ಟೀಂ ಇಂಡಿಯಾಗೆ ಬಹು ಪರಾಕ್ ಎಂದ ಪಿಎಂ ಮೋದಿ
ಮೆಲ್ಬೋರ್ನ್, ಮಾ.19: ಬಾಂಗ್ಲಾದೇಶ ವಿರುದ್ಧ ಸುಲಭ ಜಯ ದಾಖಲಿಸಿದ ಭಾರತ ಸೆಮಿಫೈನಲ್ ತಲುಪಿದೆ. ನಾಯಕ ಧೋನಿ ಅವರು ಸ್ಪೆಷಲ್ ಸೆಂಚುರಿ ಬಾರಿಸಿದ್ದಾರೆ. ಕ್ರೀಡಾಪ್ರೇಮಿ ಭಾರತದ ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಟೀಂ ಇಂಡಿಯಾಕ್ಕೆ ಬಹುಪರಾಕ್ ಹೇಳಿದ್ದಾರೆ.
ಟೀಂ ಇಂಡಿಯಾ ಬೌಲರ್ ಗಳ ಸಾಧನೆ ಕಂಡು ಕ್ರಿಕೆಟ್ ಪಂಡಿತರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸೆಂಚುರಿ ಸಾಧನೆ ಮಾಡಿದ ಮೂರನೇ ಹಾಗೂ ಭಾರತದ ಮೊದಲ ಕ್ರಿಕೆಟ್ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲಿ ಭಾರತ ಆರನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ದಾಖಲೆ ಬರೆದಿದೆ. 1983,1987,1996,2003,2011 ಹಾಗೂ 2015ರಲ್ಲಿ ಟೀಂ ಇಂಡಿಯಾ ಸೆಮಿಸ್ ಪ್ರವೇಶಿಸಿದೆ. [ಶರ್ಮ 100, ಇದು ಪಾಕ್ ದೇವ್ರು ಕೊಟ್ಟ ವರ]
ಹಾಲಿ ಚಾಂಪಿಯನ್ ಭಾರತ ಈ ಬಾರಿ ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನ ತಂಡವನ್ನು ಮಾ.26ರಂದು ಗುರುವಾರ ಸಿಡ್ನಿಯಲ್ಲಿ ಎದುರಿಸಲಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಸೇರಿದಂತೆ ಅನೇಕ ತಾರೆಗಳು ಈ ಪಂದ್ಯ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಸದ್ಯಕ್ಕೆ ಭಾರತಕ್ಕೆ ಬಂದ ಹೊಗಳಿಕೆ ಸಂದೇಶ, ಪಂದ್ಯದ ನಡುವೆ ಸಂಭ್ರಮ, ಸಾಧನೆ, ಮಾಜಿ ಕ್ರಿಕೆಟರ್ಸ್ ಗಳ ಹೊಗಳಿಕೆಗಳ ಸಂಗ್ರಹ ಇಲ್ಲಿದೆ...

ಆರನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ದಾಖಲೆ
ವಿಶ್ವಕಪ್ ಇತಿಹಾಸದಲ್ಲಿ ಭಾರತ ಆರನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ದಾಖಲೆ ಬರೆದಿದೆ. 1983,1987,1996,2003,2011 ಹಾಗೂ 2015ರಲ್ಲಿ ಟೀಂ ಇಂಡಿಯಾ ಸೆಮಿಸ್ ಪ್ರವೇಶಿಸಿದೆ.
ಸಿಂಪಲ್ ಆಗಿ ವಿಷ್ ಮಾಡಿದ ಮೋದಿ
ಸಿಂಪಲ್ ಆಗಿ ವಿಷ್ ಮಾಡಿದ ಮೋದಿ ಸಂದೇಶ ಕೂಡಾ 4.9K ಬಾರಿ ರೀಟ್ವೀಟ್ ಆಗಿದೆ. 5.7K ಬಾರಿ ಫೇವರೀಟ್ ಆಗಿದೆ.
ಇಂಥ ಆಟ ಕ್ರಿಸ್ ಶ್ರೀಕಾಂತ್ ರಿಂದ ಮಾತ್ರ ಸಾಧ್ಯ
ಬಾಂಗ್ಲಾದೇಶಿ ಆಟಗಾರರನ್ನು ನಕಲು ಮಾಡಿದ ಶ್ರೀಕಾಂತ್ ಹಾಗೂ ಹ್ಯಾರಿಸ್
ಟೀಂ ಇಂಡಿಯಾ ಬೌಲರ್ಸ್ ಗೆ ಕೋಚ್ ಯಾರು?
ಟೀಂ ಇಂಡಿಯಾ ಬೌಲರ್ಸ್ ಗೆ ಕೋಚ್ ಯಾರು ಗೊತ್ತಾ? ಆಶೀಶ್ ನೆಹ್ರಾ !
ಚೆಸ್ಟ್ ಬಂಪ್ ಹೊಡೆಯುವುದು ಹೇಗೆ?
ಚೆಸ್ಟ್ ಬಂಪ್ ಹೊಡೆಯುವುದು ಹೇಗೆ? ಬಾಂಗ್ಲಾದೇಶಿಗಳಿಗೆ ಪಾಠ ಇಲ್ಲಿದೆ
ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಟ್ವೀಟ್
ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
ಮಾ.26ರಂದು ಗುರುವಾರ ಸಿಡ್ನಿಯಲ್ಲಿ
ಮಾ.26ರಂದು ಗುರುವಾರ ಸಿಡ್ನಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ನಿಮಗಾಗಿ ಕಾದಿರುತ್ತಾರೆ.
ಪಂದ್ಯದಲ್ಲಿ ಬರೀ ಮೋಸ ಎಂದ ಬಾಂಗ್ಲಾದೇಶಿ
ಪಂದ್ಯದಲ್ಲಿ ಬರೀ ಮೋಸ ಎಂದ ಬಾಂಗ್ಲಾದೇಶಿ
ಮೋಸದಾಟ ಏನಿಲ್ಲ ದಿಗ್ಗಜರ ಉತ್ತರ
ಮೋಸದಾಟ ಏನಿಲ್ಲ ದಿಗ್ಗಜ ಬ್ರಿಯಾನ್ ಲಾರಾರಿಂದ ಉತ್ತರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications