ್, ನಹಿದಾ ಅಕ್ಟರ್, ಜಹಾನಾರಾ ಆಲಂ, ಫರಿಹಾ ತ್ರಿಸ್ನಾ

Story first published: Monday, March 14, 2022, 16:02 [IST]
Other articles published on Mar 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+