ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಪಾಕಿಸ್ತಾನ ವಿರುದ್ಧ ತಿಣುಕಾಡಿ ಗೆದ್ದ ಆಸ್ಟ್ರೇಲಿಯಾ

World Cup 2019 Live: Australia vs Pakistan, Match-17

ಟೌಂನ್ಟನ್‌, ಜೂನ್‌ 12: ಟೀಮ್‌ ಇಂಡಿಯಾ ವಿರುದ್ಧ ಸೋತು ಸುಣ್ಣವಾಗಿದ್ದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧ ಕೊನೆ ಕೊನೆಗೆ ತಿಣುಕಾಡಿದರೂ ಅಂತಿಮವಾಗಿ 41 ರನ್‌ಗಳ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ವಿಶ್ವಕಪ್‌: ಆಸ್ಟ್ರೇಲಿಯಾ vs ಪಾಕಿಸ್ತಾನ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

1
43660

ಇಲ್ಲಿನ ದಿ ಕೂಪರ್‌ ಅಸೋಸಿಯೇಷನ್‌ ಕೌಂಟಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಬುಧವಾರ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯ 49 ಓವರ್‌ಗಳಲ್ಲಿ ಆಲ್‌ಔಟ್‌ ಆದರೂ 307 ರನ್‌ಗಳ ಬೃಹತ್‌ ಮೊತ್ತವನ್ನೇ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 44.1 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಇದಕ್ಕೂ ಮುನ್ನ ಮೊದಲ ವಿಕೆಟ್‌ಗೆ 146 ರನ್‌ ಜೊತೆಯಾಟದೊಂದಿಗೆ ಭರ್ಜರಿ ಆರಂಭ ಪಡೆದಿದ್ದ ಆಸ್ಟ್ರೇಲಿಯಾ, ಇನಿಂಗ್ಸ್‌ ಅಂತ್ಯದಲ್ಲಿ ಲಯ ಕಾಯ್ದುಕೊಳ್ಳಲು ವಿಫಲವಾಗಿ 307 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌, 111 ಎಸೆತಗಳಲ್ಲಿ 107 ರನ್‌ಗಳ ಶತಕ ದಾಖಲಿಸಿದ ಸಂದರ್ಭದಲ್ಲಿ ಆಸೀಸ್‌ 350+ ರನ್‌ ಗಳಿಸುವ ಸೂಚನೆ ನೀಡಿತ್ತು.

ಆದರೆ, ಈ ಸಂದರ್ಭದಲ್ಲಿ ಬೌಲಿಂಗ್‌ ಬಿಗಿ ಪಡಿಸಿದ ಪಾಕ್‌ ಕಾಂಗರೂ ಪಡೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಪಾಕ್‌ ಪರ ವೇಗಿ ಮೊಹಮ್ಮದ್‌ ಆಮಿರ್‌ 30ಕ್ಕೆ 5 ವಿಕೆಟ್‌ ಉರುಳಿಸಿದರೆ, ಮತ್ತೊಬ್ಬ ವೇಗಿ ಶಹೀನ್‌ ಶಾ ಅಫ್ರಿದಿ 70ಕ್ಕೆ 2 ವಿಕೆಟ್‌ ಪಡೆದು ಉತ್ತಮ ಸಾಥ್‌ ನೀಡಿದರು.

ಸ್ಕೋರ್‌ ವಿವರ

ಆಸ್ಟ್ರೇಲಿಯಾ: 49 ಓವರ್‌ಗಳಲ್ಲಿ 307/10 (ಆರೊನ್‌ ಫಿಂಚ್‌ 82, ಡೇವಿಡ್‌ ವಾರ್ನರ್‌ 107; ಮೊಹಮ್ಮದ್‌ ಆಮಿರ್‌ 30ಕ್ಕೆ 5, ಶಹೀನ್‌ ಶಾ 70ಕ್ಕೆ 2).

ಪಾಕಿಸ್ತಾನ: 44.1 ಓವರ್‌ಗಳಲ್ಲಿ 264/7 (ಇಮಾಮ್‌ ಉಲ್‌ ಹಕ್‌ 53, ಬಾಬರ್‌ ಅಝಾಮ್‌ 30, ಮೊಹಮ್ಮದ್‌ ಹಫೀಝ್‌ 46, ಸರ್ಫರಾಝ್‌ ಅಹ್ಮದ್‌ ಔಟಾಗದೆ 40, ಹಸನ್‌ ಅಲಿ 32, ವಹಾಬ್‌ ರಿಯಾಝ್‌ 45; ಪ್ಯಾಟ್‌ ಕಮಿನ್ಸ್‌ 33ಕ್ಕೆ 3, ಕೇನ್‌ ರಿಚರ್ಡ್ಸನ್‌ 62ಕ್ಕೆ 2).

ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?

ತಂಡಗಳ ವಿವರ

ಆಸ್ಟ್ರೇಲಿಯಾ (ಪ್ಲೇಯಿಂಗ್‌ 11): ಡೇವಿಡ್‌ ವಾರ್ನರ್, ಆರೊನ್‌ ಫಿಂಚ್‌ (ನಾಯಕ), ಶಾನ್‌ ಮಾರ್ಷ್‌, ಸ್ಟೀವ್‌ ಸ್ಮಿತ್‌, ಉಸ್ಮಾನ್‌ ಖವಾಜ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್‌), ನೇಥನ್‌ ಕೌಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಕೇನ್‌ ರಿಚರ್ಡ್ಸನ್‌.

ಪಾಕಿಸ್ತಾನ (ಪ್ಲೇಯಿಂಗ್‌ 11): ಇಮಾಮ್‌ ಉಲ್‌ ಹಕ್‌, ಫಖರ್‌ ಝಮಾನ್‌, ಬಾಬರ್‌ ಅಝಾಮ್‌, ಮೊಹಮ್ಮದ್‌ ಹಫೀಝ್‌, ಸರ್ಫರಾಝ್‌ ಅಹ್ಮದ್‌ (ನಾಯಕ/ವಿಕೆಟ್‌ಕೀಪರ್‌), ಶೊಯೇಬ್‌ ಮಲಿಕ್‌, ಆಸಿಫ್‌ ಅಲಿ, ವಹಾಬ್‌ ರಿಯಾಝ್‌, ಹಸನ್‌ ಅಲಿ, ಶಹೀನ್‌ ಶಾ ಅಫ್ರಿದಿ, ಮೊಹಮ್ಮದ್‌ ಆಮಿರ್‌.

{headtohead_cricket_1_5}

Story first published: Wednesday, June 12, 2019, 22:57 [IST]
Other articles published on Jun 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X