For Quick Alerts
ALLOW NOTIFICATIONS  
For Daily Alerts
 

ಆತನೊಬ್ಬನಿಂದಾಗಿಯೇ ಪಾಕಿಸ್ತಾನ ಸೋಲುತ್ತಿಲ್ಲ: ಪಾಕ್ ನಾಯಕನ ಬೆಂಬಲಕ್ಕೆ ನಿಂತ ಭಾರತದ ಮಾಜಿ ಕ್ರಿಕೆಟಿಗ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯ ಪ್ರದರ್ಶನ ನೀಡುತ್ತಿದೆ. ಆಡಿರುವ ಐದು ಪಂದ್ಯಗಳ ಪೈಕಿ ಮೂರು ಸೋಲು ಅನುಭವಿಸಿರುವ ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಹಾದಿ ದುರ್ಗಮವಾಗಿದ್ದು ಮುಂದಿನ ಪ್ರತಿ ಪಂದ್ಯದ ಗೆಲುವು ಕೂಡ ತಂಡಕ್ಕೆ ನಿರ್ಣಾಯಕವಾಗಲಿದೆ. ಈ ಸಂದರ್ಭದಲ್ಲಿ ಪಾಕ್ ತಂಡದ ಪ್ರದರ್ಶನದ ಬಗ್ಗೆ ತೀವ್ರ ಟೀಕೆಗಳು ಎದುರಾಗುತ್ತಿದ್ದು ನಾಯಕ ಬಾಬರ್ ಅಜಂ ನಾಯಕತ್ವ ತೊರೆಯಬೇಕು ಎನ್ನುವ ಕೂಗು ಜೋರಾಗಿದೆ.

ಆದರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಈ ವಿಚಾರವಾಗಿ ಪಾಕಿಸ್ತಾನ ತಮಡದ ನಾಯಕ ಬಾಬರ್ ಅಜಂ ಬೆನ್ನಿಗೆ ನಿಂತಿದ್ದಾರೆ. ಪಾಕಿಸ್ತಾನ ತಂಡ ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಲು ಬಾಬರ್ ಅಜಂ ಮಾತ್ರವೇ ಕಾರಣವಲ್ಲ ಎಂದಿದ್ದು ಪಾಕ್ ಸೋಲಿಗೆ ಬೇರೆಯುದ್ದೇ ಕಾರಣಗಳಿವೆ ಎಂದಿದ್ದಾರೆ.

World cup: Aakash Chopra backs Babar Azam said Pakistan are losing not only because of him

ಪಾಕಿಸ್ತಾನ ತಂಡ ಇಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಕೊನೆಯ ಮೂರು ಪಂದ್ಯಗಳಲ್ಲಿ ಪಾಕ್ ತಂಡ ಸತತ ಸೋಲು ಅನುಭವಿಸಿದ್ದು ಸೋಲಿನ ಸುಳಿಯಿಂದ ಹೊರಬಂದು ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಉಳಿದಿಕೊಳ್ಳಬೇಕಾದರೆ ಪಾಕ್ ತಂಡಕ್ಕೆ ಈ ಪಂದ್ಯದ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

"ಪಂದ್ಯ ಉತ್ತಮ ಪಿಚ್‌ನಲ್ಲಿ ನಡೆದು ದಕ್ಷಿಣ ಆಫ್ರಿಕಾ ಆರಂಭದಲ್ಲಿ ಬ್ಯಾಟಿಂಗ್ ನಡೆಸಿ ಅಬ್ಬರದ ಪ್ರದರ್ಶನ ನೀಡಲು ಆರಂಭಿಸಿದರೆ ಅದು ಪಾಕಿಸ್ತಾನಕ್ಕೆ ನಿಜಕ್ಕೂ ಸಂಕಷ್ಟವನ್ನುಂಟು ಮಾಡಲಿದೆ. ಪಾಕಿಸ್ತಾನದಲ್ಲಿ ವಿಭಿನ್ನವಾದ ವಾತಾವರಣ ಇದೆ. ಅವರ ಮಂಡಳಿ ತಂಡದ ಜೊತೆಗೆ ನಿಂತಿದೆ ಎಂದು ವರದಿಗಳಾಗುತ್ತಿದೆ. ಆದರೆ ಅದನ್ನು ನೀವು ಹೇಳುತ್ತಿದ್ದೀರಿ ಎಂದಾದರೆ ನೀವು ಇಲ್ಲ ಎಂದು ಅರ್ಥ" ಎಂದಿದ್ದಾರೆ ಆಕಾಶ್ ಚೋಪ್ರ.

"ಅವರ ಹೇಳಿಕೆಗಳಿಂದಾಗಿ ಬಾಬರ್ ಅಜಂ ಅವರನ್ನು ನಾಯಕಯತ್ವದಿಂದ ಕೆಳಗಿಳಿಸುವ ಸಿದ್ಧತೆಗಳು ಆಗುತ್ತಿವೆ ಎಂದು ತಿಳಿಯುತ್ತದೆ. ಆತನ ನಾಯಕತ್ವ ಬಹಳ ಸಾಮಾನ್ಯವಾಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆತನ ಫಾರ್ಮ್ ಕುಡ ಸಾಮಾನ್ಯ ಮಟ್ಟದಲ್ಲಿತ್ತು. ಆತನ ಆತ ಮಾತ್ರ ಸಮಸ್ಯೆ ಅಲ್ಲ. ನೀವು ಆತನಿಂದಾಗಿ ಮಾತ್ರವೇ ಸೋಲು ಅನುಭವಿಸಿಲ್ಲ. ಇಲ್ಲಿ ಸಾಕಷ್ಟು ಬೇರೆ ಕಾರಣಗಳು ಕೂಡ ಇದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಇನ್ನು ಪಾಕಿಸ್ತಾನ ದಕ್ಷಿಣ ಆಫ್ರಿಕಾವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ಅದು ದೊಡ್ಡ ಅಚ್ಚರಿಯಾಗಲಿದೆ ಎಂದು ಚೋಪ್ರಾ ಹೇಳಿದ್ದಾರೆ. ಜೊತೆಗೆ ಈ ಎರಡು ತಂಡಗಳ ಪ್ರದರ್ಶನಗಳು ಪರಸ್ಪರ ವಿರುದ್ಧ ದಿಕ್ಕಿನತ್ತ ಸಾಗುತ್ತಿವೆ ಎಂದಿದ್ದಾರೆ. ಆದರೆ ಈ ಟೂರ್ನಿ ಕೆಲ ಅಚ್ಚರಿಯ ಫಲಿತಾಂಶಗಳಿಗೂ ಸಾಕಷ್ಟಿಯಾಗುತ್ತಿವೆ ಎನ್ನುವುದನ್ನು ಕೂಡ ಬಾಬರ್ ಆಕಾಶ್ ಚೋಪ್ರ ಒಪ್ಪಿಕೊಂಡಿದ್ದಾರೆ.

Story first published: Friday, October 27, 2023, 11:52 [IST]
Other articles published on Oct 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+