Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ : ಇಂಗ್ಲೆಂಡ್ ಹೊಸಕಿ ಹಾಕಿ ಕಿವೀಸ್ ವಿಜಯೋತ್ಸವ

ವೆಲ್ಲಿಂಗ್ಟನ್, ಫೆ.20: ಸಾಂಪ್ರದಾಯಿಕ ಎದುರಾಳಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲೇ ಸೋಲು ಕಂಡ ಇಂಗ್ಲೆಂಡ್ ತಂಡ, ವಿಶ್ವಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲೂ ಹೀನಾಯ ಸೋಲು ಕಂಡಿದೆ.

ನ್ಯೂಜಿಲೆಂಡ್ ತಂಡದ ಬೌಲರ್ ಗಳು ಆರಂಭದಿಂದಲೇ ಆಂಗ್ಲರ ರನ್ ವೇಗಕ್ಕೆ ಬ್ರೇಕ್ ಹಾಕಿದರು. 33.2 ಓವರ್ಸ್ ನಲ್ಲಿ 123ರನ್ನಿಗೆ ಆಲೌಟ್ ಆಗಿದೆ. ಟಿಮ್ ಸೌಥಿ 7 ವಿಕೆಟ್ ಕಿತ್ತು ಆಂಗ್ಲರ ಬ್ಯಾಟಿಂಗ್ ಬೆನ್ನಲುಬು ಮುರಿದರು.ಕೇವಲ 12.2 ಓವರ್ ಗಳಲ್ಲಿ ನ್ಯೂಜಿಲೆಂಡ್ ಟಾರ್ಗೆಟ್ ದಾಟಿ ವಿಜಯೋತ್ಸವ ಆಚರಿಸಿತು.

| ವಿಶ್ವಕಪ್ ವಿಶೇಷ ಪುಟ

ನ್ಯೂಜಿಲೆಂಡ್ ಇನ್ನಿಂಗ್ಸ್: 124ರನ್ ಗಳ ಗುರಿ ಬೆನ್ನತ್ತಿದ ಕಿವೀಸ್ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ನಾಯಕ ಬ್ರೆಂಡನ್ ಮೆಕಲಮ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. [ವಿಶ್ವಕಪ್ ದಾಖಲೆ: ಮೆಕಲಮ್ ರಿಂದ ಅತಿ ವೇಗದ 50]

ನಂತರ 25 ಎಸೆತಗಳಲ್ಲಿ 77 ರನ್ (8 ಬೌಂಡರಿ, 7 ಸಿಕ್ಸರ್) ಚೆಚ್ಚಿ ವೋಕ್ಸ್ ಬೌಲಿಂಗ್ ನಲ್ಲಿ ಫುಲ್ ಟೌಸ್ ಎಸೆತವನ್ನು ಬಾರಿಸಲು ಹೋಗಿ ಬೋಲ್ಡ್ ಆದರು. ಕಿವೀಸ್ ಆಟಗಾರರು 9 ಓವರ್ ಗಳಲ್ಲಿ 112/1 ಸ್ಕೋರ್ ಮಾಡಿದ್ದು 15 ರನ್ ಸರಾಸರಿ ವೇಗದಲ್ಲಿ ರನ್ ಚೇಸ್ ಮಾಡಿ ಇಂಗ್ಲೆಂಡ್ ಗೆ ಭಯ ಹುಟ್ಟಿಸಿದರು. ನಂತರ ಗಪ್ಟಿಲ್ 22 ರನ್ ಗಳಿಸಿ ವೋಕ್ಸ್ ಗೆ ಬೋಲ್ಡ್ ಆದರೂ 12.2 ಓವರ್ ಗಳಲ್ಲಿ 125 ರನ್ ಗಳಿಸಿ ಭರ್ಜರಿ ಜಯ ದಾಖಲಿಸಿತು. [ವಿಶ್ವದಾಖಲೆ ಸಮಕ್ಕೆ ನಿಂತ ಕಿವೀಸ್ ವೇಗಿ ಟಿಮ್ ಸೌಥಿ]

ಆಸೀಸ್ ವಿರುದ್ಧ 111 ರನ್ ಸೋಲು ಕಂಡ ಇಂಗ್ಲೆಂಡ್ ಗೆ 'ನೆಲ್ಸನ್' ಸಂಖ್ಯೆ ಕಾಡುತ್ತಿದೆ. ಪುಣ್ಯಕ್ಕೆ ಇಂಗ್ಲೆಂಡ್ ಆಡುತ್ತಿರುವ ಮೈದಾನ ನೆಲ್ಸನ್ ಬದಲಿಗೆ ವೆಲ್ಲಿಂಗ್ಟನ್ ಆಗಿದೆ. ಮೊದಲು ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ 25 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡ್ 102ರನ್ ಮಾಡಿತ್ತು.ಆದರೆ, ನಂತರ ಯಾವುದೇ ಜೊತೆಯಾಟ ಕಾಣಲಿಲ್ಲ [ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ]

World Cup 2015 Match 9: England Vs New Zealand in Wellington

ಉತ್ತಮ ಲಯದಲ್ಲಿರುವ ಇಯಾನ್ ಬೆಲ್ 8 ರನ್ ಹಾಗೂ ಮೋಯಿನ್ ಅಲಿ 20 ರನ್ ಗಳಿಸಿ ಔಟಾದರೆ, ಬ್ಯಾಲೆನ್ಸ್ 20 ರನ್ನಿಗೆ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಮಾರ್ಗನ್ ಹಾಗೂ ಜೋ ರೂಟ್ ಇನ್ನಿಂಗ್ಸ್ ಮೊತ್ತ ಹೆಚ್ಚಿಸುವ ಹೊಣೆ ಹೊತ್ತಿದ್ದರು. ಆರಂಭಿಕ ಸ್ಪೆಲ್ ನಲ್ಲಿ 5 ಓವರ್ ಗಳಲ್ಲಿ 23ಕ್ಕೆ 2 ಪಡೆದು ಇಂಗ್ಲೆಂಡ್ ಗೆ ಮಾರಕವಾಗಿದ್ದ ಟಿಮ್ ಸೌಥಿ ಅಂತಿಮವಾಗಿ 33/7 ಕಿತ್ತು ಅದ್ಭುತ ಪ್ರದರ್ಶನ ನೀಡಿದರು. [ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾಕ್ಕೆ ಸೋಲು]

ಇಂಗ್ಲೆಂಡ್: ಇಯಾನ್ ಬೆಲ್, ಮೊಯೀನ್ ಅಲಿ, ಗ್ಯಾರಿ ಬ್ಯಾಲೆನ್ಸ್,ಜೋ ರೂಟ್, ಇಯಾನ್ ಮಾರ್ಗನ್ (ನಾಯಕ), ಜೇಮ್ಸ್ ಟೇಲರ್,ಜೋಸ್ ಬಟ್ಲರ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಸ್ಟುವರ್ಟ್ ಬ್ರಾಡ್, ಸ್ಟೀವನ್ ಫಿನ್, ಜೇಮ್ಸ್ ಆಂಡರ್ಸನ್.

ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಬ್ರೆಂಡನ್ ಮೆಕಲಮ್ (ನಾಯಕ, ವಿಕೆಟ್ ಕೀಪರ್), ಕೇನ್ ವಿಲಿಯಂಸನ್. ರಾಸ್ ಟೇಲರ್, ಕೋರೆ ಆಂಡರ್ಸನ್, ಟ್ರೆಂಟ್ ಬೌಲ್ಟ್, ಗ್ರಾಂಟ್ ಇಲಿಯಟ್, ಲೂಕ್ ರಾಂಚಿ (ವಿಕೆಟ್ ಕೀಪರ್) ಟಿಮ್ ಸೌಥಿ, ಆಡಂ ಮಿಲ್, ಡಾನ್ ವೆಟ್ಟೋರಿ,

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+