ವಿಶ್ವಕಪ್: ಆಂಡ್ರೆ ರಸೆಲ್ ಫಿಟ್ನೆಸ್ ಬಗ್ಗೆ ಮಾತನಾಡಿದ ನಾಯಕ ಹೋಲ್ಡರ್

ನಾಟಿಂಗ್‌ಹ್ಯಾಮ್, ಜೂನ್ 06: ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಗುರುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ವಿಂಡೀಸ್ ಪಡೆಯ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಸಂಪೂರ್ಣ ಫಿಟ್ ಆಗುತ್ತಾರೆಂಬ ಆಶಯ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಏಕಾಂಗಿಯಾಗಿ ಪಂದ್ಯ ಗೆದ್ದುಕೊಡಬಲ್ಲ ಸಾಮರ್ಥ್ಯ ಹೊಂದಿರುವ ದೈತ್ಯ ಆಲ್‌ರೌಂಡರ್ ರಸೆಲ್, ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಗಾಯದ ಸಮಸ್ಯೆ ಎದುರಿಸಿದ್ದರು. ಅಂದಹಾಗೆ ಹಲವು ವರ್ಷಗಳಿಂದ ಮಂಡಿ ನೋವಿನ ಸಮಸ್ಯೆ ಎದುರಿಸಿರುವ ರಸೆಲ್, ಪಾಕ್ ವಿರುದ್ಧದ ಪಂದ್ಯದಲ್ಲೂ ಅದೇ ಸಮಸ್ಯೆಗೆ ಗುರಿಯಾಗಿದ್ದಾರೆ.
ಇನ್ನು ಪಂದ್ಯಕ್ಕೆ ಮುನ್ನಾದಿನವಾದ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋಲ್ಡರ್, ಕ್ರಿಸ್ ಗೇಲ್ ಸಂಪೂರ್ಣ ಫಿಟ್ನೆಸ್ ಕಂಡುಕೊಂಡಿದ್ದು, ರಸೆಲ್ ಇನ್ನೂ ಚೇತರಿಸುತ್ತಿದ್ದಾರೆ ಎಂದು ಹೇಳಿದರು.
"ಕ್ರಿಸ್ ಹಾಗೂ ರಸೆಲ್ ಇಬ್ಬರೂ ಬಹಳಷ್ಟು ಕ್ರಿಕೆಟ್ ಆಡಿದ್ದಾರೆ. ಹೀಗಾಗಿ ಅವರಮೇಲೆ ಭರವಸೆ ಇಡಬೇಕಿದೆ. ಕ್ರಿಸ್ ಕಳೆದ ಎರಡು ದಿನಗಳಿಂದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಪಂದ್ಯ ಆಡಲು ಅವರು ಸಜ್ಜಾಗಿದ್ದಾರೆ. ಆಂಡ್ರೆ ಕೂಡ ಅಭ್ಯಾಸಕ್ಕೆ ಮರಳುವ ಪ್ರಯತ್ನ ನಡೆಸಿದ್ದು, ಪಂದ್ಯದ ಹೊತ್ತಿಗೆ ಸಂಪೂರ್ಣ ಫಿಟ್ ಆಗುತ್ತಾರೆಂಬ ಧೃಡ ಆಶಯ ಹೊಂದಿದ್ದೇವೆ,'' ಎಂದು ಹೋಲ್ಡರ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಅಪಾಯಕಾರಿ ಪಾಕಿಸ್ತಾನ ತಂಡವನ್ನು 105ಕ್ಕೆ ಆಲ್‌ಔಟ್ ಮಾಡಿ ಬಳಿಕ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸ ಕಂಡುಕೊಂಡಿದೆ. ಮತ್ತೊಂದೆಡೆ ಅಫಘಾನಿಸ್ತಾನ ವಿರುದ್ಧ ಗೆದ್ದು ಶುಭಾರಂಭ ಮಾಡಿರುವ ಆಸ್ಟ್ರೇಲಿಯಾ ತಂಡ ವಿಂಡೀಸ್ ವಿರುದ್ಧವೂ ಗೆಲುವಿನ ಲಯ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications