ಹೆಚ್ಚಾಯ್ತು ಪಾಕಿಸ್ತಾನದ ನಡುಕ.. ಅಪ್ಘನ್ ವಿರುದ್ಧ ಈ ಮೂವರ ಅಬ್ಬರ ನೋಡಿ ದಂಗಾದ ಬಾಬರ್ ಪಡೆ
ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಬ್ಯಾಟಿಂಗ್‌ಗೆ ನೆರವಿ ನೀಡುವ ಪಿಚ್‌ನಲ್ಲಿಯೂ ಅಫ್ಘನ್ ಪಡೆಯನ್ನು 272 ರನ್‌ಗಳಿಗೆ ಕಟ್ಟಿ ಹಾಕಿದ ಭಾರತ ಬಳಿಕ ಅದನ್ನು ಅದ್ಭುತವಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಮೂವರ ಪ್ರದರ್ಶನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಉಳಿದ ಆಟಗಾರರಲ್ಲಿ ಭೀತಿ ಹುಟ್ಟಿಸಿರುವುದು ಸುಳ್ಳಲ್ಲ. ಅದರಲ್ಲೂ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡದ ಪಾಳಯದ ನೆದ್ದೆಗೆಡಿಸಿದೆ. ಹೀಗಾಗಿ ಭಾರತದ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯಕ್ಕೆ ತನ್ನ ರಣತಂತ್ರವನ್ನು ಮತ್ತಷ್ಟು ತೀವ್ರಗೊಳಿಸುವುದರಲ್ಲಿ ಅನುಮಾನವಿಲ್ಲ.

ಹಾಗಾದರೆ ಪಾಕಿಸ್ತಾನ ತಂಡದ ನಿದ್ದೆಗೆಡಿಸಿರುವ ಆ ಮೂವರು ಭಾರತೀಯ ಆಟಗಾರರು ಯಾರು? ಮುಂದೆ ಓದಿ..
ಫಾರ್ಮ್‌ಗೆ ಮರಳಿದ ನಾಯಕ ರೋಹಿತ್ ಶರ್ಮಾ
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆಯನ್ನು ಕೂಡ ಈ ಮೂಲಕ ಬರೆದುಕೊಂಡಿದ್ದಾರೆ. ಕಳೆದ ವಿಶ್ವಕಪ್‌ನಲ್ಲಿ ಒಟ್ಟು ಐದು ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿಯೂ ಅಂಥಾದ್ದೇ ಪ್ರದರ್ಶನದ ಸೂಚನೆ ನೀಡಿದ್ದಾರೆ. ಹೀಗಾಗಿ ಪಾಕಿಸ್ತಾನ ತಂಡಕ್ಕೆ ಆರಂಭದಲ್ಲಿಯೇ ನಾಯಕ ರೋಹಿತ್ ಶರ್ಮಾ ನಿದ್ದೆಗೆಡಿಸಿರುವುದು ಸುಳ್ಳಲ್ಲ.
ಮುಂದುವರಿದ ಕೊಹ್ಲಿಯ ಭರ್ಜರಿ ಫಾರ್ಮ್
ಇನ್ನು ಪಾಕಿಸ್ತಾನದ ವಿರುದ್ಧ ಆಡುವುದೆಂದರೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಇನ್ನಿಲ್ಲದ ಉತ್ಸಾಹ. ಈಗಾಗಲೇ ಸತತ ಎರಡು ಅರ್ಧ ಶತಕ ಸಿಡಿಸಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಮೋಘ ಲಯದಲ್ಲಿರುವುದನ್ನು ಸಾಬೀತುಪಡಿಸಿದ್ದಾರೆ. ಇದೇ ಇನ್ನು ಪಾಕಿಸ್ತಾನದ ವಿರುದ್ಧ ಮತ್ತಷ್ಟು ಅಪಾಯಕಾರಿ ಇನ್ನಿಂಗ್ಸ್ ಆಡುವ ಸಾಧ್ಯತೆಯಿರುವ ಕಾರಣ ಪಾಕ್ ಕೊಹ್ಲಿಗಾಗಿ ಯಾವ ರೀತಿಯ ರಣತಂತ್ರ ಹೆಣೆಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ವೇಗಿ ಜಸ್ಪ್ರೀತ್ ಬೂಮ್ರಾ
ಇನ್ನು ದೆಹಲಿಯ ನೂತನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಅಫ್ಘನ್ ದಾಂಡಿಗರನ್ನು ಕಟ್ಟು ಹಾಕಿದ್ದು ವೇಗಿ ಜಸ್ಪ್ರೀತ್ ಬೂಮ್ರಾ. ರನ್ ನಿಯಂತ್ರಣ ಮಾಡುವುದರ ಜೊತೆಗೆ ಬೂಮ್ರಾ ಅಫ್ಘನ್ ಪಡೆಯ ನಾಲ್ವರು ಬ್ಯಾಟರ್‌ಗಳನ್ನು ಔಟ್ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಭಾರತದ ಮುಂದಿನ ಎದುರಾಳಿ ಪಾಕಿಸ್ತಾನ ತಂಡದ ನಿದ್ದೆಗೆಡಿಸಿರುವುದರಲ್ಲಿ ಅನುಮಾನವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications