ವಿಶ್ವಕಪ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲಿಂಗ್ ದಾಖಲೆಯ ಮೇಲೆ ಮೊಹಮ್ಮದ್ ಶಮಿ ಕಣ್ಣು
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ. 2023ರ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಪಾಲಿನ ಎಕ್ಸ್ ಫ್ಯಾಕ್ಟರ್. ಎದುರಾಳಿ ತಂಡಗಳು ಬೇರೆ ಬೇರೆ ಬೌಲರ್ ಗಳನ್ನು ಟಾರ್ಗೆಟ್ ಮಾಡಿದ್ದರೆ, ಶಮಿ ಸೈಲೆಂಟ್ ಆಗಿ ಬಂದು ತಮ್ಮ ಕೆಲಸವನ್ನು ಮಾಡಿ ಮುಗಿಸುತ್ತಿದ್ದರು. ಅಬ್ಬಾ.. ಏನ್ ಕರಾರುವಾಕ್ ದಾಳಿ. ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಂಡ ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಏಕದಿನ ವಿಶ್ವಕಪ್ ನಲ್ಲಿ ಅಬ್ಬರಿಸಿದ್ದಾರೆ.
ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಆಡಲು ಅವಕಾಶ ಸಿಗದೇ ಇದ್ದಾಗಲೂ ಧೃತಿಗೆಡದೆ ನೆಟ್ಸ್ ನಲ್ಲಿ ಬಿಗುವಿನ ದಾಳಿ ನಡೆಸಿ, ಅವಕಾಶಕ್ಕಾಗಿ ಕಾಯ್ದ ತಪಸ್ವಿ ಈ ಶಮಿ. ಈ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಅಂದು ಕೊಂಡಂತೆ ಪ್ರದರ್ಶನ ನೀಡಿದೆ ಎಂದು ಆದಲ್ಲಿ ಅದ್ರಲ್ಲಿ ಶಮಿ ಅವರ ಕೊಡುಗೆ ಅಪಾರ. ಆಡಿರುವ 6 ಪಂದ್ಯಗಳಲ್ಲಿ ಶಮಿ 9.13 ರ ಸರಾಸರಿಯೊಂದಿಗೆ 23 ವಿಕೆಟ್ ಕಬಳಿಸಿದ್ದಾರೆ.

ಇದೇ ವಿಶ್ವಕಪ್ ನಲ್ಲಿ ಮೊಹಮ್ಮದ್ ಶಮಿ ಮೂರು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಪ್ರಸಕ್ತ ವಿಶ್ವಕಪ್ ನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲಿ ಶಮಿ ನ್ಯೂಜಿಲೆಂಡ್ ಬ್ಯಾಟರ್ ಗಳಿಗೆ ಕಾಟ ನೀಡಿದ್ದರು. ಅಲ್ಲದೆ 54 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಇನ್ನು ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಶಮಿ 18 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದರು. ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ತಂಡದ ಕಿವಿ ಹಿಂಡಿದ್ದ ಶಮಿ, 7 ವಿಕೆಟ್ ಪಡೆದು ಅಬ್ಬರಿಸಿದ್ದರು. ಈ ಮೂಲಕ ತಮ್ಮ ಮೇಲೆ ಇದ್ದ ಟೀಕೆಗಳಿಗೆ ಉತ್ತರ ನೀಡಿದ್ದರು. ಈಗ ಶಮಿ ಅವರು ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯ ಹಿಂದೆ ಬಿದ್ದಿದ್ದಾರೆ.
ಮಿಚೆಲ್ ಸ್ಟಾರ್ಕ್ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಶ್ರೇಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಟಾರ್ಕ್ 2019ರ ಏಕದಿನ ವಿಶ್ವಕಪ್ ನಲ್ಲಿ ಆಡಿದ 10 ಪಂದ್ಯಗಳಿಂದ 27 ವಿಕೆಟ್ ಕಬಳಿಸಿದ್ದರು. ಇದು ಈವರೆಗಿನ ಉತ್ತಮ ಸಾಧನೆ.
ಈ ಸಾಧನೆಯನ್ನು ಅಳಿಸಿ ಹಾಕಲು ಶಮಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದರೆ, ಸ್ಟಾರ್ಕ್ ಅವರ ದಾಖಲೆಯ ಸಮಕ್ಕೆ ನಿಲ್ಲುತ್ತಾರೆ. ಒಂದು ವೇಳೆ ಐದು ವಿಕೆಟ್ ಗಳನ್ನು ಪಡೆದರೆ, ಒಂದೇ ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಮಾಡಲಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications