ವಿಶ್ವಕಪ್ 2023: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯ ಈ ದಿನಾಂಕದಂದು ಮರುನಿಗದಿ!?
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿಯೇ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಈಗಾಗಲೇ ಐಸಿಸಿ ಸಂಪೂರ್ಣ ಹಾಗೂ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಆತಿಥೇಯ ಭಾರತ ತಂಡ ಅಕ್ಟೋಬರ್ 8ರಂದು ಐದು ಬಾರಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಚೆನ್ನೈನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಆದರೆ, ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಕೆಲವು ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಕಾಣಬಹುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಈ ಹಿಂದೆ ದೃಢಪಡಿಸಿದ್ದರು. ಏಕೆಂದರೆ ಪಂದ್ಯಗಳನ್ನು ಆಯೋಜಿಸುವ ಕೆಲವು ರಾಜ್ಯ ಸಂಸ್ಥೆಗಳು ಮನವಿ ಮಾಡಿದ್ದವು.
ಇತ್ತೀಚಿನ ಬೆಳವಣಿಗೆಯಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವು ಇದೀಗ ಹೊಸ ದಿನಾಂಕದಂದು ನಡೆಯಲಿರುವ ಪಂದ್ಯಗಳಲ್ಲಿ ಒಂದಾಗಿದೆ.
ಈ ಮೊದಲು ಐಸಿಸಿ ಬಿಡುಗಡೆ ಮಾಡಿದ ವೇಳಾಪಟ್ಟಿಯಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡುವುದನ್ನು ನಿಗದಿಪಡಿಸಲಾಗಿತ್ತು.
ಆದರೆ ರೇವ್‌ಸ್ಪೋರ್ಟ್ಜ್‌ನ ಹೊಸ ವರದಿಯ ಪ್ರಕಾರ, ಈಗ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಒಂದು ದಿನ ಮೊದಲು ಅಂದರೆ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲಿದೆ ಎಂದು ಹೇಳಿದೆ.
ಅಷ್ಟೇ ಅಲ್ಲದೆ, ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧದ ಪಾಕಿಸ್ತಾನ ತಂಡದ ಪಂದ್ಯಗಳನ್ನು ಕ್ರಮವಾಗಿ ಅಕ್ಟೋಬರ್ 6 ಮತ್ತು 10ಕ್ಕೆ ಮರುನಿಗದಿಗೊಳಿಸಲಾಗಿದೆ. ಇದರಿಂದಾಗಿ ಭಾರತ ವಿರುದ್ಧದ ಪಂದ್ಯಕ್ಕೆ ತಯಾರಿ ನಡೆಸಲು ಪಾಕಿಸ್ತಾನ ತಂಡಕ್ಕೆ ಸಾಕಷ್ಟು ಸಮಯವಕಾಶ ಸಿಗಲಿದೆ.
ಇನ್ನು ಬಿಸಿಸಿಐ ಮತ್ತು ಐಸಿಸಿ ಇನ್ನೂ ಈ ಬಗ್ಗೆ ವಿವರಗಳನ್ನು ಖಚಿತಪಡಿಸಿಲ್ಲ. ಆದರೆ ಕೆಲವೇ ದಿನಗಳಲ್ಲಿ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಸಂಪೂರ್ಣ ವೇಳಾಪಟ್ಟಿ
ಅಕ್ಟೋಬರ್ 8: ಭಾರತ vs ಆಸ್ಟ್ರೇಲಿಯಾ, ಚೆನ್ನೈ
ಅಕ್ಟೋಬರ್ 11: ಭಾರತ vs ಅಫ್ಘಾನಿಸ್ತಾನ, ದೆಹಲಿ
ಅಕ್ಟೋಬರ್ 14: ಭಾರತ vs ಪಾಕಿಸ್ತಾನ, ಅಹಮದಾಬಾದ್
ಅಕ್ಟೋಬರ್ 19: ಭಾರತ vs ಬಾಂಗ್ಲಾದೇಶ, ಪುಣೆ
ಅಕ್ಟೋಬರ್ 22: ಭಾರತ vs ನ್ಯೂಜಿಲೆಂಡ್, ಧರ್ಮಶಾಲಾ
ಅಕ್ಟೋಬರ್ 29: ಭಾರತ vs ಇಂಗ್ಲೆಂಡ್, ಲಕ್ನೋ
ನವೆಂಬರ್ 02: ಭಾರತ vs ನೆದರ್ಲ್ಯಾಂಡ್ಸ್, ಮುಂಬೈ
ನವೆಂಬರ್ 05: ಭಾರತ vs ದಕ್ಷಿಣ ಆಫ್ರಿಕಾ, ಕೋಲ್ಕತ್ತಾ
ನವೆಂಬರ್ 11: ಭಾರತ vs ಶ್ರೀಲಂಕಾ, ಬೆಂಗಳೂರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications