Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Cup 2023: ಈ ದಿನಾಂಕದಂದು ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ

ದಿನ ಕಳೆದಂತೆ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಗಾಗಿ ಕಾತರತೆ ಹೆಚ್ಚಾಗುತ್ತಿದೆ. ಏಕೆಂದರೆ, ಈ ಬಾರಿ ಭಾರತದಲ್ಲಿಯೇ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಏಕದಿನ ವಿಶ್ವಕಪ್ ಪಂದ್ಯಾವಳಿಯು ನಡೆಯಲಿದೆ.

ಇತ್ತೀಚಿನ ಬೆಳವಣಿಗೆ ಮತ್ತು ವರದಿಯ ಅನುಸಾರ, ಐಸಿಸಿ 2023ರ ವಿಶ್ವಕಪ್ ವೇಳಾಪಟ್ಟಿಯನ್ನು ಇದೇ ಜೂನ್ 27ರಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ. ವಿಶೇಷವೆಂದರೆ, ಅಂದು ವಿಶ್ವಕಪ್ ಪ್ರಾರಂಭವಾಗುವ ದಿನ ಅಕ್ಟೋಬರ್ 5ಕ್ಕೆ ಕೇವಲ 100 ದಿನಗಳು ಮಾತ್ರ ಬಾಕಿ ಉಳಿಯಲಿವೆ.

 ICC ODI World Cup 2023

ಬಿಸಿಸಿಐ ಮತ್ತು ಪಿಸಿಬಿ ನಡುವಿನ ತಿಕ್ಕಾಟದಿಂದಾಗಿಯೇ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ ವಿಳಂಬವಾಗುತ್ತಿದ್ದು, ಇದು ಜಗತ್ತಿನಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಬದ್ಧ ಎದುರಾಳಿ ರಾಷ್ಟ್ರಗಳ ಎರಡು ಅಗ್ರ ಕ್ರಿಕೆಟ್ ಮಂಡಳಿಗಳು ಪ್ರತಿಷ್ಠೆ ಪ್ರದರ್ಸಿಸುತ್ತವೆ. ಐಸಿಸಿ ಕಳುಹಿಸಿರುವ ಕರಡು ವೇಳಾಪಟ್ಟಿಗೆ ಪಿಸಿಬಿ ಇನ್ನೂ ಅನುಮೋದನೆಯನ್ನು ನೀಡಿಲ್ಲ ಎನ್ನಲಾಗಿದೆ.

"ಈ ವಿಶ್ವಕಪ್ ವೇಳಾಪಟ್ಟಿಗೆ ನಾವು ಅನುಮೋದನೆ ಅಥವಾ ಅಸಮ್ಮತಿಯನ್ನು ನೀಡಲು ಸಾಧ್ಯವಿಲ್ಲ ಎಂದು ನಾವು ಐಸಿಸಿಗೆ ಪತ್ರ ಬರೆದಿದ್ದೇವೆ. ಭಾರತಕ್ಕೆ ಬರುವುದನ್ನು ನಮ್ಮ ಸರ್ಕಾರವೇ ನಿರ್ಧರಿಸಬೇಕು, ಪಾಕ್ ತಂಡ ಯಾವಾಗ ತೆರಳುತ್ತಾರೆ ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ," ಎಂದು ಪಿಸಿಬಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ನಜಮ್ ಸೇಥಿ ತಿಳಿಸಿದ್ದಾರೆ.

ಪಾಕಿಸ್ತಾನ ಸರ್ಕಾರವು ಪಂದ್ಯದ ಸ್ಥಳಗಳಿಗೆ ಗ್ರೀನ್ ಸಿಗ್ನಲ್ ನೀಡಿದ ನಂತರ ಮಾತ್ರ, ತಮ್ಮ ಅನುಮೋದನೆಯನ್ನು ಕಳುಹಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸ್ಪಷ್ಟಪಡಿಸಿದೆ. ಸುರಕ್ಷತೆ ದೃಷ್ಟಿಯಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡದ ವಿರುದ್ಧ ಆಡುವುದಿಲ್ಲ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಇದರಿಂದಾಗಿ ಪಂದ್ಯ ಚೆನ್ನೈಗೆ ಸ್ಥಳಾಂತರವಾಗುವ ಸಾಧ್ಯತೆಯೂ ಇದೆ.

ಆದರೆ, ಇದು ಇಷ್ಟಕ್ಕೆ ಮುಗಿದಿಲ್ಲ. ಪಿಸಿಬಿಯು ಚೆನ್ನೈನಲ್ಲಿ ಅಫ್ಘಾನಿಸ್ತಾನ ಮತ್ತು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಚೆನ್ನೈನಲ್ಲಿ ಸ್ಪಿನ್ ಸ್ನೇಹಿ ಟ್ರ್ಯಾಕ್‌ನಲ್ಲಿ ಹೆಚ್ಚು ಸ್ಪಿನ್ ಅವಲಂಬಿತ ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ತಮಗೆ ಸೂಕ್ತವಾಗಿಲ್ಲ ಎಂದು ಪಿಸಿಬಿ ಒತ್ತಿಹೇಳಿದೆ.

ಹೀಗಾಗಿ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಸ್ಥಳಾಂತರ ಮಾಡುವ ಕುರಿತು ಪಿಸಿಬಿ ಮನವಿ ಮಾಡಿತ್ತು. ಆದರೆ, ಬಿಸಿಸಿಐ ಮತ್ತು ಐಸಿಸಿ ಒಮ್ಮತದಿಂದ ತಿರಸ್ಕರಿಸಿವೆ.

ಈ ರೀತಿಯ ವಿಳಂಬಗಳಿಂದಲೇ ಐಸಿಸಿ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಗೆ ತಡೆ ಹಿಡಿಯಲಾಗಿದೆ. ಇದೀಗ, ಪಿಸಿಬಿಯಿಂದ ಒಪ್ಪಿಗೆ ಪತ್ರ ಕಳುಹಿಸಿದ ತಕ್ಷಣ, ಐಸಿಸಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಜೂನ್ 27 ವೇಳಾಪಟ್ಟಿ ಬಿಡುಗಡೆಗೆ ಅತ್ಯಂತ ಸಂಭವನೀಯ ದಿನಾಂಕವಾಗಿದೆ.

Story first published: Thursday, June 22, 2023, 13:14 [IST]
Other articles published on Jun 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+