For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವಕಪ್: ವಿಂಡೀಸ್ ವಿರುದ್ಧ ಗೆದ್ದು 13 ವರ್ಷಗಳ ನಂತರ ಗೆಲುವಿನ ಖಾತೆ ತೆರೆದ ಪಾಕಿಸ್ತಾನ

Womens world cup 2022: Pakistan women win a world cup game for the first time since 2009

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ವನಿತೆಯರ ವಿಶ್ವಕಪ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಗೆಲುವನ್ನು ಸಾಧಿಸದೇ ಇದ್ದ ತಂಡವೆಂದರೆ ಅದು ಪಾಕಿಸ್ತಾನ ವನಿತೆಯರ ತಂಡ. ಹೌದು, ಈ ಬಾರಿಯ ವನಿತೆಯರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಾನಾಡಿದ ಮೊದಲ ನಾಲ್ಕು ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಸೋಲನ್ನು ಅನುಭವಿಸಿತ್ತು. ಟೂರ್ನಿಯಲ್ಲಿ ತನ್ನ ಚೊಚ್ಚಲ ಪಂದ್ಯವನ್ನು ತನ್ನ ಸಾಂಪ್ರಾದಾಯಿಕ ಎದುರಾಳಿ ಆದ ಟೀಮ್ ಇಂಡಿಯಾ ವಿರುದ್ಧ ಆಡಿದ ಪಾಕಿಸ್ತಾನ ವನಿತೆಯರ ತಂಡ ಆ ಪಂದ್ಯದಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡಿತು. ನಂತರ ನಡೆದ ತನ್ನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ ಸೋತ ಪಾಕಿಸ್ತಾನ ವನಿತೆಯರ ತಂಡ ನಂತರ ನಡೆದ ತನ್ನ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಸೋಲುಂಡಿತು ಹಾಗೂ ಬಾಂಗ್ಲಾದೇಶ ವನಿತೆಯರ ವಿರುದ್ಧ ತನ್ನ ನಾಲ್ಕನೇ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದ ಪಾಕಿಸ್ತಾನ ಸೋಲುಂಡು ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಸೋಲನ್ನು ಅನುಭವಿಸಿತ್ತು. ಹೀಗೆ ತನ್ನ ಮೊದಲ ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ಸೋಲನ್ನು ಅನುಭವಿಸಿದ್ದ ಪಾಕಿಸ್ತಾನ ವನಿತೆಯರ ತಂಡ ಇಂದು ( ಮಾರ್ಚ್ 21 ) ನಡೆದ ಟೂರ್ನಿಯಲ್ಲಿನ ತನ್ನ ಐದನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಕಂಡು ಗೆಲುವಿನ ಖಾತೆ ತೆರೆದಿದೆ.

ಈ ಮೂಲಕ ಪಾಕಿಸ್ತಾನ ವನಿತೆಯರ ತಂಡ ಬರೋಬ್ಬರಿ 13 ವರ್ಷಗಳ ನಂತರ ವಿಶ್ವಕಪ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಹೌದು, ಪಾಕಿಸ್ತಾನ ವನಿತೆಯರ ತಂಡ 2009ರಿಂದ ಇಲ್ಲಿಯವರೆಗೂ ನಡೆದ ಯಾವುದೇ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿಯೂ ಕೂಡ ಜಯ ಸಾಧಿಸಿರಲಿಲ್ಲ. ಸದ್ಯ ಪಾಕಿಸ್ತಾನ ವನಿತೆಯರ ಈ ಬಾರಿಯ ವಿಶ್ವಕಪ್ ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲೂ ಸಾಲು ಸಾಲು ಸೋಲು ಕಾಣುವುದರ ಮೂಲಕ ಈ ಬಾರಿಯೂ ಕೂಡ 13 ವರ್ಷಗಳಿಂದ ಇದ್ದ ತನ್ನ ಗೆಲುವಿನ ಕನಸು ಕನಸಾಗಿಯೇ ಉಳಿದುಕೊಳ್ಳಿಲಿದೆಯಾ ಎಂಬ ಅನುಮಾನವನ್ನು ಮೂಡಿಸಿತ್ತು. ಆದರೆ ಇಂದು ( ಮಾರ್ಚ್ 21 ) ನಡೆದ ವೆಸ್ಟ್ ಇಂಡೀಸ್ ವನಿತೆಯರ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ವನಿತೆಯರ ತಂಡ 8 ವಿಕೆಟ್‌ಗಳ ಗೆಲುವನ್ನು ಸಾಧಿಸಿ ತನ್ನ ಗೆಲುವಿನ ಕಾಯುವಿಕೆಗೆ ಪೂರ್ಣ ವಿರಾಮ ಇಟ್ಟಿದೆ. ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್‌ನಲ್ಲಿ ನಡೆದ ವಿಂಡೀಸ್ ವನಿತೆಯರು ಮತ್ತು ಪಾಕ್ ವನಿತೆಯರ ನಡುವಿನ ಈ ಪಂದ್ಯ ಈ ಬಾರಿಯ ವಿಶ್ವಕಪ್ ಟೂರ್ನಿಯ 20ನೇ ಪಂದ್ಯವಾಗಿತ್ತು. ಮಳೆಯ ಕಾರಣದಿಂದಾಗಿ ಈ ಏಕದಿನ ಪಂದ್ಯವನ್ನು 20 ಓವರ್‌ಗಳಿಗೆ ಕಡಿತಗೊಳಿಸಲಾಯಿತು.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ವನಿತೆಯರ ತಂಡ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ವೆಸ್ಟ್ ಇಂಡೀಸ್ ವನಿತೆಯರ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ವನಿತೆಯರ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತು. ಮಳೆಯಿಂದಾಗಿ ಒದ್ದೆಯಾಗಿದ್ದ ಪಿಚ್‌ನಲ್ಲಿ ರನ್ ಗಳಿಸಲು ಪರದಾಡಿದ ವಿಂಡೀಸ್ ಪರ ಡಿಯಾಂಡ್ರಾ ಡಾಟಿನ್ 27 ರನ್, ನಾಯಕಿ ಸ್ಟಾಫನಿ ಟೇಲರ್ 18 ರನ್ ಹಾಗೂ ಆಫಿ ಫ್ಲೆಚರ್ 12 ರನ್ ಗಳಿಸಿದ್ದು ಬಿಟ್ಟರೆ ತಂಡದ ಉಳಿದ ಯಾವುದೇ ಆಟಗಾರ್ತಿಯರೂ ಕೂಡ ಎರಡಂಕೆ ಮುಟ್ಟುವ ಪ್ರಯತ್ನ ಮಾಡಲೇ ಇಲ್ಲ. ಇನ್ನು ವೆಸ್ಟ್ ಇಂಡೀಸ್ ತಂಡ ನೀಡಿದ 90 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ವನಿತೆಯರ ತಂಡ 18.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸುವುದರ ಮೂಲಕ 8 ವಿಕೆಟ್‌ಗಳ ಗೆಲುವನ್ನು ಸಾಧಿಸಿತು. ಪಾಕಿಸ್ತಾನ ತಂಡದ ಪರ ಆರಂಭಿಕ ಆಟಗಾರ್ತಿಯರಾದ ಮುನೀಬಾ ಅಲಿ 37 ರನ್ ಮತ್ತು ಸಿದ್ರಾ ಅಮೀನ್ 8 ರನ್ ಗಳಿಸಿದರೆ ನಾಯಕಿ ಬಿಸ್ಮಾ ಮರೂಫ್ ಅಜೇಯ 20 ರನ್ ಹಾಗೂ ಒಮೈಮಾ ಸೋಹೈಲ್ ಅಜೇಯ 22 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪಾತ್ರ ನಿರ್ವಹಿಸಿದರು. ಈ ಮಹತ್ವದ ಗೆಲುವಿನ ಮೂಲಕ ಪಾಕಿಸ್ತಾನ ವನಿತೆಯರ ತಂಡ ಟೂರ್ನಿಯಲ್ಲಿನ ತನ್ನ ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದೆ.

ಪಾಕಿಸ್ತಾನ ಆಡುವ ಬಳಗ: ಮುನಿಬಾ ಅಲಿ, ಸಿದ್ರಾ ಅಮೀನ್, ಬಿಸಾಮ್ಹ್ ಮಾರೂಫ್ (ನಾಯಕಿ), ಒಮೈಮಾ ಸುಹೇಲ್, ನದಾ ದಾರ್, ಅಯಾ ರಿಜ್, ಫಾತಿಮಾ ಸುನ್ನಾ, ಸಿದ್ರಾ ನವಾಜ್ ( ವಿಕೆಟ್ ಕೀಪರ್ ), ಡಯಾನಾ ಪೇಜ್, ನಶ್ರತ್ ಸನದ್, ಅನಮ್ ಅಮೀನ್

ವೆಸ್ಟ್ ಇಂಡೀಸ್ ಆಡುವ ಬಳಗ: ಡಿಯಾಂಡ್ರಾ ಡಾಟಿನ್, ಹೇಲಿ ಮ್ಯಾಥ್ಯೂಸ್, ಸ್ಟಾಫನಿ ಟೇಲರ್ (ನಾಯಕಿ), ಶೆಮೈನ್ ಕ್ಯಾಂಪ್‌ಬೆಲ್ಲೆ (ವಿಕೆಟ್ ಕೀಪರ್), ಚೆಡಿಯನ್ ನೇಷನ್, ಕಿಸಿಯಾ ನೈಟ್, ಚಿನೆಲ್ಲೆ ಹೆನ್ರಿ, ಅಫಿ ಫ್ಲೆಚರ್, ಆಲಿಯಾ ಅಲೀನ್, ಅನಿಸಾ ಮೊಹಮ್ಮದ್, ಶಕೆರಾ ಸೆಲ್ಮನ್

Story first published: Monday, March 21, 2022, 17:14 [IST]
Other articles published on Mar 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+