ಎಬಿಡಿ, ದಕ್ಷಿಣ ಆಫ್ರಿಕಾ ಮುರಿದ ದಾಖಲೆಗಳ ಪಟ್ಟಿ
ಸಿಡ್ನಿ, ಫೆ.27: ವಿಶ್ವಕಪ್ 2015ನೇ ಟೂರ್ನಿಯಲ್ಲಿ ಮತ್ತೆ ಬ್ಯಾಟಿಂಗ್ ದಾಖಲೆಗಳು ಛಿದ್ರವಾಗುತ್ತಿವೆ. ವಿಂಡೀಸ್ 'ದೈತ್ಯ' ರನ್ನು ಬಗ್ಗು ಬಡಿದು ದಕ್ಷಿಣ ಆಫ್ರಿಕಾ 'ಹರಿಣ' ಗಳು ವಿಜಯೋತ್ಸವ ಆಚರಿಸಿದ್ದಲ್ಲದೆ ಹಲವು ದಾಖಲೆಗಳನ್ನು ಪಕ್ಕಕ್ಕೆ ಸರಿಸಿದರು.
ಸಿಡ್ನಿ ಕ್ರಿಕೆಟ್ ಮೈದಾನ(ಎಸ್ ಸಿಜಿ) ದಲ್ಲಿ ವಿಂಡೀಸ್ ಬೌಲರ್ ಗಳು ಬೌಲಿಂಗ್ ಎಬಿಸಿಡಿ ಮರೆಯುವಂತೆ ಮಾಡಿದ ಎಬಿಡಿ ಅತ್ಯಂತ ತ್ವರಿತ ಗತಿಯಲ್ಲಿ 150ರನ್ ಹೊಡೆದ ದಾಖಲೆ ಬರೆದರು. ತ್ವರಿತಗತಿಯ ಶತಕ ದಾಖಲೆ 2 ಎಸೆತಗಳಲ್ಲಿ ಮಿಸ್ ಮಾಡಿಕೊಂಡರು.
31 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಡಿ ವಿಲೆಯರ್ಸ್ ಭರ್ಜರಿ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 408/5 ಬೃಹತ್ ಮೊತ್ತ ದಾಖಲಿಸಿತು. ವಿಂಡೀಸ್ ಪೂರ್ತಿ ತಂಡ ಎಬಿಡಿ ದಾಖಲೆಯ ಮೊತ್ತವನ್ನು ದಾಟಲಾಗದೆ 151 ರನ್ನಿಗೆ ಕುಸಿಯಿತು. ಈ ಮೂಲಕ 257ರನ್ ಅಂತರದ ಸೋಲು ಅನುಭವಿಸಿತು. [ಎಬಿಡಿ 'ಅಬ್ಬರ', ವಿಂಡೀಸ್ ಮಣಿಸಿದ ದಕ್ಷಿಣ ಆಫ್ರಿಕಾ]
ವಿಂಡೀಸ್ ವಿರುದ್ಧ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಹಾಗೂ ನಾಯಕ ಎಬಿಡಿ ಮುರಿದ ದಾಖಲೆಗಳು ಇಲ್ಲಿವೆ:
# ಏಕದಿನ ಇತಿಹಾಸದಲ್ಲೇ ತ್ವರಿತಗತಿ 150 ರನ್ (64 ಎಸೆತಗಳು) ಎಬಿ ಡಿವಿಲೆಯರ್ಸ್ (ಹಿಂದಿನ ದಾಖಲೆ ಶೇನ್ ವಾಟ್ಸನ್(ಆಸ್ಟ್ರೇಲಿಯಾ) vs ಬಾಂಗ್ಲಾದೇಶ, 2011(83 ಎಸೆತಗಳು)
# ಎಬಿ ಡಿ ದಾಖಲೆಗಳು ತ್ವರಿತ ಗತಿ 50 (16 ಎಸೆತಗಳು), 100(31), 150 (64).

# 257ರನ್ ಅಂತರದ ಗೆಲುವು-ಅಧಿಕ ಅಂತರದ ಗೆಲುವು: ಭಾರತದ ದಾಖಲೆಗೆ ಸಮ ನಿಂತ ದಕ್ಷಿಣ ಆಫ್ರಿಕಾ. ಭಾರತ ಕೂಡಾ 2007ರಲ್ಲಿ ಬರ್ಮುಡಾ ವಿರುದ್ಧ ಇದೇ ಅಂತರದ ಗೆಲುವು ಸಾಧಿಸಿತ್ತು.
# ವಿಶ್ವಕಪ್ ನಲ್ಲಿ 2ನೇ ತ್ವರಿತ ಗತಿ ಶತಕ ದಾಖಲು- ಎಬಿಡಿ 52ಎಸೆತ, ಕೆವಿನ್ ಓಬ್ರಿಯಾನ್ (ಐರ್ಲೆಂಡ್) vs ಇಂಗ್ಲೆಂಡ್ , ಬೆಂಗಳೂರು 2011-50 ಎಸೆತಗಳು.
# ಆಸ್ಟ್ರೇಲಿಯಾದಲಿ ಅತ್ಯಧಿಕ ಟೀಂ ಸ್ಕೋರ್- ದಕ್ಷಿಣ ಆಫ್ರಿಕಾ 408/5, 50 ಓವರ್ಸ್. ಆಸ್ಟ್ರೇಲಿಯಾದಲ್ಲಿ 400 ಪ್ಲಸ್ ರನ್ ಗಳಿಸಿದ ಮೊದಲ ದೇಶ ದಕ್ಷಿಣ ಆಫ್ರಿಕಾ. [ವಿಶ್ವಕಪ್ ನಲ್ಲಿ ದಾಖಲೆಗಳ ಚೆಂಡಾಡಿದ ಎಬಿಡಿ]
# ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಭಾರತದ ಹೆಸರಿನಲ್ಲೇ ಇದೆ. 413/5 ಭಾರತ vs ಬರ್ಮುಡಾ, 2007.
# ಎಬಿಡಿ ಅವರ 162* ಡಿ ವಿಲೆಯರ್ಸ್ ವಿಶ್ವಕಪ್ ನಲ್ಲಿ ಒಟ್ಟಾರೆ 9ನೇ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವಾಗಿದೆ. ಏಕದಿನ ಕ್ರಿಕೆಟ್ ನಲ್ಲಿ 8ನೇ ಶ್ರೇಷ್ಠ ಪ್ರದರ್ಶನವಾಗಿದೆ.
#ಎಬಿ ಡಿವಿಲೆಯರ್ಸ್ ಅವರು ವಿಶ್ವಕಪ್ ನ ಒಂದೇ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ನಾಯಕ ಎನಿಸಿದ್ದಾರೆ. ಈ ಹಿಂದಿನ ದಾಖಲೆ 1987ರ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ನಾಯಕ ವಿವಿಯನ್ ರಿಚರ್ಡ್ಸ್ 181 vs ಶ್ರೀಲಂಕಾ.
#1 ಓವರ್ ನಲ್ಲಿ 34ರನ್- ಡಿವಿಲೆಯರ್ಸ್ ವೆಸ್ಟ್ ಇಂಡೀಸ್ ನಾಯಕ ಜಾಸನ್ ಹೋಲ್ಡರ್ ಅವರ 48ನೇ ಓವರ್ ನಲ್ಲಿ (4, 6+1ನೋಬಾಲ್, 2, 4+1ನೋಬಾಲ್, 4,4,2,6).ವಿಶ್ವಕಪ್ ಶ್ರೇಷ್ಠ ದಾಖಲೆ: ಹರ್ಷಲ್ ಗಿಬ್ಸ್ 36ರನ್ ದಕ್ಷಿಣ ಆಫ್ರಿಕಾ vs ನೆದರ್ಲೆಂಡ್ಸ್ 2007.

#245.5 ಸ್ಟ್ರೈಕ್ ರೇಟ್-100 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದವರ ಪೈಕಿ ಸ್ಟ್ರೈಕ್ ರೇಟ್ ನಲ್ಲಿ ಎಬಿಡಿ ಮೊದಲಿಗರು.
#ವಿಶ್ವಕಪ್ ನಲ್ಲಿ ಎಬಿಡಿ ಸ್ಟ್ರೈಕ್ ರೇಟ್ ಒಟ್ಟಾರೆ 10ನೇ ಸ್ಥಾನದಲ್ಲಿದೆ. ಜೇಮ್ಸ್ ಫ್ರಾಂಕ್ಲಿನ್(ನ್ಯೂಜಿಲೆಂಡ್) 8 ಎಸೆತಗಳಲ್ಲಿ 31ರನ್ vs 2011-387.50 ಸ್ಟ್ರೈಕ್ ರೇಟ್.
#ಹೋಲ್ಡರ್ 10 ಓವರ್ ಗಳಲ್ಲಿ 104ರನ್. ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಕಳಪೆ ಬೌಲಿಂಗ್ ಸ್ಪೆಲ್(10ಓವರ್ ಗಳ ಪೈಕಿ) 12 ಓವರ್ ಪದ್ಧತಿ ಇದ್ದಾಗ ನ್ಯೂಜಿಲೆಂಡ್ ನ ಮಾರ್ಟಿನ್ ಸ್ನೆಡೆನ್ 12 ಓವರ್ ಗಳಲ್ಲಿ 1/105 vs ಇಂಗ್ಲೆಂಡ್, 1983)
# ಹೋಲ್ಡರ್ ನೀಡಿದ 104ರನ್ ಏಕದಿನ ಇತಿಹಾಸದಲ್ಲಿ 5ನೇ ಕಳಪೆ ಪ್ರದರ್ಶನವಾಗಿದೆ. (ಅತ್ಯಂತ ಕಳಪೆ ಆಸ್ಟ್ರೇಲಿಯಾದ ಮಿಕ್ ಲೆವಿಸ್ 0/113 vs ದಕ್ಷಿಣ ಆಫ್ರಿಕಾ, 2006)
ಉಳಿದಂತೆ ದಕ್ಷಿಣ ಆಫ್ರಿಕಾ ಫೆ.27ರ ಪಂದ್ಯದ ಕೊನೆ 20 ಓವರ್ ಗಳಲ್ಲಿ 261ರನ್ ಗಳಿಸಿತು. ಕೊನೆ 10 ಓವರ್ ಗಳಲ್ಲಿ 150. ಹೋಲ್ಡರ್ ಕೊನೆ 2 ಓವರ್ ಗಳಲ್ಲಿ 64ರನ್ ಬಂದಿತು.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications