ಕ್ರಿಸ್ ಗೇಲ್ ದಾಖಲೆ ನಂತರ ಡಿಆರ್ ಎಸ್ ವಿವಾದ
ಕ್ಯಾನ್ ಬೇರಾ, ಫೆ. 24: ವಿಶ್ವಕಪ್ ನಲ್ಲಿ ಅಳವಡಿಸಿಕೊಂಡಿರುವ ಡಿಆರ್ ಎಸ್ ಪ್ರತಿದಿನ ವಿವಾದಗಳನ್ನು ಹುಟ್ಟುಹಾಕುತ್ತಿದೆ. ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲೂ ಇಂಥದ್ದೊಂದು ಗೊಂದಲಕಾರಿ ತೀರ್ಮಾನ ಹೊರಬಿದ್ದಿದೆ.
ಕ್ರಿಸ್ ಗೇಲ್ ದ್ವಿಶತಕ ಆರ್ಭಟ ಜಿಂಬಾಬ್ವೆಗೆ ಬೃಹತ್ ಮೊತ್ತದ ಗುರಿ ಇಟ್ಟಿತ್ತು. ನಂತರ ಚೇಸಿಂಗ್ ಗೆ ಇಳಿದ ಜಿಂಬಾಬ್ವೆ ಬ್ಯಾಟಿಂಗ್ ವೇಳೆ ಮೂರನೇ ಅಂಪೈರ್ ಶ್ರೀಲಂಕಾದ ರಾನ್ ಮೋರೆ ನೀಡಿದ ತೀರ್ಪು ವಿವಾದಕ್ಕೆ ಕಾರಣವಾಯಿತು. ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಗೆ ನೀಡಿದ ತೀರ್ಪು ಡಿಆರ್ ಎಸ್ ವಿವಾದದ ಕೇಂದ್ರ ಬಿಂದು.[ಡಿಆರ್ ಎಸ್ ವಿವಾದಕ್ಕೆ ಸಾಕ್ಷಿಯಾದ ಇಂಡೋ-ಪಾಕ್ ಕದನ]

ಈಗಾಗಲೇ ವಿಶ್ವಕಪ್ ನಲ್ಲಿ ಎರಡು ಸಾರಿ ಇಂಥ ವಿವಾದಗಳು ಹೊಗೆಯಾಡಿದ್ದನ್ನು ನೋಡಿದ್ದೇವೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಅಂಪೈರ್ ಗಳು ಮೊದಲ ಬಾರಿಗೆ ತಪ್ಪೆಸಗಿದ್ದರು. ಭಾರತ- ಪಾಕಿಸ್ತಾನ ನಡುವಿನ ಪಂದ್ಯದಲ್ಲೂ ಉಮರ್ ಅಕ್ಮಲ್ ಔಟ್ ಆದ ರೀತಿ ವಿವಾದಕ್ಕೆ ಕಾರಣವಾಗಿತ್ತು.
ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಅವರಿಗೆ ಫೀಲ್ಡ್ ಅಂಪೈರ್ ಗಳು ನಾಟ್ ಔಟ್ ನೀಡಿದ್ದರು. ಆದರೆ ಇದನ್ನು ಪ್ರಶ್ನಿಸಿ ವೆಸ್ಟ್ ಇಂಡೀಸ್ ನಾಯಕ ಜೆಮ್ಸ್ ಹೋಲ್ಡರ್ ಮೂರನೇ ಅಂಪೈರ್ ಗೆ ಮನವಿ ಸಲ್ಲಿಸಿದರು. ರೀಪ್ಲೆ ವೀಕ್ಷಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಮಾನವಿತ್ತರು.[ವಿಶ್ವಕಪ್ ಅಂಕ ಪಟ್ಟಿ]
ವೆಸ್ಟ್ ಇಂಡೀಸ್ ನ 21 ನೇ ಓವರ್ ತೆಗೆದುಕೊಂಡು ಬಂದ ಮಾರ್ಲೋನ್ ಸ್ಯಾಮುಯಲ್ಸ್ ಟೇಲರ್ ಗೆ ಚೆಂಡು ಎಸೆದಿದ್ದರು. ಸ್ವಿಪ್ ಶಾಟ್ ಹೊಡೆಯಲು ಯತ್ನಿಸಿದ ಟೇಲರ್ ವಿಫಲವಾಗಿದ್ದರು. ಕೀಪರ್ ರಾಮ್ ದಿನ್ ಚೆಂಡನ್ನು ಹಿಡಿದು ಔಟ್ ಗೆ ಮನವಿ ಸಲ್ಲಿಸಿದ್ದರು.
ಆದರೆ ಫೀಲ್ಡ್ ಅಂಪೈರ್ ಇಂಗ್ಲೆಂಡ್ ನ ಇಯಾನ್ ಗುಡ್ ನಾಟ್ ಔಟ್ ನೀಡಿದ್ದರು. ಇದನ್ನು ಡಿಆರ್ ಎಸ್ ಮೂಲಕ ಮೂರನೇ ಅಂಪೈರ್ ಗೆ ಮನವಿ ಸಲ್ಲಿಸಲಾಗಿದ್ದು ಅವರು ಔಟ್ ಎಂದು ಘೋಷಿಸಿದರು. 48 ಚೆಂಡುಗಳಲ್ಲಿ 37 ರನ್ ಗಳಿಸಿದ ಟೇಲರ್ ಅವರನ್ನು ಔಟ್ ಎಂದು ಘೊಷಿಸಲಾಯಿತು. ಆದರೆ ರೀಪ್ಲೆಯಲ್ಲಿ ಚೆಂಡು ಬ್ಯಾಟಿಗೆ ತಗುಲಿದ ಯಾವ ಕುರುಹುಗಳು ಕಂಡುಬರಲಿಲ್ಲ. ಒಟ್ಟಿನಲ್ಲಿ ಡಿಆರ್ ಎಸ್ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ವಿವಾದ ಎಬ್ಬಿಸಿದೆ.
ವಿಡಿಯೋ ನೋಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications