For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಕ್ರಿಕೆಟ್: ಟಾಪ್ 10 ಶತಕ ವೀರರು

By Mahesh

ಬೆಂಗಳೂರು, ಫೆ.12: ಕಳೆದ 40 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ 11 ಆವೃತ್ತಿಗಳಲ್ಲಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕಲಿಗಳ ವಿವರ ಇಲ್ಲಿದೆ. ಈ ಹಿಂದಿನ ವಿಶ್ವಕಪ್ ನ ಅಂಕಿ ಅಂಶಗಳನ್ನು ಕೆದಕಿ ಶತಕ ವೀರರ ಪಟ್ಟಿ ಗಮನಿಸಿದರೆ ಭಾರತ ಹಾಗೂ ವಿಶ್ವ ಕ್ರಿಕೆಟ್ ಸೆಂಚುರಿ ಸ್ಟಾರ್ ಗಳ ಪಟ್ಟಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಎದ್ದು ಕಾಣುತ್ತದೆ.

ವಿಶ್ವಕಪ್ ನಲ್ಲಿ ಹೆಚ್ಚು ಶತಕ ಗಳಿಸಿರುವ ಸಚಿನ್ ತೆಂಡೂಲ್ಕರ್ ಸೇರಿದಂತೆ ಇದುವರೆವಿಗೂ 20 ಬಾರಿ ಭಾರತೀಯ ಕ್ರಿಕೆಟರ್ ಗಳು 100ರನ್ ಗಡಿ ದಾಟಿದ್ದಾರೆ. ಸಚಿನ್ ವಿಶ್ವದಾಖಲೆ (6 ಶತಕ) ಹಾಗೂ ಅತಿ ಹೆಚ್ಚು ಅರ್ಧಶತಕ (15) ಇನ್ನೂ ಯಾರು ಮುರಿದಿಲ್ಲ. [ವಿಶ್ವಕಪ್: ಇಂಡಿಯಾದ ಶತಕವೀರರ ಪಟ್ಟಿ ]

ಉಳಿದಂತೆ ಟಾಪ್ ಆಟಗಾರರ ಪಟ್ಟಿಯಲ್ಲಿ ಭಾರತದಿಂದ ಸೌರವ್ ಗಂಗೂಲಿ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಕನಿಷ್ಠ 3 ಶತಕ ಬಾರಿಸಿದ ಆಟಗಾರರನ್ನು ಮಾತ್ರ ಪರಿಗಣಿಸಲಾಗಿದೆ. ಸಚಿನ್ ಹಾಗೂ ಗಂಗೂಲಿ ಹೊರತುಪಡಿಸಿದರೆ ರಾಹುಲ್ ದ್ರಾವಿಡ್ 2 ಶತಕ ಬಾರಿಸಿದ್ದರು. [ಸಚಿನ್, ಮೆಗ್ರಾಥ್, ರಿಕಿ ದಾಖಲೆ ಧೂಳಿಪಟ ಸಾಧ್ಯವೇ?]

sachin

ಟಾಪ್ ಶತಕ ವೀರರ ಪಟ್ಟಿ ಇಂತಿದೆ:

* ಸಚಿನ್ ತೆಂಡೂಲ್ಕರ್ (ಭಾರತ): 45 ಪಂದ್ಯಗಳಲ್ಲಿ 6 ಶತಕ, ಅತ್ಯಧಿಕ ಮೊತ್ತ 152 ರನ್.

* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 46 ಪಂದ್ಯಗಳಲ್ಲಿ 5 ಶತಕ, ಅತ್ಯಧಿಕ ಮೊತ್ತ 140 ರನ್.

* ಸೌರವ್ ಗಂಗೂಲಿ (ಭಾರತ): 21 ಪಂದ್ಯಗಳಲ್ಲಿ 4 ಶತಕ, ಅತ್ಯಧಿಕ ಮೊತ್ತ 183 ರನ್.

* ಮಾರ್ಕ್ ವಾ (ಆಸ್ಟ್ರೇಲಿಯಾ) : 22 ಪಂದ್ಯಗಳಲ್ಲಿ 4 ಶತಕ, ಅತ್ಯಧಿಕ ಮೊತ್ತ 130 ರನ್.

* ಎಬಿ ಡಿ ವಿಲೆಯರ್ಸ್ (ದಕ್ಷಿಣ ಆಫ್ರಿಕಾ) : 15 ಪಂದ್ಯಗಳಲ್ಲಿ 3 ಶತಕ, ಅತ್ಯಧಿಕ ಮೊತ್ತ 146 ರನ್.

* ರಮೀಜ್ ರಾಜಾ (ಪಾಕಿಸ್ತಾನ) : 16 ಪಂದ್ಯಗಳಲ್ಲಿ 3 ಶತಕ, ಅತ್ಯಧಿಕ ಮೊತ್ತ 119 ರನ್.

* ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ) : 22 ಪಂದ್ಯಗಳಲ್ಲಿ 3 ಶತಕ, ಅತ್ಯಧಿಕ ಮೊತ್ತ 158 ರನ್.

* ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್) : 23 ಪಂದ್ಯಗಳಲ್ಲಿ 3 ಶತಕ, ಅತ್ಯಧಿಕ ಮೊತ್ತ 181 ರನ್.

* ಸಯೀದ್ ಅನ್ವರ್ (ಪಾಕಿಸ್ತಾನ) : 21 ಪಂದ್ಯಗಳಲ್ಲಿ 3 ಶತಕ, ಅತ್ಯಧಿಕ ಮೊತ್ತ 113 ರನ್.

* ಮಹೇಲ ಜಯವರ್ದನೆ (ಶ್ರೀಲಂಕಾ) : 33 ಪಂದ್ಯಗಳಲ್ಲಿ 3 ಶತಕ, ಅತ್ಯಧಿಕ ಮೊತ್ತ 115 ರನ್.

* ಸನತ್ ಜಯಸೂರ್ಯ (ಶ್ರೀಲಂಕಾ) : 38 ಪಂದ್ಯಗಳಲ್ಲಿ 3 ಶತಕ, ಅತ್ಯಧಿಕ ಮೊತ್ತ 120 ರನ್.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
Read in English: WC 2015: Top 100-getters
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+