For Quick Alerts
ALLOW NOTIFICATIONS  
For Daily Alerts
 

World Cup 2023: ವಿಶ್ವಕಪ್‌ಗೂ ಮುನ್ನ ಭಾರತದಲ್ಲಿ ಭದ್ರತಾ ತಪಾಸಣೆ ನಡೆಸಬೇಕೆಂದ ಪಿಸಿಬಿ

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ದಿನಗಣನೆ ಆರಂಭವಾಗಿದೆ. ಈಗಾಗಲೇ ಜೂನ್ 27ರಂದು ಹೆಚ್ಚು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವೂ ಸೇರಿದಂತೆ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ.

ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಸೆಣಸಾಡಲಿವೆ. ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಅಜೇಯ ಗೆಲುವಿನ ಸರಣಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

World Cup 2023: PCB Wants To Security Check in Venues Before World Cup; Reports

ಏಕದಿನ ವಿಶ್ವಕಪ್‌ನ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ವಿಶ್ವದಾದ್ಯಂತ ದೊಡ್ಡ ಪ್ರಚಾರ ಗಿಟ್ಟಿಸಿಕೊಂಡಿದೆ ಮತ್ತು ಈ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಗಳು ಕಾಯುತ್ತಿದ್ದಾರೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ ಇತರ 9 ತಂಡಗಳಿಗಿಂತ ಭಿನ್ನವಾಗಿ, ಪಾಕಿಸ್ತಾನ ತಂಡವು ದೇಶದಾದ್ಯಂತ 5 ಸ್ಥಳಗಳಲ್ಲಿ ಮಾತ್ರ ಆಡಲಿದೆ. ಅತಿ ದೊಡ್ಡ ಐಸಿಸಿ ಟೂರ್ನಿಗಾಗಿ ಅಂತಿಮಗೊಳಿಸಲಾದ 10 ಮೈದಾನಗಳಲ್ಲಿ ಇತರ ತಂಡಗಳು ಆಡುತ್ತವೆ.

ಹೊಸ ವರದಿಯ ಪ್ರಕಾರ, 2023ರ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ವ್ಯವಸ್ಥೆಗಳನ್ನು ಪರಿಶೀಲಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ಭದ್ರತಾ ತಂಡವನ್ನು ಭಾರತಕ್ಕೆ ಕಳುಹಿಸುವ ಸಾಧ್ಯತೆಯಿದೆ. ಅದು ಯಾವಾಗ ಕಳುಹಿಸಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಪಿಸಿಬಿಯ ಭದ್ರತಾ ತಂಡವು ವಿಶ್ವಕಪ್ ನಡೆಯುವ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿದ ನಂತರವೇ, ಪಾಕಿಸ್ತಾನ ಸರ್ಕಾರ ಬಾಬರ್ ಅಜಂ ನಾಯಕತ್ವದ ತಂಡಕ್ಕೆ ಹಸಿರು ನಿಶಾನೆ ನೀಡಲಿದೆ ಎಂದು ಹೇಳಲಾಗಿದೆ. ಪಿಸಿಬಿಯ ಭದ್ರತಾ ತಂಡವು ಚೆನ್ನೈ, ಹೈದರಾಬಾದ್, ಬೆಂಗಳೂರು, ಅಹಮದಾಬಾದ್ ಮತ್ತು ಕೋಲ್ಕತ್ತಾದ ಎಲ್ಲಾ 5 ಸ್ಥಳಗಳಿಗೆ ಭೇಟಿ ನೀಡಲಿದೆ. ಅನಂತರ ಮಂಡಳಿಗೆ ವರದಿಯನ್ನು ಸಲ್ಲಿಸಲಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪಾಕಿಸ್ತಾನವು ಈ ಹಿಂದೆ ಕೆಲವು ನಿರ್ದಿಷ್ಟ ಮೈದಾನಗಳಲ್ಲಿ ಕೆಲವು ಪಂದ್ಯಗಳನ್ನು ಆಡಲು ಬಯಸಿರಲಿಲ್ಲ. ಪಿಸಿಬಿ ಇದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು ಮತ್ತು ಮೈದಾನಗಳನ್ನು ವಿನಿಮಯ ಮಾಡಿಕೊಡಲು ವಿನಂತಿಸಿದ್ದರು. ಇದೇ ಕಾರಣಕ್ಕೆ ವೇಳಾಪಟ್ಟಿ ಪ್ರಕಟಿಸಲು ವಿಳಂಬವಾಗಿತ್ತು ಎಂದು ವರದಿಯಾಗಿದೆ.

ಕ್ರಿಕೆಟ್ ಲೆಜೆಂಡ್‌ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಮುತ್ತಯ್ಯ ಮುರಳೀಧರನ್ ಅವರೊಂದಿಗೆ ಪ್ರಮುಖ ಬಿಸಿಸಿಐ ಮತ್ತು ಐಸಿಸಿ ಅಧಿಕಾರಿಗಳು ಉಪಸ್ಥಿತಿಯಲ್ಲಿ ಜೂನ್ 27ರಂದು ವಿಶ್ವಕಪ್ ಟ್ರೋಫಿ ಮತ್ತು ವೇಳಾಪಟ್ಟಿಯನ್ನು ಅಂತಿಮವಾಗಿ ಅನಾವರಣಗೊಳಿಸಲಾಯಿತು.

ಪಿಸಿಬಿ ಮಾಜಿ ಮುಖ್ಯಸ್ಥ ನಜಮ್ ಸೇಥಿ ಅವರು ಅಧಿಕಾರದಲ್ಲಿದ್ದಾಗ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಕುರಿತು ಐಸಿಸಿಗೆ ಪತ್ರ ಬರೆದಿದೆ ಎಂದು ಹೇಳಿದ್ದರು. ಆದರೆ, ಪಿಸಿಬಿಯ ಮನವಿಯನ್ನು ತಿರಸ್ಕರಿಸಿ, ವೇಳಾಪಟ್ಟಿಯಂತೆ ಈ ಪಂದ್ಯಕ್ಕೆ ಅದೇ ಸ್ಥಳವನ್ನು ನಿಗದಿಪಡಿಸಲಾಗಿದೆ.

ತಿಂಗಳುಗಳ ಕಾಲ ಚರ್ಚೆಯ ನಂತರ, ಪಿಸಿಬಿ ಅಂತಿಮವಾಗಿ 2023ರ ಏಷ್ಯಾ ಕಪ್‌ನಲ್ಲಿ ಭಾರತ ತಂಡದ ಪಂದ್ಯಗಳನ್ನು ಆಯೋಜಿಸದಿರಲು ಒಪ್ಪಿಕೊಂಡಿತು.

ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಪಾಕಿಸ್ತಾನದಲ್ಲಿ 4 ಪಂದ್ಯ ಮತ್ತು ಶ್ರೀಲಂಕಾದಲ್ಲಿ ಫೈನಲ್ ಸೇರಿದಂತೆ 9 ಪಂದ್ಯಗಳನ್ನು ಆಯೋಜಿಸಲಾಗಿದೆ. ಭಾರತ ತಂಡದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.

Story first published: Saturday, July 1, 2023, 10:43 [IST]
Other articles published on Jul 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+