ಸೋಲಿನ ಸರಪಳಿ ಕಳಚಲು ಪಾಕ್ ಸಾಹಸ: ಬಲಿಷ್ಠ ದ. ಆಫ್ರಿಕಾಗೆ ಸವಾಲಿನ ಗುರಿ ನೀಡಿದ ಬಾಬರ್ ಪಡೆ
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೋರಾಟದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯ ಹೊರತಾಗಿಯೂ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಆಟಗಾರರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ 270 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾಗೆ ಸವಾಲಿನ ಗುರಿ ನಿಗದಿಪಡಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲಿಗೆ ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿತು. ಆರಂಭಿಕ ಆಟಗಾರರನ್ನು ಶೀಘ್ರದಲ್ಲಿಯೇ ಕಳೆದುಕೊಂಡ ಪಾಕ್ ಮತ್ತೆ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಬಾಬರ್ ಹಾಗೂ ರಿಜ್ವಾನ್ 48 ರನ್‌ಗಳ ಜೊತೆಯಾಟ ನೀಡಿದರು. ನಂತ ಇಫ್ತಿಕಾರ್ ಅಹ್ಮದ್ ಕೂಡ ಅವರಿಗೆ ಮತ್ತೊಂದು ಸಣ್ಣ ಜೊತೆಯಾಟದಲ್ಲಿ ನೆರವಾದರು. ಈ ಮೂಲಕ ಬಾಬರ್ ಅಜಂ ಈ ಪಂದ್ಯದಲ್ಲಿಯೂ ಅರ್ಧ ಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು.

ಆದರೆ ಪಾಕ್ ತಂಡಕ್ಕೆ ಬಲ ತುಂಬಿದ್ದು ಸೌದ್ ಶಕೀಲ್ ಹಾಗೂ ಶದಬ್ ಖಾನ್ ಅವರ ಜೊತೆಯಾಟ. 6ನೇ ವಿಕೆಟ್‌ಗೆ ಈ ಜೋಡಿ 84 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಅದ್ಭುತವಾದ ಚೇತರಿಕೆ ನೀಡಿದರು. ಶದಬ್ ಖಾನ್ 43 ರನ್‌ಗಳ ಕೊಡುಗೆ ನೀಡಿದರೆ ಸೌದ್ ಶಕೀಲ್ 52 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ನಂತರ ಮೊಹಮ್ಮದ್ ಸವಾಜ್ ಕೂಡ 24 ರನ್‌ಗಳ ಕೊಡುಗವೆ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ 270 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಫಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಹಾರಿಸ್ ರೌಫ್
ಬೆಂಚ್: ಉಸಾಮಾ ಮಿರ್, ಹಸನ್ ಅಲಿ, ಫಖರ್ ಜಮಾನ್, ಅಘಾ ಸಲ್ಮಾನ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಲುಂಗಿ ಎನ್ಗಿಡಿ
ಬೆಂಚ್: ರೀಜಾ ಹೆಂಡ್ರಿಕ್ಸ್, ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್, ಆಂಡಿಲೆ ಫೆಹ್ಲುಕ್ವಾಯೊ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications