Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ಕ್ರಿಸ್‌ ಗೇಲ್‌ಗೆ ಗೆಲುವಿನ ವಿದಾಯ ಕೊಟ್ಟ ವೆಸ್ಟ್‌ ಇಂಡೀಸ್‌

World Cup 2019 Live: West Indies vs Afghanistan, Match-42

ಲೀಡ್ಸ್‌, ಜುಲೈ 04: ನಿವೃತ್ತಿ ಹೊಸ್ತಿಲಲ್ಲಿರುವ ಯೂನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌ಗೆ ಪ್ರಸಕ್ತ ವಿಶ್ವಕಪ್‌ ಟೂರ್ನಿ ಅವರ ವೃತ್ತಿ ಬದುಕಿನ ಕೊನೆಯ ವಿಶ್ವಕಪ್‌ ಆಗಿದೆ. ಅಂತೆಯೇ ಮಿಂಚಿನ ಆಟ ಪ್ರದರ್ಶಿಸಿದ ವೆಸ್ಟ್‌ ಇಂಡೀಸ್‌ ತಂಡ ಗೇಲ್‌ ವೃತ್ತಿ ಬದುಕಿನ ಕೊನೆಯ ವಿಶ್ವಕಪ್‌ ಪಂದ್ಯದಲ್ಲಿ ಅಫಘಾನಿಸ್ತಾನ ತಂಡವನ್ನು 23 ರನ್‌ಗಳಿಂದ ಮಣಿಸಿ ಸಿಕ್ಸ್‌ ಮಷೀನ್‌ ಗೇಲ್‌ಗೆ ವಿಶ್ವಕಪ್‌ ಅಂಗಣದಲ್ಲಿ ಗೆಲುವಿನ ವಿದಾಯ ನೀಡಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

1
43685

ಇಲ್ಲಿನ ಹೆಡಿಂಗ್ಲೆ ಓವಲ್‌ ಕ್ರೀಡಾಂಗಣದಲ್ಲಿ ಗುರುವಾರ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತನ್ನ ಪಾಲಿನ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 311 ರನ್‌ಗಳನ್ನು ಚೆಚ್ಚಿತು. ವೆಸ್ಟ್‌ ಇಂಡೀಸ್‌ ಪರ ಎವಿನ್‌ ಲೂಯಿಸ್‌ (58), ಶೇಯ್‌ ಹೋಪ್‌ (77) ಮತ್ತು ನಿಕೋಲಸ್‌ ಪೂರನ್‌ (58) ಅರ್ಧಶತಕ ದಾಖಲಿಸಿ ತಂಡಕ್ಕೆ ಬೃಹತ್‌ ಮೊತ್ತ ತಂದುಕೊಟ್ಟರು.

ಬಳಿಕ ಗುರಿ ಬೆನ್ನತ್ತಿದ ಅಫಘಾನಿಸ್ತಾನ ತಂಡ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ 50 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 288 ರನ್‌ಗಳನ್ನು ದಾಖಲಿಸಿ ಸೋಲಿಗೆ ಶರಣಾಯಿತು. ಈ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಅಫಘಾನಿಸ್ತಾನ ಒಂದು ಪಂದ್ಯವನ್ನೂ ಗೆಲ್ಲದ ಏಕಮಾತ್ರ ತಂಡವಾಗಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.

ಅಫಘಾನಿಸ್ತಾನ ಪರ ರೆಹಮತ್‌ ಶಾ (62), ಇಕ್ರಮ್‌ ಅಲಿ ಖಿಲಿ (86), ಅಸ್ಗರ್‌ ಅಫ್ಘಾನ್‌ (40) ಭರ್ಜರಿ ಬ್ಯಾಟಿಂಗ್‌ ನಡೆಸಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ನಡುಕ ಹುಟ್ಟಿಸಿದ್ದರು. ಕಾರ್ಲೋಸ್‌ ಬ್ರಾತ್‌ವೇಟ್‌ (63ಕ್ಕೆ 4) ಮತ್ತು ಕೆಮಾರ್‌ ರೋಚ್‌ (37ಕ್ಕೆ 3) ಮಾರಕ ದಾಳಿ ಸಂಘಟಿಸಿ ಅಫಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು.

ಸಂಕ್ಷಿಪ್ತ ಸ್ಕೋರ್‌

ವೆಸ್ಟ್‌ ಇಂಡೀಸ್‌: 50 ಓವರ್‌ಗಳಲ್ಲಿ 311/6 (ಎವಿನ್‌ ಲೂಯಿಸ್‌ 58, ಶೇಯ್‌ ಹೋಪ್‌ 77, ನಿಕೋಲಸ್‌ ಪೂರನ್‌ 58; ದವಲತ್‌ ಝದ್ರಾನ್‌ 73ಕ್ಕೆ 2).

ಅಫಘಾನಿಸ್ತಾನ: 50 ಓವರ್‌ಗಳಲ್ಲಿ 288/10 (ರೆಹಮತ್‌ ಶಾ 62, ಇಕ್ರಮ್‌ ಅಲಿ ಖಿಲಿ 86, ಅಸ್ಗರ್‌ ಅಫ್ಘಾನ್‌ 40; ಕಾಲರ್ಲೋಸ್‌ ಬ್ರಾತ್‌ವೇಟ್‌ 63ಕ್ಕೆ 4, ಕೆಮಾರ್‌ ರೋಚ್‌ 37ಕ್ಕೆ 3).

ತಂಡಗಳ ವಿವರ

ವೆಸ್ಟ್‌ ಇಂಡೀಸ್‌ (ಪ್ಲೇಯಿಂಗ್‌ 11): ಕ್ರಿಸ್‌ ಗೇಲ್‌, ಎವಿನ್ ಲೂಯಿಸ್‌, ಶೇಯ್‌ ಹೋಪ್‌ (ವಿಕೆಟ್‌ಕೀಪರ್‌), ಶಿಮ್ರಾನ್‌ ಹೆಟ್ಮಾಯೆರ್‌, ನಿಕೋಲಸ್‌ ಪೂರನ್‌, ಜೇಸನ್‌ ಹೋಲ್ಡರ್‌ (ನಾಯಕ), ಕಾರ್ಲೋಸ್‌ ಬ್ರಾತ್‌ವೇಟ್‌, ಫಾಬಿಯಾನ್‌ ಆಲೆನ್‌, ಶೇಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌, ಕೆಮಾರ್‌ ರೋಚ್‌.

ಅಫಘಾನಿಸ್ತಾನ (ಪ್ಲೇಯಿಂಗ್‌ 11): ರೆಹಮತ್‌ ಶಾ, ಗುಲ್ಬದಿನ್‌ ನೈಬ್‌ (ನಾಯಕ), ಅಸ್ಗರ್‌ ಆಫ್ಘನ್‌, ಮೊಹಮ್ಮದ್‌ ನಬಿ, ಸಮಿಯುಲ್ಲಾ ಶಿನ್ವಾರಿ, ನಜಿಬುಲ್ಲಾ ಝದ್ರಾನ್‌, ಇಕ್ರಮ್‌ ಅಲಿ ಖಿಲಿ (ವಿಕೆಟ್‌ಕೀಪರ್‌), ರಶೀದ್‌ ಖಾನ್‌, ದವಲತ್‌ ಝದ್ರಾನ್, ಸೈಯದ್‌ ಶಿರ್ಝಾದ್‌, ಮುಜೀಪ್‌ ಉರ್‌ ರೆಹಮಾನ್‌.

Story first published: Thursday, July 4, 2019, 23:19 [IST]
Other articles published on Jul 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+