ವಿಶ್ವಕಪ್: ನ್ಯೂಜಿಲೆಂಡ್‌ಗೆ ಮೊದಲ ಸೋಲುಣಿಸಿದ ಪಾಕಿಸ್ತಾನ

ಬರ್ಮಿಂಗ್‌ಹ್ಯಾಮ್, ಜೂನ್ 26: ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಹಂತಕ್ಕೇರಲು ತನ್ನ ಪಾಲಿನ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದ ಸ್ಥಿತಿಯಲ್ಲಿರುವ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದ್ದ ನ್ಯೂಜಿಲೆಂಡ್ ತಂಡಕ್ಕೆ 6 ವಿಕೆಟ್‌ಗಳ ಸೋಲುಣಿಸಿದೆ.
ವಿಶ್ವಕಪ್: ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಪಂದ್ಯದ ಸ್ಖೋರ್ ಕಾರ್ಡ್
ಇಲ್ಲಿನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಬುಧವಾರ ಪಾಕ್ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯವು ಮಳೆಯ ಕಾರಣ ಒಂದು ಗಂಟೆ ತಡವಾಗಿ ಶುರುವಾಯಿತು. ಟಾಸ್ ಗೆದ್ದು ಬ್ಯಾಟ್ ಮಾಡಿದ ಕಿವೀಸ್ 50 ಓವರ್‌ಗಳಲ್ಲಿ 237/6 ರನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಪಾಕ್, 49.1 ಓವರ್‌ಗಳಲ್ಲಿ 4 ವಿಕೆಟ್‌ಗೆ 241/4 ರನ್ ದಾಖಲಿಸಿ ಭರ್ಜರಿ ಜಯ ದಾಖಲಿಸಿತು.
ಇದರೊಂದಿಗೆ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೇರಲು ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಣ ಪೈಪೋಟಿ ರೋಚಕ ಘಟ್ಟಕ್ಕೆ ತಲುಪಿದೆ. ಮೂರೂ ತಂಡಗಳು ತಮ್ಮ ಪಾಲಿನ ಉಳಿದೆಲ್ಲಾ ಪಂದ್ಯಗಳಲ್ಲಿ ಮಾಡು ಇಲ್ಲವೆ ಮಡಿ ಹೋರಾಟಕ್ಕಿಳಿಯಲಿವೆ.
ಬಾಬರ್ ಆಝಮ್ ಅದ್ಭುತ ಶತಕ
ಪಾಕ್ ಗೆಲುವಿನ ರೂವಾರಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಬಾಬರ್ ಆಝಮ್, ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದ ಆಝಮ್, 127 ಎಸೆತಗಳಲ್ಲಿ 11 ಫೋರ್‌ಗಳನ್ನು ಒಳಗೊಂಡ ಅಜೇಯ 101 ರನ್‌ಗಳನ್ನು ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಗೌರವ ಪಡೆದರು. ಅನುಭವಿ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಝ್ 32 ರನ್‌ಗಳ ಕಾಣಿಕೆ ನೀಡಿದರೆ, ಬಳಿಕ ಬಂದ ಎಡಗೈ ಬ್ಯಾಟ್ಸ್‌ಮನ್ ಹ್ಯಾರಿಸ್ ಸೊಹೇಲ್ 5 ಫೋರ್ ಮತ್ತು 2 ಸಿಕ್ಸರ್ ಒಳಗೊಂಡ 76 ಎಸೆತಗಳಲ್ಲಿ 68 ರನ್‌ಗಳನ್ನು ದಾಖಲಿಸಿದರು.
ಇದಕ್ಕೂ ಮುನ್ನ ಒಂದು ಹಂತದಲ್ಲಿ ನ್ಯೂಜಿಲೆಂಡ್ 83ಕ್ಕೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಆಲ್‌ಔಟ್ ಆಗುವ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ 6ನೇ ವಿಕೆಟ್‌ಗೆ ಜೊತೆಯಾದ ಜಿಮ್ಮಿ ನೀಶಮ್ ಮತ್ತು ಕಾಲಿನ್ ಡಿ'ಗ್ರ್ಯಾಂಡ್ ಹೋಮ್ 128 ಎಸೆತಗಳಲ್ಲಿ 132 ರನ್‌ಗಳ ಅದ್ಭುತ ಜೊತೆಯಾಟದ ಮೂಲಕ ತಂಡವನ್ನು ಅಪಾಯದಿಂದ ಹೊರಗೆಳೆದರು.
ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಬದುಕಿನ ಶ್ರೇಷ್ಠ ಇನಿಂಗ್ಸ್ ಆಡಿದ ಆಲ್‌ರೌಂಡರ್ ನೀಶಮ್, 112 ಎಸೆತಗಳಲ್ಲಿ 5 ಫೋರ್ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ 97 ರನ್‌ಗಳನ್ನು ಗಳಿಸಿ ಔಟಾಗದೆ ಉಳಿಯುವ ಮೂಲಕ ತಂಡವನ್ನು 200ರ ಗಡಿ ದಾಟಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಗ್ರ್ಯಾಂಡ್‌ಹೋಮ್, 71 ಎಸೆತಗಳಲ್ಲಿ 64 ರನ್‌ಗಳ ಕಾಣಿಕೆ ನಿಡಿದರು.
ಪಾಕ್ ಪರ ವೇಗದ ಬೌಲರ್‌ಗಳಾದ ಶಹೀನ್ ಶಾ ಅಫ್ರಿದಿ (28ಕ್ಕೆ 3) ಮತ್ತು ಮೊಹಮ್ಮದ್ ಆಮಿರ್ (67ಕ್ಕೆ 1) ಶದಾಬ್ ಖಾನ್ ಆರಂಭಿಕ ವಿಕೆಟ್‌ಗಳನ್ನು ಪಡೆದು ಕಿವೀಸ್ ಪಡೆಯ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 237/6 (ಕೇನ್ ವಿಲಿಯಮ್ಸನ್ 41, ಜಿಮ್ಮಿ ನೀಶಮ್ ಔಟಾಗದೆ 97, ಕಾಲಿನ್ ಡಿ'ಗ್ರ್ಯಾಂಡ್‌ಹೋಮ್ 61; ಶಹೀನ್ ಶಾ ಅಫ್ರಿದಿ 28ಕ್ಕೆ 3).
ಪಾಕಿಸ್ತಾನ: 49.1 ಓವರ್‌ಗಳಲ್ಲಿ 241/4 (ಬಾಬರ್ ಆಝಮ್ ಅಜೇಯ 101, ಮೊಹಮ್ಮದ್ ಹಫೀಝ್ 32, ಹ್ಯಾರಿಸ್ ಸೊಹೇಲ್ 68; ಕೇನ್ ವಿಲಿಯಮ್ಸನ್ 39ಕ್ಕೆ 1, ಟ್ರೆಂಟ್ ಬೌಲ್ಟ್ 48ಕ್ಕೆ 1).
ತಂಡಗಳ ವಿವರ
ಪಾಕಿಸ್ತಾನ (ಪ್ಲೇಯಿಂಗ್ 11): ಸರ್ಫರಾಝ್ ಅಹ್ಮದ್ (ನಾಯಕ/ವಿಕೆಟ್‌ಕೀಪರ್), ಇಮಾಮ್ ಉಲ್ ಹಕ್, ಫಖರ್ ಝಮಾನ್, ಬಾಬರ್ ಆಝಮ್, ಮೊಹಮ್ಮದ್ ಹಫೀಝ್, ಹ್ಯಾರಿಸ್ ಸೊಹೇಲ್, ಇಮಾದ್ ವಾಸಿಂ, ಶದಾಬ್ ಖಾನ್, ವಹಾಬ್ ರಿಯಾಝ್, ಮೊಹಮ್ಮದ್ ಆಮಿರ್, ಶಹೀನ್ ಶಾ ಅಫ್ರಿದಿ.
ನ್ಯೂಜಿಲೆಂಡ್ (ಪ್ಲೇಯಿಂಗ್ 11): ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ರಾಸ್ ಟೇಲರ್, ಟಾಮ್ ಲೇಥಮ್, ಜಿಮ್ಮಿ ನೀಶಮ್, ಕಾಲಿನ್ ಡಿ'ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್.
{headtohead_cricket_5_4}
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications