ವಿಶ್ವಕಪ್: ಅಫ್ಘಾನಿಸ್ತಾನ ವಿರುದ್ಧ ಬ್ಯಾಟಿಂಗ್ ಆಯ್ದ ವೆಸ್ಟ್ ಇಂಡೀಸ್

ಲಂಡನ್, ಜುಲೈ 4: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪಾಲಿಗೆ ಈ ಬಾರಿಯ ವಿಶ್ವಕಪ್ ಅತೀ ನಿರಾಶೆಯ ಟೂರ್ನಿ ಅನ್ನಿಸಿದೆ. 2015ರ ವಿಶ್ವಕಪ್‌ನಲ್ಲಾದರೂ ಅಫ್ಘಾನ್ ತಂಡ 6ರಲ್ಲಿ ಒಂದು ಪಂದ್ಯವನ್ನಾದರೂ ಗೆದ್ದಿತ್ತು ಆದರೆ ಈ ಸಾರಿ ಈಗಾಗಲೇ 8 ಪಂದ್ಯಗಳನ್ನಾಡಿದ್ದರೂ ಒಂದರಲ್ಲೂ ಜಯ ಗಳಿಸಿಲ್ಲ. ಅಂದ್ಹಾಗೆ ಈ ಮೊದಲು ವಿಶ್ವಕಪ್‌ನಲ್ಲಿ ವಿಂಡೀಸ್-ಅಫ್ಘಾನ್ ಮುಖಾಮುಖಿಯಾಗಿದ್ದಿಲ್ಲ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಗುರುವಾರ (ಜುಲೈ 4) ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಪಂದ್ಯವನ್ನಾಡುತ್ತಿವೆ. ಎರಡೂ ತಂಡಗಳಿಗೂ ಇದು ಟೂರ್ನಿಯ ಕಡೇ ಪಂದ್ಯ. ಅದರಲ್ಲೂ ಅಫ್ಘಾನಿಸ್ತಾನ ತಂಡದ ಪಾಲಿಗೆ ಎಲ್ಲಾ ಪಂದ್ಯಗಳನ್ನು ಸೋತ ತಂಡವೆಂಬ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಇರುವ ಕೊನೇಯ ಅವಕಾಶವಿದು.
ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್, ಜುಲೈ 4, Live ಸ್ಕೋರ್‌ಕಾರ್ಡ್
ಹಾಗಂತ ಎರಡು ಸಾರಿಯ ವಿಶ್ವಕಪ್ ಚಾಂಪಿಯನ್ ವಿಂಡೀಸ್ ಪಾಲಿಗೂ ಕೂಡ ಈ ವಿಶ್ವಕಪ್ ಅದೃಷ್ಟ ತಂದಿಲ್ಲ. ಜೇಸನ್ ಹೋಲ್ಡರ್ ಬಳಗ ಕೂಡ 8ರಲ್ಲಿ 1 ಪಂದ್ಯ ಗೆದ್ದು 6 ಪಂದ್ಯಗಳನ್ನು ಸೋತಿದೆ. ಇನ್ನೊಂದು ಪಂದ್ಯವನ್ನು ರದ್ದಾಗಿಸಿಕೊಂಡು ಸೆಮಿಫೈನಲ್ ಅವಕಾಶವನ್ನು ಕಳೆದುಕೊಂಡಾಗಿದೆ. ಹೀಗಾಗಿ ಇಂದಿನ ಗೆಲುವು ಪ್ರತಿಷ್ಠೆಯದ್ದಾಗಿದ್ದು, ಗೆಲ್ಲೋರು ಯಾರೆಂದು ಕಾದು ನೋಡಬೇಕಿದೆ.
ವೆಸ್ಟ್ ಇಂಡೀಸ್ ತಂಡ: ಕ್ರಿಸ್ ಗೇಲ್, ಸುನಿಲ್ ಆ್ಯಂಬ್ರಿಸ್ / ಡ್ಯಾರೆನ್ ಬ್ರಾವೋ, ಶೈ ಹೋಪ್ (ವಿಕೆ), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೈಯರ್, ಕಾರ್ಲೋಸ್ ಬ್ರಾತ್‌ವೈಟ್, ಜೇಸನ್ ಹೋಲ್ಡರ್ (ಸಿ), ಫ್ಯಾಬಿಯನ್ ಅಲೆನ್, ಓಶೇನ್ ಥಾಮಸ್, ಶೆಲ್ಡನ್ ಕಾಟ್ರೆಲ್, ಆಶ್ಲೇ ನರ್ಸ್ / ಶಾನನ್ ಗೇಬ್ರಿಯಲ್.
ಅಫ್ಘಾನಿಸ್ತಾನ ತಂಡ: ಗುಲ್ಬಾದೀನ್ ನೈಬ್ (ಸಿ), ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ಅಸ್ಗರ್ ಅಫಘಾನ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರನ್, ಸಮಿಯುಲ್ಲಾ ಶಿನ್ವಾರಿ, ಇಕ್ರಮ್ ಅಲಿ ಖಿಲ್ (ವಾರ), ರಶೀದ್ ಖಾನ್, ದಾವ್ಲತ್ ಝದ್ರನ್, ಮುಜೀಬ್ ಉರ್ ರಹಮಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications